ಈ ಸಲ ನಿಮಗೆ Kisan Samman ದುಡ್ಡು ಬಂದಿಲ್ಲವೇ..! ಈ ಸುದ್ದಿ ಓದಲೇ ಬೇಕು

 ಮೋದಿ ಸರ್ಕಾರ ಪ್ರತಿ ವರ್ಷ ರೈತರಿಗೆ 6000 ರೂಪಾಯಿ ದುಡ್ಡು ಕಿಸಾನ್ ಸಮ್ಮಾನ್ ರೂಪದಲ್ಲಿ ನೀಡುತ್ತದೆ. ನೀವೂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ ಈ ಸುದ್ದಿ ಓದಲೇ ಬೇಕು. 

Written by - Ranjitha R K | Last Updated : Feb 17, 2021, 10:53 AM IST
  • 50 ಲಕ್ಷ ರೈತರಿಗೆ ಇನ್ನೂ ಸಿಕ್ಕಿಲ್ಲ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ದುಡ್ಡು
  • ಹತ್ತು ಲಕ್ಷ ರೈತರಿಗೆ ನೀಡಲಾಗುತ್ತಿದ್ದ ನೆರವನ್ನು ತಡೆಹಿಡಿಯಲಾಗಿದೆ.
  • ಈ ಸುದ್ದಿ ಓದಿ, ತಪ್ಪು ಸರಿಪಡಿಸುವುದು ಹೇಗೆ ತಿಳಿಯಿರಿ
ಈ ಸಲ ನಿಮಗೆ  Kisan Samman ದುಡ್ಡು ಬಂದಿಲ್ಲವೇ..! ಈ ಸುದ್ದಿ ಓದಲೇ ಬೇಕು title=
ಹತ್ತು ಲಕ್ಷ ರೈತರಿಗೆ ನೀಡಲಾಗುತ್ತಿದ್ದ ನೆರವನ್ನು ತಡೆಹಿಡಿಯಲಾಗಿದೆ. (file photo)

ಬೆಂಗಳೂರು : ಮೋದಿ ಸರ್ಕಾರ ಪ್ರತಿ ವರ್ಷ ರೈತರಿಗೆ 6000 ರೂಪಾಯಿ ದುಡ್ಡು ಕಿಸಾನ್ ಸಮ್ಮಾನ್ ರೂಪದಲ್ಲಿ ನೀಡುತ್ತದೆ. ಆದರೆ, ಈ ಸಲ 50 ಲಕ್ಷ ರೈತರಿಗೆ ಇನ್ನೂ ಕಿಸಾನ್ ಸಮ್ಮಾನ್ ಯೋಜನೆಯ (Kisan Samman) ಏಳನೇ ಕಂತಿನ ದುಡ್ಡು ಮುಟ್ಟಿಲ್ಲ. ನೀವೂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ ಈ ಸುದ್ದಿ ಓದಲೇ ಬೇಕು. 

ಯಾಕೆ ಇನ್ನೂ ದುಡ್ಡು ಬಂದಿಲ್ಲ..?
ಅಂಕಿ ಅಂಶಗಳನ್ನು ನೋಡುವುದಾದರೆ, 50 ಲಕ್ಷ ರೈತರಿಗೆ (Farmers) ವರ್ಗಾಯಿಸಲಾಗಿರುವ ಕಿಸಾನ್ ಸಮ್ಮಾನ್  ನಿಧಿಯ (Kisan Samman Nidhi) ಏಳನೇ ಕಂತಿನ ದುಡ್ಡು ಟ್ರಾನ್ಸ್ಫಾರ್ ವಿಫಲವಾಗಿದೆ.   ಇನ್ನು 10 ಲಕ್ಷ ಖಾತೆಗಳಿಗೆ ಸೇರಬೇಕಾಗಿದ್ದ ದುಡ್ಡನ್ನು ತಡೆ ಹಿಡಿಯಲಾಗಿದೆ. 
ಸರಿಯಾದ ಮಾಹಿತಿ ನೀಡದ ಕಾರಣ ದುಡ್ಡು ವರ್ಗಾವಣೆ ಆಗಿಲ್ಲ. ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳು ರೈತ ನೋಂದಣಿ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಬೇಕು. ಹೀಗಿದ್ದಾಗ ವೆರಿಫಿಕೇಶನ್ (verification)ಮಾಡುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ತಪ್ಪು ಮಾಹಿತಿ ನೀಡಿದ್ದಲ್ಲಿ ನಿಮಗೆ ದುಡ್ಡು ವರ್ಗಾವಣೆ ಆಗುವುದಿಲ್ಲ. ಕೆಲವೊಮ್ಮೆ ತಾಂತ್ರಿಕ ಕಾರಣದಿಂದಲೂ ದುಡ್ಡು ವರ್ಗಾವಣೆ ಆಗಿಲ್ಲ. 

ಇದನ್ನೂ ಓದಿ : Fraud in Kisan Samman:ಕಿಸಾನ್ ಸಮ್ಮಾನ್ ಯೋಜನೆಯ 85 ಸಾವಿರ ಖಾತೆಗಳು ಬ್ಲಾಕ್..? ಕಾರಣ ತಿಳಿಯಿರಿ

ತಪ್ಪಾಗಿದ್ದರೆ ಸರಿಮಾಡುವುದು ಹೇಗೆ ತಿಳಿಯಿರಿ :
ಪಿಎಂ-ಕಿಸಾನ್ ಸ್ಕೀಮ್ (Pm Kissan Scheme) ಅಧಿಕೃತ ವೆಬ್ಸೈೆಟಿಗೆ https://pmkisan.gov.in/ ಹೋಗಿ. ಫಾರ್ಮರ್ ಕಾರ್ನರ್ ಗೆ ಹೋಗಿ Edit Aadhaar Details ಅಪ್ಶನ್ ಕ್ಲಿಕ್ ಮಾಡಿ. ಆಧಾರ್ ನಂಬರ್ (Aadhaar) ಹಾಕಿ, Captcha ಕೋಡ್ ಭರ್ತಿ ಮಾಡಿ. ಅಪ್ಲಿಕೇಶನ್ ಮತ್ತು ಆಧಾರ್ ಕಾರ್ಡಿನಲ್ಲಿ ಹೆಸರು ವ್ಯತ್ಯಾಸವಾಗಿದ್ದರೆ, onlineನಲ್ಲೇ ಅದನ್ನು ಸರಿ ಮಾಡಬಹುದು. 

ಆಧಾರ್ ನಂಬರ್, ಅಕೌಂಟ್ ನಂಬರ್ ಮತ್ತು ಮೊಬೈಲ್ ನಂಬರ್ ಭರ್ತಿ ಮಾಡಿದ ಮೇಲೆ ತಪ್ಪುಗಳಿದ್ದರೆ ಸರಿಪಡಿಸಿ. ಇವನ್ನೆಲ್ಲಾ ಮನೆಯಲ್ಲಿ ಕುಳಿತೇ ಮಾಡಬಹುದು. ನಿಮ್ಮ ದುಡ್ಡು ಯಾಕೆ ತಡೆಹಿಡಿಯಲಾಗಿದೆ ಎಂಬ ಮಾಹಿತಿ ಕೂಡಾ ಅಲ್ಲಿ ಲಭ್ಯವಾಗುತ್ತದೆ. ಅದನ್ನೂ ಸರಿಪಡಿಸಬಹುದು. ಇದಕ್ಕಾಗಿ  Helpdesk ನೆರವು ಪಡೆಯಬಹುದು. ಹೆಸರನ್ನು  ಬಿಟ್ಟು ಬೇರೆ ಯಾವುದೇ ದೋಷವಿದ್ದರೆ, ನೀವು ಸ್ಥಳೀಯ ಕೃಷಿ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. 

ಇದನ್ನೂ ಓದಿ : PM Fasal Bima Yojana: ರೈತರಿಗೆ ಸಿಗಲಿದೆ ಬೆಳೆ ವಿಮೆಯ ಗರಿಷ್ಠ ಲಾಭ

ಕಿಸಾನ್ ಸಮ್ಮಾನ್ ನಿಧಿ ಮಾರ್ಗದರ್ಶಿ ಸೂತ್ರ : 
ಮೋದಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿಗಾಗಿ (Kisan Samman) ಒಂದಷ್ಟು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದನ್ನು ರೈತರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿಗೆ ಯಾರು ಅರ್ಹರು ಎಂಬುದನ್ನು ಅದರಲ್ಲಿ ನೀಡಲಾಗಿದೆ.

ಕಿಸಾನ್ ನಿಧಿ ಯಾರಿಗೆ ಸಿಗಲ್ಲ.? ಕೆಳಗಿದೆ  ಅನರ್ಹರ ಪಟ್ಟಿ :
1. ಕೃಷಿ ಕೂಲಿ ಕಾರ್ಮಿಕರಿಗೆ ಈ ಹಣ ಸಿಗಲ್ಲ
2. ಸರ್ಕಾರಿ ನೌಕರರು (Government employees) ಅಥವಾ ನಿವೃತ್ತ ಸರ್ಕಾರಿ ನೌಕರರು
3. ಹಾಲಿ ಅಥವಾ ಮಾಜಿ ಸಂಸದರು, ಶಾಸಕರು, ಸಚಿವರು
4. ನೋಂದಾಯಿತ ವೈದ್ಯರು, ಇಂಜಿನೀಯರ್ಸ್, ವಕೀಲರು, ಚಾರ್ಟಡ್ ಅಕೌಂಟೆಟ್ಸ್
5. ಆದಾಯ ತೆರಿಗೆ ನೀಡುತ್ತಿರುವ ರೈತ ಪರಿವಾರ
6. ಹತ್ತು ಸಾವಿರಕ್ಕೂ ಅಧಿಕ ಪಿಂಚಣಿ ಪಡೆಯುತ್ತಿರುವ ರೈತ ಪರಿವಾರ
7. ತಮ್ಮ ಜಮೀನಿನಲ್ಲಿ ಕೃಷಿ (Agriculture) ಬಿಟ್ಟು ಬೇರೆ ಕೆಲಸ ಮಾಡುತ್ತಿರುವ ರೈತವರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News