ನವದೆಹಲಿ: ಬ್ಯಾಂಕ್‌ಗಳ ಎಫ್‌ಡಿ ದರ(FD Rate)ಗಳು ಕೆಲವು ಸಮಯದಿಂದ ನಿರಂತರವಾಗಿ ಹೆಚ್ಚುತ್ತಿವೆ. ಆದಾಗ್ಯೂ ಬ್ಯಾಂಕ್‌ಗಳ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು(Savings Account Interest Rate) ದೀರ್ಘಕಾಲದವರೆಗೆ ಕಡಿಮೆಯಾಗುತ್ತಿವೆ. ಆದರೆ ಈ ಮಧ್ಯೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಏಪ್ರಿಲ್ 1ರಿಂದ ತನ್ನ ಗ್ರಾಹಕರಿಗೆ ಶೇ.6ರ ದರದಲ್ಲಿ ಬಡ್ಡಿ(IDFC First Bank Interest Rate)ಯನ್ನು ಪಾವತಿಸಲಾಗುವುದು ಎಂದು ಘೋಷಿಸಿದೆ. ಆದಾಗ್ಯೂ ಬ್ಯಾಂಕ್ ವಿವಿಧ ಮೊತ್ತಗಳ ಆಧಾರದ ಮೇಲೆ ಬಡ್ಡಿದರಗಳನ್ನು ನಿಗದಿಪಡಿಸಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಈ ಬ್ಯಾಂಕ್‌ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ(Savings Account Interest)ಗಳು ಶೇ.5 ರಷ್ಟಿದ್ದು, ಅದನ್ನು ಈಗ ಶೇ.6ಕ್ಕೆ ಹೆಚ್ಚಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಬ್ಯಾಂಕ್‌ನಿಂದ ಇರಿಸಿಕೊಳ್ಳುವ ಖಾತೆದಾರರು ಈ ಮೊತ್ತವನ್ನು ಪಡೆಯಲಿದ್ದಾರೆ.


ಇದನ್ನೂ ಓದಿ: Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇತ್ತೀಚಿನ ದರ ತಿಳಿಯಿರಿ


IDFC ಫಸ್ಟ್ ಬ್ಯಾಂಕ್ ಹೊಸ ಬಡ್ಡಿ ದರ


  • ಬ್ಯಾಂಕ್ ಉಳಿತಾಯ ಖಾತೆಯಲ್ಲಿ 1 ಲಕ್ಷದವರೆಗಿನ ಮೊತ್ತಕ್ಕೆ ಶೇ.4ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.

  • 1 ಲಕ್ಷದಿಂದ 10 ಲಕ್ಷ ರೂ.ವರೆಗಿನ ಉಳಿತಾಯ ಖಾತೆಗೆ ಶೇ.4.50ರ ದರದಲ್ಲಿ ಬಡ್ಡಿ ಲಭ್ಯವಿರುತ್ತದೆ.

  • ಅದೇ ರೀತಿ 10 ಲಕ್ಷಕ್ಕಿಂತ ಹೆಚ್ಚು ಆದರೆ 25 ಲಕ್ಷಕ್ಕಿಂತ ಕಡಿಮೆ ಬಡ್ಡಿಯು ಶೇ.5ರ ದರದಲ್ಲಿ ಲಭ್ಯವಿರುತ್ತದೆ.

  • 25 ಲಕ್ಷಕ್ಕಿಂತ ಹೆಚ್ಚಿನ ಆದರೆ 1 ಕೋಟಿಗಿಂತ ಕಡಿಮೆ ಮೊತ್ತವನ್ನು ಉಳಿತಾಯ ಖಾತೆಗಳಲ್ಲಿ ಇರಿಸಿದರೆ ಗ್ರಾಹಕರಿಗೆ ಶೇ.6ರ ದರದಲ್ಲಿ ಬಡ್ಡಿ ಸಿಗುತ್ತದೆ.

  • 1 ಕೋಟಿಗಿಂತ ಹೆಚ್ಚು ಆದರೆ 100 ಕೋಟಿಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಗಳಿಗೆ ಶೇ.5ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.


ಇದನ್ನೂ ಓದಿ: Alert! ಮಾರ್ಚ್ 31 ರೊಳಗೆ ಮರೆಯದೆ ಮಾಡಿ ಮುಗಿಸಿ ಈ 8 ಹಣಕಾಸು ಕೆಲಸಗಳನ್ನು 


ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್‌(RBI)ನ ಸೂಚನೆಗಳ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆ(Savings Account)ಯಲ್ಲಿನ ಪ್ರತಿ ದಿನದ ಕೊನೆಯಲ್ಲಿ ಬಾಕಿಯ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಅದನ್ನು ಮಾಸಿಕ ಆಧಾರದ ಮೇಲೆ ಖಾತೆಗೆ ರವಾನಿಸಲಾಗುತ್ತದೆ. RBIನ ಈ ನಿಯಮಗಳು ಜುಲೈ 1, 2021ರಿಂದ ಅನ್ವಯಿಸುತ್ತವೆ. ಅಲ್ಲದೆ ಪ್ರಗತಿಶೀಲ ಸಮತೋಲನದ ಆಧಾರದ ಮೇಲೆ ಬಡ್ಡಿದರವನ್ನು ನಿರ್ಧರಿಸಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.