Electric Scooter: ಕೊಮಾಕಿ ತನ್ನ ಐಷಾರಾಮಿ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್‌ಸೈಕಲ್ ಕೊಮಕಿ ರೇಂಜರ್ ಅನ್ನು ನಿನ್ನೆಯಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದೆ . ಇದರೊಂದಿಗೆ ಕಂಪನಿಯು ಸುದೀರ್ಘ ಕಾಯುವಿಕೆಯ ನಂತರ ತನ್ನ ಐದನೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ, ಇದು ವೆನಿಸ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕೊಮಾಕಿ ವೆನಿಸ್ ಅನ್ನು ಆಧುನಿಕ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ಜೊತೆಗೆ ರೆಟ್ರೊ ಸ್ಟೈಲಿಂಗ್‌ನೊಂದಿಗೆ ಪರಿಚಯಿಸಲಾಗಿದೆ. ಈ ಸ್ಕೂಟರ್ ಜನವರಿ 26 ರಿಂದ ದೇಶಾದ್ಯಂತ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ ಎಂದು Komaki ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ನ ಎಕ್ಸ್ ಶೋ ರೂಂ ಬೆಲೆ 1.15 ಲಕ್ಷ ರೂ. ಎಂದು ಹೇಳಲಾಗಿದೆ.
ಇದನ್ನೂ ಓದಿ- Indian Railways : ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಬಹುದು : ರೈಲ್ವೆ ಇಲಾಖೆಯ ಈ ವಿಶೇಷ ನಿಯಮ ತಿಳಿಯಿರಿ!
ಅದ್ಭುತ ಶೈಲಿ ಮತ್ತು ವಿನ್ಯಾಸ:
ಮುಂಭಾಗದಿಂದ ಹಿಂಭಾಗದವರೆಗೂ, ಕೊಮಾಕಿ ವೆನಿಸ್ (Komaki Venice) ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾವನ್ನು ಹೋಲುತ್ತದೆ. ಮುಂದಿನ ಭಾಗದಲ್ಲಿ ಕೋಲ್‌ನ ಲೋಗೋ ಕೂಡ ಪಿಯಾಜಿಯೊದಂತೆಯೇ ಇದೆ. ಇದರೊಂದಿಗೆ, ರೌಂಡ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟರ್ನ್ ಇಂಡಿಕೇಟರ್ ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲೈಟ್, ಮುಂಭಾಗದ ಸ್ಟೋರೇಜ್, ಲೆದರ್‌ನಿಂದ ಆವೃತವಾದ ಇಬ್ಭಾಗಿಸಿದ ಸೀಟುಗಳು ಓಲ್ಡ್ ಸ್ಕೂಲ್ ಲುಕ್ ನೀಡುತ್ತದೆ. ಇದಲ್ಲದೇ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಮತ್ತು ಮ್ಯೂಸಿಕ್ ಸಿಸ್ಟಮ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಡಬಲ್ ಫ್ಲ್ಯಾಷ್, ರಿವರ್ಸ್ ಮೋಡ್, ಪಾರ್ಕಿಂಗ್ ಮೋಡ್ ಮತ್ತು ಸ್ಪೋರ್ಟ್ಸ್ ಮೋಡ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದರಲ್ಲಿ, ಗ್ರಾಹಕರು ಸೆಲ್ಫ್ ಡಯಾಗ್ನಾಸ್ಟಿಕ್ ಟೆಕ್ನಿಕ್, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್ ಮತ್ತು ಪುನರುತ್ಪಾದಕ ಬ್ರೇಕಿಂಗ್ ಅನ್ನು ಸಹ ಪಡೆಯುತ್ತಾರೆ.
ಇದನ್ನೂ ಓದಿ- Budget 2022: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ಈ ಹಣಕ್ಕೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ
ಪ್ರಬಲ ಶ್ರೇಣಿಯೊಂದಿಗೆ 9 ಬಣ್ಣಗಳಲ್ಲಿ ಲಭ್ಯ:
Komaki ವೆನಿಸ್ 9 ಬಣ್ಣಗಳಲ್ಲಿ ಲಭ್ಯವಿದೆ - ಬ್ರೈಟ್ ಆರೆಂಜ್, ಶುದ್ಧ ಬಿಳಿ, ಗೋಲ್ಡ್, ಸ್ಟೀಲ್ ಗ್ರೇ, ಜೆಟ್ ಬ್ಲಾಕ್, ಐಕಾನಿಕ್ ಹಳದಿ ಮತ್ತು ಗ್ರಾನೈಟ್ ಕೆಂಪು. ಇದಲ್ಲದೆ, ಈ ಸ್ಕೂಟರ್ ಅನ್ನು ಮೆಟಾಲಿಕ್ ಬ್ಲೂನ ಎರಡು ವಿಭಿನ್ನ ಛಾಯೆಗಳಲ್ಲಿ ಪರಿಚಯಿಸಲಾಗಿದೆ. ಈ ಸ್ಕೂಟರ್ ಸಾಮಾನ್ಯ 125 ಸಿಸಿ ಸ್ಕೂಟರ್‌ಗಳಂತೆ ಶಕ್ತಿಯುತವಾಗಿದೆ. ಇದು 3 kW-r ಎಲೆಕ್ಟ್ರಿಕ್ ಮೋಟರ್ ಜೊತೆಗೆ 2.9 kW-R ಆಧುನಿಕ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಸಂಪೂರ್ಣ ಚಾರ್ಜ್ ಮಾಡಿದರೆ ಇ-ಸ್ಕೂಟರ್ 120 ಕಿಮೀ ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ವೆನಿಸ್ ಅನ್ನು ಸಿಬಿಎಸ್ ಡ್ಯುಯಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಉತ್ತಮ ಸಸ್ಪೆನ್ಷನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.