ನವದೆಹಲಿ: PPF vs NPS vs SSY Minimum Deposit Money - ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆದಾರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ವಾಸ್ತವದಲ್ಲಿ, ಈ ತೆರಿಗೆ-ಉಳಿತಾಯ ಯೋಜನೆಗಳಲ್ಲಿನ ನಿಮ್ಮ ಖಾತೆ ಸಕ್ರಿಯವಾಗಿದೆಯೇ ಎಂದು ಪರಿಶೀಲಿಸಲು ಖಾತೆದಾರರು ಹಣಕಾಸಿನ ವರ್ಷದಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಅಂದರೆ, ಮಾರ್ಚ್ 31 ರೊಳಗೆ, ನೀವು ಯಾವುದೇ ಸಂದರ್ಭದಲ್ಲಿ ಈ ಖಾತೆಗಳ ಬ್ಯಾಲೆನ್ಸ್ ಅನ್ನು ನವೀಕರಿಸಬೇಕು.
ಇದನ್ನೂ ಓದಿ-PVR ಹಾಗೂ INOXಗಳ ವಿಲೀನ, ಮಂಡಳಿಯಿಂದ ಮಹತ್ವದ ನಿರ್ಧಾರ, ಷೇರುಗಳ ಮೇಲೆ ಏನು ಪ್ರಭಾವ?
ಮಾರ್ಚ್ 31ರ ಮೊದಲು ಪರಿಶೀಲಿಸಿ
ನೀವೂ ಕೂಡ ಖಾತೆಗಳನ್ನು ಹೊಂದಿದ್ದು, ನಿಮ್ಮ ಖಾತೆಯನ್ನು ಪರಿಶೀಲಿಸದಿದ್ದರೆ, ಇಂದೇ ಆ ಕೆಲಸ ಮಾಡಿ. ಪ್ರಸಕ್ತ ಹಣಕಾಸು ವರ್ಷದಲ್ಲಿ ನೀವು ಈ ಖಾತೆಗಳಲ್ಲಿ ಯಾವುದೇ ಹಣವನ್ನು ಠೇವಣಿ ಮಾಡಿರದೆ ಹೋದಲ್ಲಿ, ಮಾರ್ಚ್ 31, 2022 ರೊಳಗೆ ಅಗತ್ಯವಿರುವ ಕನಿಷ್ಠ ಮೊತ್ತವನ್ನು ಖಂಡಿತವಾಗಿ ಅದರಲ್ಲಿ ಹಾಕಿ, ಇಲ್ಲದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗಬಹುದು. ಒಮ್ಮೆ ಈ ನಿಮ್ಮ ಖಾತೆ ನಿಷ್ಕ್ರಿಯಗೊಂಡರೆ, ಅವುಗಳನ್ನು ಮತ್ತೆ ಸಕ್ರಿಯಗೊಳಿಸಲು ನೀವು ದಂಡ ಪಾವತಿಸಬೇಕು.
ಇದನ್ನೂ ಓದಿ-Flipkart ಮೇಲೆ ಬಂಪರ್ ಕೊಡುಗೆ! 43 ಇಂಚಿನ ಡಿಸ್ಪ್ಲೇ ಇರುವ Smart TV ಮೇಲೆ ಜಬರ್ದಸ್ತ್ ರಿಯಾಯ್ತಿ
ಕನಿಷ್ಠ ಕೊಡುಗೆ ಪಾವತಿಸುವುದು ಕಡ್ಡಾಯ
ಪ್ರಸ್ತುತ ಹಣಕಾಸು ವರ್ಷ ಅಂದರೆ 2021-22 ರಲ್ಲಿ ನೀವು ಹೊಸ ಅಥವಾ ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ, ಖಾತೆಯನ್ನು ಸಕ್ರಿಯವಾಗಿರಿಸಲು ಅಗತ್ಯವಿರುವ ಕನಿಷ್ಠ ಕೊಡುಗೆಯನ್ನು ನೀವು ಠೇವಣಿ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಈ ಪ್ರಮುಖ ಯೋಜನೆಗಳಲ್ಲಿ ಯಾವ ಖಾತೆಗೆ ಎಷ್ಟು ಮೊತ್ತ ಎಂಬುದು ಈ ಕೆಳಗಿನಂತಿದೆ.
1. PPF ಕನಿಷ್ಠ ಠೇವಣಿ ಮೊತ್ತ : 500 ರೂ.ಗಳು (ಪಾವತಿಸದೇ ಹೋದಲ್ಲಿ 50 ರೂ. ದಂಡ)
2. NPS (NPS Account Holder) ಕನಿಷ್ಠ ಠೇವಣಿ ಮೊತ್ತ : ಟೀಯರ್ 1 ನಗರಗಳ ಖಾತೆದಾರರಿಗೆ 1000 ರೂ. (ಪಾವತಿಸದೇ ಹೋದಲ್ಲಿ 100 ರೂ.ದಂಡ)
3. SSY ಕನಿಷ್ಠ ಠೇವಣಿ ಮೊತ್ತ : 250 ರೂ.ಗಳು (ಪಾವತಿಸದೇ ಹೋದರೆ 50 ರೂ. ದಂಡ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.