ಇಂದಿನಿಂದ ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಪ್ರಾರಂಭ ; ಬುಕ್ ಮಾಡುವುದು ಹೇಗೆ ತಿಳಿಯಿರಿ
ಈ ಮೊದಲು, ಓಲಾ ಇ-ಸ್ಕೂಟರ್ ಮಾರಾಟವನ್ನು ಸೆಪ್ಟೆಂಬರ್ 8 ರಂದು ಸಂಜೆ 6 ಗಂಟೆಗೆ ಆನ್‌ಲೈನ್‌ನಲ್ಲಿ ಆರಂಭಿಸುವುದಾಗಿ ಹೇಳಲಾಗಿತ್ತು. ಆದರೆ, ಕೆಲವು ತಾಂತ್ರಿಕ ದೋಷಗಳಿಂದಾಗಿ ಅದನ್ನು ಮುಂದೂಡಲಾಯಿತು.
ನವದೆಹಲಿ : ದೀರ್ಘ ಕಾಲದ ನೀರಿಕ್ಷೆಯ ನಂತರ, OLA E ಸ್ಕೂಟರ್ ಮಾರಾಟವು ಇಂದಿನಿಂದ ಅಂದರೆ ಬುಧವಾರದಿಂದ ಆರಂಭವಾಗಿದೆ. ಓಲಾ ಇ-ಸ್ಕೂಟರ್ (Ola e scooter) ಅನ್ನು ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಉಳಿದ ಮೊತ್ತವನ್ನು ಪಾವತಿಸಿ ಸ್ಕೂಟರ್ ಖರೀದಿಸಬಹುದು.
ಸೆಪ್ಟೆಂಬರ್ 8 ರಂದು ಆರಂಭವಾಗಬೇಕಿದ್ದ ಮಾರಾಟ :
ಈ ಮೊದಲು, ಓಲಾ ಇ-ಸ್ಕೂಟರ್ (Ola e scooter) ಮಾರಾಟವನ್ನು ಸೆಪ್ಟೆಂಬರ್ 8 ರಂದು ಸಂಜೆ 6 ಗಂಟೆಗೆ ಆನ್‌ಲೈನ್‌ನಲ್ಲಿ ಆರಂಭಿಸುವುದಾಗಿ ಹೇಳಲಾಗಿತ್ತು. ಆದರೆ, ಕೆಲವು ತಾಂತ್ರಿಕ ದೋಷಗಳಿಂದಾಗಿ ಅದನ್ನು ಮುಂದೂಡಲಾಯಿತು. ಆದರೂ booking ಆಧಾರದ ಮೇಲೆ ಓಲಾ ಸ್ಕೂಟರ್‌ಗಳ ಮಾರಾಟ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಅಂದರೆ ಈ ಮೊದಲು ಕಾಯ್ದಿರಿಸಿದ (Ola e scooter Booking) ಗ್ರಾಹಕರು ಮೊದಲು ಓಲಾ ಇ-ಸ್ಕೂಟರ್ ಪಡೆಯುತ್ತಾರೆ.
ಇದನ್ನೂ ಓದಿ : ಈ ಯೋಜನೆಯಲ್ಲಿ 417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!
ಬುಕ್ ಮಾಡುವುದು ಹೇಗೆ ?
OLA ಇ-ಎಲೆಕ್ಟ್ರಿಕ್ ವೆಹಿಕಲ್ಸ್ ಟ್ವೀಟ್ ಮಾಡಿದೆ ಮತ್ತು
ಗ್ರಾಹಕರು OLA ದ ಅಧಿಕೃತ ಆಪ್ ಅಥವಾ ವೆಬ್‌ಸೈಟ್‌ನಿಂದ ಹೊಸ ಓಲಾ ಇ-ಸ್ಕೂಟರ್ ಅನ್ನು ಬುಕ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದಕ್ಕಾಗಿ, ಕಂಪನಿಯು ಗ್ರಾಹಕರಿಗೆ ಅಗ್ಗದ EMI ಯೋಜನೆಗಳನ್ನು ನೀಡುತ್ತಿದೆ. EMI 2,999 ರೂಪಾಯಿಯಿಂದ ಆರಂಭವಾಗುತ್ತದೆ.
ಓಲಾ ಇ-ಸ್ಕೂಟರ್ ಆಗಸ್ಟ್ 15 ರಂದು ಬಿಡುಗಡೆ:
ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಅನ್ನು ಆಗಸ್ಟ್ 15, 2021 ರಂದು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿತ್ತು. ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ. ಕಂಪನಿಯು ತನ್ನ ವಿತರಣೆಯನ್ನು 1000 ನಗರ ಮತ್ತು ಪಟ್ಟಣಗಳಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಆರಂಭಿಸಲಿದೆ.
ಇದನ್ನೂ ಓದಿ : ನಿಮ್ಮ ಕಾರು ಅಥವಾ ಬೈಕ್ 2019 ಕ್ಕಿಂತ ಮೊದಲು ಖರೀದಿಸಿದ್ದಾ ? ಹಾಗಿದ್ದರೆ ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮುಗಿಸಿ, ದಂಡ ತಪ್ಪಿಸಿಕೊಳ್ಳಿ
ಓಲಾ ಇ-ಸ್ಕೂಟರ್ ಓಲಾ ಎಸ್ 1 ಬೆಲೆ ರೂ .99,000 ದಿಂದ ಆರಂಭವಾಗುತ್ತದೆ ಮತ್ತು ಓಲಾ ಎಸ್ 1 ಪ್ರೊ (Ola s 1) ಬೆಲೆ ರೂ .1,29,999 ರಿಂದ ಆರಂಭವಾಗುತ್ತದೆ. ಆದರೂ , ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿಯನ್ನು ಒದಗಿಸುವ ರಾಜ್ಯಗಳಲ್ಲಿ, ಇದು ಅನೇಕ ಪೆಟ್ರೋಲ್ ಸ್ಕೂಟರ್‌ಗಳಿಗಿಂತ ಹೆಚ್ಚು ಲಾಭದಾಯಕವಾಗಿರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.