ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರು ಕಾರು ಖರೀದಿಸುವಾಗ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕಾರು ಖರೀದಿಸುವಾಗ ಸುರಕ್ಷತೆಯು ಜನರಿಗೆ ಪ್ರಮುಖ ವಿಷಯ. ಹೀಗಾಗಿಯೇ ಕಾರು ತಯಾರಕ ಕಂಪನಿಗಳು ಕೂಡ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸುತ್ತಿವೆ. ಇದೀಗ ಮೊದಲಿಗಿಂತ ಹೆಚ್ಚು ಸುರಕ್ಷಿತ ಕಾರುಗಳನ್ನು ತಯಾರಿಸಲು ಪ್ರಯತ್ನಿಸಲಾಗುತ್ತಿದೆ. ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ ಉತ್ತಮ ರೇಟಿಂಗ್‌ ಪಡೆದಿರುವ ಭಾರತದಲ್ಲಿ ಮಾರಾಟವಾದ ಟಾಪ್ 5 ಎಸ್‌ಯುವಿಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

1. VW ಟೈಗುನ್ ಮತ್ತು ಸ್ಕೋಡಾ ಕುಶಾಕ್


ಭಾರತದಲ್ಲಿ ತಯಾರಾದ VW ಟೈಗುನ್ ಮತ್ತು ಸ್ಕೋಡಾ ಕುಶಾಕ್ ಎರಡೂ ಇದೀಗ ಸುರಕ್ಷಿತ ಮೇಡ್-ಇನ್-ಇಂಡಿಯಾ SUVಗಳಾಗಿವೆ. ಎರಡೂ MQB AO IN ಪ್ಲಾಟ್‌ಫಾರ್ಮ್ ಆಧರಿಸಿವೆ. GNCAP (ಗ್ಲೋಬಲ್ NCAP) ಎರಡೂ ಕ್ರ್ಯಾಶ್‌ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ (ವಯಸ್ಕರು ಮತ್ತು ಮಕ್ಕಳಿಗಾಗಿ) ನೀಡಿದೆ.


ಇದನ್ನೂ ಓದಿ: ಇಪಿಎಫ್ಒ ಚಂದಾದಾರರಿಗೆ ಜಾಕ್‌ಪಾಟ್ !ಬಡ್ಡಿ ದರದಲ್ಲಿ ಏರಿಕೆ


2. ಟಾಟಾ ಮೋಟಾರ್ಸ್‌ನ ಟಾಟಾ ಪಂಚ್


ಮೈಕ್ರೋ SUV ಟಾಟಾ ಪಂಚ್ ಸಹ ದೇಶದ ಸುರಕ್ಷಿತ ಕಾರುಗಳಲ್ಲಿ ಮುಂಚೂಣಿಯಲ್ಲಿದೆ. ಇದು ದೇಶದ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿಯಲ್ಲಿಯೂ ಸ್ಥಾನ ಪಡೆದಿವೆ. ಟಾಟಾ ಪಂಚ್ ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರಿಗೆ 5 ಸ್ಟಾರ್ ಮತ್ತು ಮಕ್ಕಳ ಸುರಕ್ಷತೆಯ ರೇಟಿಂಗ್‌ಗಾಗಿ 4 ಸ್ಟಾರ್‌ಗಳನ್ನು ಪಡೆದುಕೊಂಡಿದೆ.


3. ಮಹೀಂದ್ರಾ ಎಕ್ಸ್‌ಯುವಿ300


ಮಹೀಂದ್ರಾ ಎಕ್ಸ್‌ಯುವಿ300 ಅನ್ನು ಭಾರತದ ಸುರಕ್ಷಿತ ಎಸ್‌ಯುವಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕರಿಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳಿಗೆ 4 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ.


4. ಮಹೀಂದ್ರಾ XUV700


ಮಹೀಂದ್ರಾ XUV700 ಸಹ ಈ ಪಟ್ಟಿಯಲ್ಲಿದೆ. ಇದು ಸುಮಾರು ಸುರಕ್ಷಿತ SUVಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ವಯಸ್ಕರಿಗೆ 5 ಸ್ಟಾರ್ ಮತ್ತು ಮಕ್ಕಳಿಗೆ 4 ಸ್ಟಾರ್ ರೇಟಿಂಗ್ ನೀಡಿದೆ.


ಇದನ್ನೂ ಓದಿ: ಪ್ಯಾನ್ - ಆಧಾರ್ ಲಿಂಕ್ ಮಾಡುವ ಡೆಡ್ ಲೈನ್ ವಿಸ್ತರಿಸಿದ ಸರ್ಕಾರ


5. ಟಾಟಾ ನೆಕ್ಸಾನ್


ಟಾಟಾ ನೆಕ್ಸಾನ್ ಕ್ರ್ಯಾಶ್ ಟೆಸ್ಟ್‌ನಲ್ಲಿ ಗ್ಲೋಬಲ್ ಎನ್‌ಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಇದು ಗ್ಲೋಬಲ್ NCAP ನಿಂದ 5-ಸ್ಟಾರ್ ರೇಟಿಂಗ್ ಪಡೆದ ಮೊದಲ ಮೇಡ್-ಇನ್-ಇಂಡಿಯಾ SUV ಅಥವಾ ಕಾರಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.