Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇತ್ತೀಚಿನ ದರ ತಿಳಿಯಿರಿ

ಗಮನಾರ್ಹವೆಂದರೆ ಕೇವಲ 20 ದಿನಗಳಲ್ಲಿ ಚಿನ್ನದ ಬೆಲೆ 4,087 ರೂ.ನಷ್ಟು ಇಳಿಕೆಯಾಗಿದೆ. ಅದೇ ತಿಂಗಳಲ್ಲಿ ಅಂದರೆ ಮಾರ್ಚ್ ಎರಡನೇ ವಾರದಲ್ಲಿ ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿತ್ತು. 

Written by - Ranjitha R K | Last Updated : Mar 28, 2022, 02:36 PM IST
  • ಕಳೆದ 20 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ
  • ಫ್ಯೂಚರ್ ಟ್ರೇಡಿಂಗ್ ನಲ್ಲಿ ಕುಸಿತ್ ಕಂಡ ಚಿನ್ನದ ಬೆಲೆ
  • 10 ಗ್ರಾಂ ಚಿನ್ನದ ದರದಲ್ಲಿ 155 ರೂ ಇಳಿಕೆ
Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇತ್ತೀಚಿನ ದರ  ತಿಳಿಯಿರಿ  title=
ಕಳೆದ 20 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ (file photo)

ಬೆಂಗಳೂರು : ಕಳೆದ 20 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಎಂಸಿಎಕ್ಸ್‌ನಲ್ಲಿ, ಫ್ಯೂಚರ್ ಟ್ರೇಡಿಂಗ್ ನಲ್ಲಿ 10 ಗ್ರಾಂ ಚಿನ್ನದ ದರವು 9.05 ಗಂಟೆಗೆ 10 ಗ್ರಾಂಗೆ 155 ರೂ.ಯಷ್ಟು ಕುಸಿದಿದೆ (Gold price today) . ಈ ಸುದ್ದಿ ಬರೆಯುವ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 51,513 ರೂ. ಆಗಿರುತ್ತದೆ.  ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಚಿನ್ನ ಮತ್ತು ಬೆಳ್ಳಿಯ ದರ  ಕುಸಿತದೊಂದಿಗೆ ವಹಿವಾಟು ಆರಂಭಿಸಿದವು.

ಬೆಳ್ಳಿಯ ಬೆಲೆಯಲ್ಲಿಯೂ ಕುಸಿತ : 
ಎಂಸಿಎಕ್ಸ್‌ನಲ್ಲಿ ಬೆಳ್ಳಿ ದರವೂ ಇಳಿಮುಖ ಕಂಡಿದೆ (Today Silver rate) . ಬೆಳ್ಳಿಯ ಫ್ಯೂಚರ್ ಟ್ರೇಡಿಂಗ್ ನಲ್ಲಿ ಪ್ರತಿ ಕೆಜಿಗೆ 316 ರೂ. ಕುಸಿತ ಕಂಡಿದ್ದು, 68,520 ರೂ.ಗೆ ಇಳಿದಿದೆ. ಗಮನಾರ್ಹವೆಂದರೆ ಕೇವಲ 20 ದಿನಗಳಲ್ಲಿ ಚಿನ್ನದ ಬೆಲೆ 4,087 ರೂ.ನಷ್ಟು ಇಳಿಕೆಯಾಗಿದೆ (gold Price). ಅದೇ ತಿಂಗಳಲ್ಲಿ ಅಂದರೆ ಮಾರ್ಚ್ ಎರಡನೇ ವಾರದಲ್ಲಿ ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿತ್ತು. 

ಇದನ್ನೂ ಓದಿ : Petrol Diesel Price: 6 ದಿನಗಳಲ್ಲಿ 5 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಇಂದು ಎಷ್ಟು ಹೆಚ್ಚಳ ಗೊತ್ತಾ?

ಜಾಗತಿಕ ಮಾರುಕಟ್ಟೆಯಲ್ಲಿ  ದರ ಏರಿಕೆ :
ಭಾರತೀಯ  ಫ್ಯೂಚರ್  ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ (Gold Silver Rate). ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆಯು 0.28 ಶೇಕಡಾ ಏರಿಕೆಯಾಗಿ ಪ್ರತಿ ಔನ್ಸ್ ಗೆ   1,948.80 ಡಾಲರ್ ಆಗಿದೆ. ಅದೇ ಸಮಯದಲ್ಲಿ, ಸಿಲ್ವರ್ ಸ್ಪಾಟ್ ದರವು 0.70 ಶೇಕಡಾ ಏರಿಕೆಯಾಗಿ  ಪ್ರತಿ ಔನ್ಸ್ ಗೆ 25.44  ಡಾಲರ್ ಆಗಿದೆ.

ನಿಮ್ಮ ನಗರದ ಬೆಲೆಯನ್ನು ಈ ರೀತಿ ಪರಿಶೀಲಿಸಬಹುದು :
ಅಬಕಾರಿ ಸುಂಕ, ರಾಜ್ಯ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ನ ಪಾಲನ್ನು ಹೊಂದಿರುವುದರಿಂದ ಚಿನ್ನದ ಆಭರಣಗಳ ಬೆಲೆ ದೇಶಾದ್ಯಂತ ಬದಲಾಗುತ್ತದೆ. ನಿಮ್ಮ ನಗರದಲ್ಲಿ ಚಿನ್ನದ ಬೆಲೆಯನ್ನು ಪರಿಶೀಲಿಸಲು ನೀವು ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(IBJA) ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ಸಾಕು. ನಿಮ್ಮ ಮೊಬೈಲ್ ಸಂಖ್ಯೆಗೆ ಇತ್ತೀಚಿನ ಚಿನ್ನದ ದರ ಎಷ್ಟು ಎನ್ನುವ ಸಂದೇಶ ಬರುತ್ತದೆ.

ಇದನ್ನೂ ಓದಿ : PM Kisan ರೈತರಿಗೆ ಸಿಹಿ ಸುದ್ದಿ : ಏಪ್ರಿಲ್ ನಲ್ಲಿ ಬರಲಿದೆ 11ನೇ ಕಂತಿನ ಹಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News