ಇಪಿಎಫ್ಒ ಚಂದಾದಾರರಿಗೆ ಜಾಕ್‌ಪಾಟ್ !ಬಡ್ಡಿ ದರದಲ್ಲಿ ಏರಿಕೆ

EPF Interest Rate: ಇಪಿಎಫ್‌ಒ ಮಂಡಳಿ ಸಿಬಿಟಿ ಬಡ್ಡಿ ದರವನ್ನು ಶೇ.8.10ರಿಂದ ಶೇ.8.15ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈಗ ಪಿಎಫ್ ಹಣದ ಮೇಲೆ ಹೆಚ್ಚಿನ ಲಾಭ ಪಡೆಯುವುದು ಸಾಧ್ಯವಾಗುತ್ತದೆ.   

Written by - Ranjitha R K | Last Updated : Mar 28, 2023, 12:09 PM IST
  • ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರ ಹೆಚ್ಚಳ
  • ಶೇ.8.10ರಿಂದ ಶೇ.8.15ಕ್ಕೆ ಏರಿಕೆ
  • ಕಳೆದ ವರ್ಷ ಬಡ್ಡಿ ದರ ಕಡಿಮೆಯಾಗಿತ್ತು
ಇಪಿಎಫ್ಒ ಚಂದಾದಾರರಿಗೆ ಜಾಕ್‌ಪಾಟ್ !ಬಡ್ಡಿ ದರದಲ್ಲಿ ಏರಿಕೆ   title=

EPF Interest Rate : ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ಇಪಿಎಫ್‌ಒ ನಿರ್ಧರಿಸಿದೆ. ಇಪಿಎಫ್‌ಒ ಮಂಡಳಿ ಸಿಬಿಟಿ ಬಡ್ಡಿ ದರವನ್ನು ಶೇ.8.10ರಿಂದ ಶೇ.8.15ಕ್ಕೆ ಹೆಚ್ಚಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ 2022-23ರ ಹಣಕಾಸು ವರ್ಷಕ್ಕೆ 8.15% ಬಡ್ಡಿ ದರಗಳನ್ನು ನಿಗದಿಪಡಿಸಿದೆ. ಅಂದರೆ, ಈಗ ಪಿಎಫ್ ಹಣದ ಮೇಲೆ ಹೆಚ್ಚಿನ ಲಾಭ ಪಡೆಯುವುದು ಸಾಧ್ಯವಾಗುತ್ತದೆ. ಆದರೂ 2018-19 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಡ್ಡಿ ದರ ಕಡಿಮೆಯಾಗಿದೆ. 2018-19 ರ ಆರ್ಥಿಕ ವರ್ಷದಲ್ಲಿ, ಇಪಿಎಫ್ ಚಂದಾದಾರರಿಗೆ  8.55% ದರದಲ್ಲಿ ಬಡ್ಡಿಯನ್ನು  ಪಾವತಿಸಲಾಗುತ್ತಿತ್ತು. 

ಕಳೆದ ವರ್ಷ ಬಡ್ಡಿ ದರ ಕಡಿಮೆಯಾಗಿತ್ತು :
ಕಳೆದ ಆರ್ಥಿಕ ವರ್ಷದಲ್ಲಿ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ನೀಡಲು ಸರಕಾರ ನಿರ್ಧರಿಸಿತ್ತು. 2021-22 ರ ಸಾಲಿನಲ್ಲಿ  8.1% ಬಡ್ಡಿಯನ್ನು ನಿಗದಿಪಡಿಸಲಾಗಿತ್ತು. 1977-78ರಲ್ಲಿ ಬಡ್ಡಿ ದರ ಶೇ.8ರಷ್ಟಿತ್ತು. 2018-19ನೇ ಹಣಕಾಸು ವರ್ಷದಲ್ಲಿ 8.65%, 2017-18ರಲ್ಲಿ 8.55%, 2016-17ರಲ್ಲಿ 8.65% ಮತ್ತು 2015-16ನೇ ಹಣಕಾಸು ವರ್ಷದಲ್ಲಿ 8.8% ಬಡ್ಡಿಯನ್ನು ನೀಡಲಾಗುತ್ತಿತ್ತು. 

ಇದನ್ನೂ ಓದಿ : Gold Price : ಮತ್ತೆ ದುಬಾರಿಯಾಯ್ತು ಚಿನ್ನ : ಇಲ್ಲಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ

EPFO ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತದೆ? :
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭವಿಷ್ಯ ನಿಧಿ ಖಾತೆಗಳಲ್ಲಿ ಠೇವಣಿ ಮಾಡಿದ ಹಣವನ್ನು ಬೇರೆ ಬೇರೆ ಸ್ಥಳಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಹೂಡಿಕೆಯಿಂದ ಬಂದ ಗಳಿಕೆಯ ಒಂದು ಭಾಗವನ್ನು ಬಡ್ಡಿಯ ರೂಪದಲ್ಲಿ ನೀಡಲಾಗುತ್ತದೆ. EPFO ಒಟ್ಟು ಠೇವಣಿಗಳ 85% ಅನ್ನು ಸಾಲದ ಆಯ್ಕೆಗಳಲ್ಲಿ ಹೂಡಿಕೆ ಮಾಡುತ್ತದೆ. ಉಳಿದ 15% ಅನ್ನು ಇಟಿಎಫ್‌ಗಳಲ್ಲಿ (ನಿಫ್ಟಿ ಮತ್ತು ಸೆನ್ಸೆಕ್ಸ್) ಹೂಡಿಕೆ ಮಾಡಲಾಗುತ್ತದೆ. ಸಾಲ ಮತ್ತು ಈಕ್ವಿಟಿಯಿಂದ ಬಂದ ಗಳಿಕೆಯ ಆಧಾರದ ಮೇಲೆ ಪಿಎಫ್ ಬಡ್ಡಿಯನ್ನು ನಿರ್ಧರಿಸಲಾಗುತ್ತದೆ.

ಪಿಎಫ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿ :
ನಿಮ್ಮ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಿಮ್ಮ ಪಿಎಫ್ ಖಾತೆಯ ಪಾಸ್‌ಬುಕ್ ಪರಿಶೀಲಿಸಬಹುದು. ಇದಕ್ಕಾಗಿ ನೀವು EPFO ​​ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ ನೀವು 'EPFOHO UAN ENG' ಎಂಬ ಸಂದೇಶವನ್ನು 7738299899 ಗೆ ಕಳುಹಿಸಬಹುದು. ಅಲ್ಲದೆ 9966044425ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಕೂಡಾ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಲ್ಲದೆ, UMANG ಅಪ್ಲಿಕೇಶನ್ ಮೂಲಕ PF ಖಾತೆಯನ್ನು ಸಹ ಪ್ರವೇಶಿಸಬಹುದು.

ಇದನ್ನೂ ಓದಿ : Arecanut today price: ಯಾವ ಮಾರುಕಟ್ಟೆಯಲ್ಲಿ ಹೇಗಿದೆ ಅಡಿಕೆ ಧಾರಣೆ?

ಆನ್‌ಲೈನ್‌ನಲ್ಲಿ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಿ :

ಹಂತ 1-
epfindia.gov.in ನಲ್ಲಿ EPFO ​​ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ .

ಹಂತ 2-
‘Our Services’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ 'For Employees'ಆಯ್ಕೆಯನ್ನು ಆರಿಸಿ.

ಹಂತ 3-
ಹೊಸ ಪುಟ ತೆರೆದಾಗ, ನೀವು 'Member Passbook'  ಅನ್ನು ಕ್ಲಿಕ್ ಮಾಡಬೇಕು. ಇಲ್ಲಿ ನೀವು ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು.

ಹಂತ 4-
ಇದರ ನಂತರ ನಿಮ್ಮ ಪಾಸ್‌ಬುಕ್ ತೆರೆಯುತ್ತದೆ. ಇದರಲ್ಲಿ, ನಿಮ್ಮ ಉದ್ಯೋಗದಾತ ಮತ್ತು ನಿಮ್ಮ ಕಡೆಯಿಂದ ಎಷ್ಟು ಕೊಡುಗೆ ನೀಡಲಾಗಿದೆ ಮತ್ತು ಅದರ ಮೇಲೆ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗಿದೆ ಎಂಬುದನ್ನು  ನಮೂದಿಸಲಾಗಿರುತ್ತದೆ. EPFO​​ನಿಂದ ಬಡ್ಡಿ ಕ್ರೆಡಿಟ್ ಮಾಡಿದ್ದರೆ, ಅದು ಇಲ್ಲಿ ಕಾಣಿಸುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News