Salary Hike: ವೇತನ ಹೆಚ್ಚಳದ ಸುಗ್ಗಿ `ಅಪ್ರೆಸಲ್` ಬಂದಾಗಿದೆ, ಯಾರ ವೇತನದಲ್ಲಿ ಎಷ್ಟು ಹೆಚ್ಚಳ? ಸಮೀಕ್ಷೆ ಏನು ಹೇಳುತ್ತದೆ?
Performance Appraisl: ನೌಕರರ ಕೆಲಸದ ಮೌಲ್ಯಮಾಪನ ಋತು ಈಗಾಗಲೇ ಆರಂಭಗೊಂಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಭಾರತೀಯರ ವೇತನ ಹೆಚ್ಚಳದ ಅಂದಾಜು ಶೇ.10ರ ವರೆಗೂ ಇರಬಹುದು ಎಂದು ಈ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
Performance Appraisl Month: ನೀವು ನೌಕರವರ್ಗಕ್ಕೆ ಸೇರಿದವರಾಗಿದ್ದಾರೆ, ಈ ಸುದ್ದಿ ನಿಮ್ಮ ಮುಖದಲ್ಲಿ ನಗು ತರಲಿದೆ. ಮುಂದಿನ ತಿಂಗಳು, ನಿಮ್ಮ ಖಾತೆಯಲ್ಲಿನ ಸಂಬಳವು ಹಿಂದಿನದಕ್ಕೆ ಹೋಲಿಸಿದರೆ ಹೆಚ್ಚಾಗಿರುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ನಿಮ್ಮ ಕಂಪನಿಯು ವೇತನ ಹೆಚ್ಚಳ ಅಥವಾ ಮೌಲ್ಯಮಾಪನವನ್ನು ಮಾಡಿದರೆ, ಮುಂದಿನ ತಿಂಗಳಿನಿಂದ ನೀವು ಹೆಚ್ಚಿನ ವೇತನವನ್ನು ಪಡೆಯುವಿರಿ. ಮೌಲ್ಯಮಾಪನ ಋತುವಿನ ದೃಷ್ಟಿಯಿಂದ ಈ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಭಾರತೀಯರ ಅಂದಾಜು ವೇತನ ಶೇ.10ರವರೆಗೂ ಹೆಚ್ಚಾಗಬಹುದು ಎಂದು ಈ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಸಮೀಕ್ಷೆಯ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ ನೌಕರರು ಶೇ.10 ರಷ್ಟು ಗರಿಷ್ಠ ಮೌಲ್ಯಮಾಪನವನ್ನು ಕಾಣಬಹುದು ಎನ್ನಲಾಗಿದೆ.
ಸಮೀಕ್ಷೆಯಲ್ಲಿ 700 ಕಂಪನಿಗಳು ಭಾಗಿ
2022 ರಲ್ಲಿ, ನಿಜವಾದ ವೇತನ ಹೆಚ್ಚಳವು ಶೇಕಡಾ 9.8 ರಷ್ಟಿತ್ತು. ಗ್ಲೋಬಲ್ ಅಡ್ವೈಸರಿ ಬ್ರೋಕಿಂಗ್ ಮತ್ತು ಸೊಲ್ಯೂಷನ್ಸ್ ಕಂಪನಿ WTW ತನ್ನ ಇತ್ತೀಚಿನ ವೇತನ ಬಜೆಟ್ ಯೋಜನೆ ಸಮೀಕ್ಷೆಯಲ್ಲಿ ಈ ಮಾಹಿತಿಯನ್ನು ನೀಡಿದೆ. ಈ ಸಮೀಕ್ಷೆಯನ್ನು 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ನಡೆಸಲಾಯಿತು. ಇದಲ್ಲದೇ 700 ಕಂಪನಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವು.
ಈ ವರ್ಷ, ಚೀನಾದಲ್ಲಿ ನೌಕರರು ಶೇಕಡಾ 6 ರಷ್ಟು ವೇತನ ಹೆಚ್ಚಳವನ್ನು ಕಾಣಬಹುದು. ಇದಲ್ಲದೆ, ವಿಯೆಟ್ನಾಂನಲ್ಲಿ ಶೇ.8 ರಷ್ಟು, ಇಂಡೋನೇಷ್ಯಾದಲ್ಲಿ ಶೇ.7 ರಷ್ಟು, ಹಾಂಗ್ ಕಾಂಗ್ನಲ್ಲಿ ಶೇ.4 ರಷ್ಟು ಮತ್ತು ಸಿಂಗಾಪುರದಲ್ಲಿ ಶೇ.4 ರಷ್ಟು ವೇತನ ಹೆಚ್ಚಳವನ್ನು ನೌಕರರರು ಕಾಣಬಹುದು ಎಂದು ಸಮೀಕ್ಷೆ ತನ್ನ ಅಂದಾಜು ವ್ಯಕ್ತಪಡಿಸಿದೆ.
ಇದನ್ನೂ ಓದಿ-
ಯಾವ ವಲಯದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ?
ವರದಿಯ ಪ್ರಕಾರ, ಮುಂದಿನ 12 ತಿಂಗಳಲ್ಲಿ ನೇಮಕಾತಿಗಳಿಗೆ ಹೊಸ ಉದ್ಯೋಗಗಳು ಸೇರ್ಪಡೆಯಾಗಲಿವೆ. ಇವುಗಳಲ್ಲಿ ಹೆಚ್ಚಿನವು ಐಟಿ ಅಂದರೆ ಮಾಹಿತಿ ತಂತ್ರಜ್ಞಾನ (ಶೇ. 61.1) ಕ್ಷೇತ್ರದ ಉದ್ಯೋಗಗಳಾಗಿರಲಿವೆ ಎನ್ನಲಾಗಿದೆ. ಇದಲ್ಲದೇ ಇಂಜಿನಿಯರಿಂಗ್ ನಲ್ಲಿ ಶೇ.54.4, ಸೇಲ್ಸ್ ನಲ್ಲಿ ಶೇ.38.9, ತಾಂತ್ರಿಕವಾಗಿ ನುರಿತ ವ್ಯಾಪಾರದಲ್ಲಿ ಶೇ.35.4 ಮತ್ತು ಹಣಕಾಸು ಕ್ಷೇತ್ರದಲ್ಲಿ ಶೇ.11.9ರಷ್ಟು ಉದ್ಯೋಗಗಳ ಸೃಷ್ಟಿಯನ್ನು ನೋಡಬಹುದಾಗಿದೆ.
ಇದನ್ನೂ ಓದಿ-ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ!
ಈ ಕುರಿತು ಮಾತನಾಡಿರುವ ಡಬ್ಲ್ಯುಟಿಡಬ್ಲ್ಯು ಇಂಡಿಯಾದ ವರ್ಕ್ ಅಂಡ್ ರಿವಾರ್ಡ್ಸ್ ಕನ್ಸಲ್ಟಿಂಗ್ ಲೀಡರ್ ರಾಜುಲ್ ಮಾಥುರ್, ಈ ವರ್ಷ ಕಂಪನಿಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಮತ್ತು ವ್ಯಾಪಾರ ಅವಕಾಶಗಳ ಹೆಚ್ಚಳದಿಂದಾಗಿ ವೇತನ ಹೆಚ್ಚಳದತ್ತ ಗಮನ ಹರಿಸುತ್ತವೆ ಎಂದು ಹೇಳಿದ್ದಾರೆ. ಇದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಂಕ್ರಾಮಿಕ ರೋಗದ ನಂತರ, ವ್ಯಾಪಾರ ತಂತ್ರಗಳು ಹೆಚ್ಚಿವೆ, ಇದರಿಂದಾಗಿ ಉದ್ಯೋಗಿಗಳನ್ನು ಸಹ ಮರು ಲೆಕ್ಕಾಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-Ola ಪಾರುಪತ್ಯಕ್ಕೆ ಬ್ರೇಕ್ ಹಾಕಲು ಬಂತು 'ಹಮಾರಾ ಬಜಾಜ್' ಚೇತಕ್ ಇವಿ, ರೇಂಜ್ ಎಷ್ಟು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.