ನವದೆಹಲಿ : ಬರೀ ಐದೇ ಐದು ನಿಮಿಷದಲ್ಲಿ ಸಿಗಲಿದೆ ಸಾಲ..! ಈ ಜಾಹೀರಾತು, ದೂರವಾಣಿ ಮಾತು ನೀವು ನೋಡಿರಬಹುದು, ಕೇಳಿರಬಹುದು. ಏನಿದರ ಅಸಲಿಯತ್ತು..? ಕ್ಲಿಕ್ ಮಾಡಿದಾಕ್ಷಣ ನಿಮ್ಮ ಖಾತೆಗೆ ಸಾಲದ ಹಣ ಬಂದೇ ಬಿಡುತ್ತಾ..? ಅಥವಾ ಯಾರಾದರೂ ನಿಮ್ಮನ್ನು ಬಕ್ರಾ ಮಾಡ್ತಿದ್ದಾರಾ..? ಈ  ಸಂಬಂದ SBIಬ್ಯಾಂಕ್  ಅಲರ್ಟ್ ಮಾಡಿದ್ದು ಯಾಕೆ..?


COMMERCIAL BREAK
SCROLL TO CONTINUE READING

ಒಂದೇ ನಿಮಿಷಕ್ಕೆ ಖಾಲಿಯಾಗುತ್ತೆ ನಿಮ್ಮ ಅಕೌಂಟ್:
SBI ಬ್ಯಾಂಕ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಒಂದು ಸಂದೇಶ ರವಾನಿಸಿದೆ. ಒಂದು ವೇಳೆ ಫಟಾಫಟ್ ಸಾಲದ (Easy Loan)  ಲಿಂಕ್ ಏನಾದರೂ ನೀವು ಒತ್ತಿದರೆ, ಒಂದೇ ನಿಮಿಷದಲ್ಲಿ ನಿಮ್ಮ ಖಾತೆ ಖಾಲಿ ಆಗಿ ಬಿಡಬಹುದು. ಮೋಸಗಾರರು (Fraudster’s)ನಿಮ್ಮ ಖಾತೆಯಿಂದ ಹಣ ಎಗರಿಸಬಹುದು. ಐದೇ ನಿಮಿಷದಲ್ಲಿ 2 ಲಕ್ಷ ಲೋನ್ ಸಿಗಲಿದೆ ಎಂಬ ಮೆಸೆಜ್ (Message) ನಿಮಗೆ ಬಂದರೆ, ಯಾವುದೇ ಕಾರಣದಕ್ಕೆ ಆ ಲಿಂಕ್ ಕ್ಲಿಕ್ ಮಾಡಬೇಡಿ. ಈ  ಎಚ್ಚರಿಕೆ ಕೊಟ್ಟಿದ್ದು SBI.


ಇದನ್ನೂ ಓದಿ : Honda CB 350 RS ಬೈಕ್ ಬುಕಿಂಗ್ ಪ್ರಾರಂಭ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ


ಡಿಜಿಟಲ್ ಯುಗ (Digital Era) ಲಾಭದ ಜೊತೆ ನಷ್ಟವೂ ಇದೆ. ಹತ್ತು ನಿಮಿಷದಲ್ಲಿ ಪೇಪರ್ ವರ್ಕ್ ಮುಗಿಸಿ ಸಾಲ ಪಡೆಯಿರಿ ಎಂಬುದು ಮೋಸದ ಜಾಲ. ನಿಮ್ಮ ಹಣ ಹೊಡೆಯಲು ಮಾಡಿರುವ ಸಂಚು. ಇದರಿಂದ ನಿಮ್ಮ ದುಡಿಮೆಯ ಎಲ್ಲಾ ಹಣ ಪರರ ಪಾಲಾಗಬಹುದು. 


ಸಾಲ ಬೇಕಾದರೆ ಹೀಗೆ ಮಾಡಿ :
ನಿಮಗೆ ಸಾಲ ಬೇಕಾದರೆ online link ಒತ್ತಬೇಡಿ. ನೇರ ಬ್ಯಾಂಕಿಗೆ ಹೋಗಿ. ಸಾಲದ ಬಗ್ಗೆ ತಿಳಿದುಕೊಳ್ಳಿ. ಸರಿಯಾದ ದಾಖಲೆಗಳನ್ನು (Documents) ನೀಡಿ. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ, ಬ್ಯಾಂಕ್ (Bank) ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಿದೆ. ಮನೆಯಲ್ಲಿ ಕುಳಿತೇ ಸಾಲದ ಬಗ್ಗೆ ತಿಳಿದುಕೊಳ್ಳಬಹುದು. ಬ್ಯಾಂಕ್ ಕಸ್ಟಮರ್ ಕಾಲ್ ಸೆಂಟರಿಗೂ ಕರೆ ಮಾಡಿ ವಿಚಾರಿಸಬಹುದು.


ಇದನ್ನೂ ಓದಿ : ಈ ಸಲ ನಿಮಗೆ Kisan Samman ದುಡ್ಡು ಬಂದಿಲ್ಲವೇ..! ಈ ಸುದ್ದಿ ಓದಲೇ ಬೇಕು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.