ನವದೆಹಲಿ :  PAN-Aadhaar Link : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 31 ಮಾರ್ಚ್ 2022 ರ ಮೊದಲು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ( PAN-Aadhaar Link) ಮಾಡುವಂತೆ ಬ್ಯಾಂಕ್ ತನ್ನ ಖಾತೆದಾರರಿಗೆ ಸೂಚನೆ ನೀಡಿದೆ. ಮಾರ್ಚ್ 31ರೊಳಗೆ ಗ್ರಾಹಕರು, ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್  ಮಾಡದಿದ್ದಲ್ಲಿ ಬ್ಯಾಂಕಿಂಗ್ ಸೇವೆ (Banking service) ಸ್ಥಗಿತಗೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 31ರವರೆಗೆ ಅವಕಾಶ :
'ಯಾವುದೇ ಅಡೆತಡೆಯಿಲ್ಲದೆ, ಬ್ಯಾಂಕಿಂಗ್ ಸೇವೆಯನ್ನು ಮುಂದುವರೆಸಲು, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ (PAN-Aadhaar Link) ಮಾಡುವಂತೆ, ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡಿದೆ. ಮಾರ್ಚ್ 31 ರೊಳಗೆ,  ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬ್ಯಾಂಕ್ (bank) ಹೇಳಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗಲಿದೆ.  ಪ್ಯಾನ್ ನಿಷ್ಕ್ರಿಯಗೊಂಡರೆ, ನಿರ್ದಿಷ್ಟ ವಹಿವಾಟುಗಳನ್ನು ನಡೆಸುವುದು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Komaki Venice: ಭಾರತದಲ್ಲಿ ಬಿಡುಗಡೆ ಆಗಿದೆ ಫುಲ್ ಚಾರ್ಜ್‌ನಲ್ಲಿ 120 ಕಿಮೀವರೆಗೆ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್


ಕರೋನಾ ವೈರಸ್ (Coronavirus) ಸಾಂಕ್ರಾಮಿಕದ ದೃಷ್ಟಿಯಿಂದ, ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ( PAN-Aadhaar Link) ಮಾಡುವ ಗಡುವನ್ನು,  ಸರ್ಕಾರ ಸೆಪ್ಟೆಂಬರ್ 30 2021 ದಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಿದೆ.  


ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಹೇಗೆ ? 
ಮೊದಲನೆಯದ್ದು : 
1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌  https://www.incometaxindiaefiling.gov.in/homeಗೆ  ಹೋಗಿ .
2- ಇಲ್ಲಿ ಎಡಭಾಗದಲ್ಲಿ Link Aadhaar ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.  
3- ಈಗ ಹೊಸ ಪೇಜ್ ತೆರೆಯುತ್ತದೆ. ಅಲ್ಲಿ  ಪ್ಯಾನ್, ಆಧಾರ್ ನಂಬರ್ (Aadhaar) ಮತ್ತು ಆಧಾರ್ ನಲ್ಲಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಿ. 
4 . ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೇವಲ ಜನ್ಮ ವರ್ಷವಿದ್ದರೆ, 'I have only year of birth in aadhaar card' ಎಂಬ ಬಾಕ್ಸ್ ಅನ್ನು ಟಿಕ್ ಮಾಡಿ 
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ OTPಗಾಗಿ ಟಿಕ್ ಮಾಡಿ  
6 ಲಿಂಕ್ ಆಧಾರ್‌ನ ಬಟನ್ ಮೇಲೆ ಕ್ಲಿಕ್ ಮಾಡಿ, 


ಇಷ್ಟು ಮಾಡಿದರೆ PAN ಮತ್ತು ಆಧಾರ್ ಲಿಂಕ್ ಆಗುತ್ತದೆ. 


ಇದನ್ನೂ ಓದಿ :  Ayushman Card: ಆಯುಷ್ಮಾನ್ ಭಾರತ್ ಕಾರ್ಡ್‌ ನಿಂದ ಪಡೆಯಬಹುದು ಈ ಎಲ್ಲಾ ಸೌಲಭ್ಯಗಳನ್ನು , ತಕ್ಷಣ ಡೌನ್ ಲೋಡ್ ಮಾಡಿಕೊಳ್ಳಿ


 ಈ ವಿಧಾನದಿಂದಲೂ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಬಹುದು : 
- ನೀವು SMS ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು 
- ಮೊಬೈಲ್‌ನ ಮೆಸೇಜ್ ಬಾಕ್ಸ್‌ನಲ್ಲಿ,  UIDPAN<12-ಅಂಕಿಯ ಆಧಾರ್><10-ಅಂಕಿಯ PAN> ಟೈಪ್ ಮಾಡಿ . 
- ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿದರೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.