ನವದೆಹಲಿ: ಜನಪ್ರಿಯ ಟ್ಯಾಕ್ಸಿ ಸೇವಾ ಕಂಪೆನಿ ಓಲಾ ಇದೇ ಮೊದಲ ಬಾರಿಗೆ ತನ್ನದೆ ಬ್ರ್ಯಾಂಡ್ನ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ನೂತನ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೂ ಮೊದಲೇ ಸಖತ್ ಸೌಂಡ್ ಮಾಡಿದ್ದ ಓಲಾ ಇ-ಸ್ಕೂಟರ್ ಅನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಬುಕ್ ಮಾಡಿದ್ದರು.
ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿ ಹಲವು ವಿಶೇಷತೆಗಳು ಈ ಸ್ಕೂಟರ್ನಲ್ಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ. ಓಲಾ ಎಲೆಕ್ಟ್ರಿಕ್ S1 ಹಾಗೂ ಓಲಾ ಎಲೆಕ್ಟ್ರಿಕ್ S1 Pro ಎಂಬ 2 ವೇರಿಯೆಂಟ್ ಗಳಲ್ಲಿ ಸ್ಕೂಟರ್ ಲಭ್ಯವಿದೆ. ಸ್ಕೂಟರ್ ನ ಆರಂಭಿಕ ಬೆಲೆ ಕೇವಲ 99,999 ರೂ. ಆಗಿರಲಿದೆ ಎಂದು ಕಂಪನಿ ತಿಳಿಸಿದೆ.
Introducing the Ola S1!
Best performance, best technology and the best design; all that made in India, for the world!Reserve yours at only ₹499!
Know more on https://t.co/Pzo64TQXgl pic.twitter.com/Rznf3WwZVC
— Bhavish Aggarwal (@bhash) August 15, 2021
ಓಲಾ ಎಲೆಕ್ಟ್ರಿಕ್ ಸ್ಕೂಟರ್ 10 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ. ಓಲಾ S1 ಸಾಮಾನ್ಯ ಹೋಮ್ ಸಾಕೆಟ್ ನಿಂದ ಚಾರ್ಜ್ ಮಾಡಲು ಕೇವಲ 6 ಗಂಟೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಲಾ ಫಾಸ್ಟ್ ಚಾರ್ಜರ್ಗಳ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ.50 ಪ್ರತಿಶತದಷ್ಟು ಚಾರ್ಜ್ ಮಾಡಬಹುದಾಗಿದೆ. ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡುತ್ತದೆ. ಅದರಂತೆ ಓಲಾ S2 ಸ್ಕೂಟರ್ 181 ಕಿ.ಮೀ. ಮೈಲೇಜ್ ನೀಡುತ್ತದೆ.
ಇತರ ಇನಷ್ಟು ವೈಶಿಷ್ಟ್ಯಗಳನ್ನು ನೋಡುವುದಾದರೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ S1 ಕ್ರೂಸ್ ಕಂಟ್ರೋಲ್ನೊಂದಿಗೆ ಬರುತ್ತದೆ. ಇದು ಸೆಟ್ ಸ್ಪೀಡ್ ಅನ್ನು ಸರಿಯಾದ ಪ್ರಮಾಣದಲ್ಲಿ ನಿರ್ವಹಿಸುತ್ತದೆ. ಇದು ಹಿಲ್ ಹೋಲ್ಡ್ ಅಸಿಸ್ಟ್ (HSA) ಜೊತೆಗೆ ರಿವರ್ಸ್ ಗೇರ್ ಅನ್ನು ಹೊಂದಿದ್ದು, ಅದು ಸ್ಕೂಟರ್ ಅನ್ನು ಉತ್ತಮವಾಗಿಡಲು ಸಹಕಾರಿಯಾಗಲಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ : Home Lone ಗೆ ಭರ್ಜರಿ ಆಫರ್, ಹೇಗೆ ಅರ್ಜಿ ಸಲ್ಲಿಸಬೇಕು?
ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಅಂತರ್ನಿರ್ಮಿತ ಸ್ಪೀಕರ್ಗಳನ್ನು ಹೊಂದಿದ್ದು, ಇದನ್ನು ಫೋನ್ ಕರೆಗಳ ಜೊತೆಗೆ ಸಂಗೀತವನ್ನು ಆಲಿಸಲು ಬಳಸಬಹುದಾಗಿದೆ. ಇದಲ್ಲದೆ ಸ್ಕೂಟರ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ ಬೃಹತ್ ಟಚ್ ಸ್ಕ್ರೀನ್ ಅನ್ನು ಇರಿಸಲಾಗಿದೆ. ಇದು ಮೂವ್ಓಎಸ್(MoveOS)ನಿಂದ ಶಕ್ತಿಯನ್ನು ಪಡೆಯುತ್ತದೆ ಮತ್ತು ಹಲವು ಡಿಸ್ ಪ್ಲೇ ಥೀಮ್ಗಳನ್ನು ಹೊಂದಿರುತ್ತದೆ.
ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ 99,999 .ರೂ.ಗೆ ಲಭ್ಯವಿರಲಿದೆ. ಅದರಂತೆ ಓಲಾ S1 ಪ್ರೊ ಹೆಚ್ಚಿನ ಸ್ಪೆಸಿಫಿಕೇಶನ್ ವೆರಿಯಂಟ್ ಅನ್ನು ಹೊಂದಿದ್ದು, ಇದರ ಬೆಲೆ ಸುಮಾರು 1,29,999 ರೂ. ಎಂದು ಹೇಳಲಾಗಿದೆ.
ಇದನ್ನೂ ಓದಿ: Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.