Ayushman Card: ಆಯುಷ್ಮಾನ್ ಭಾರತ್ ಕಾರ್ಡ್‌ ನಿಂದ ಪಡೆಯಬಹುದು ಈ ಎಲ್ಲಾ ಸೌಲಭ್ಯಗಳನ್ನು , ತಕ್ಷಣ ಡೌನ್ ಲೋಡ್ ಮಾಡಿಕೊಳ್ಳಿ

Ayushman Card Fraud: ಆಯುಷ್ಮಾನ್ ಭಾರತ್ ಕಾರ್ಡ್‌ ಇದ್ದರೆ ಅನೇಕ ಸೌಲಭ್ಯಗಳನ್ನು  ಪಡೆದುಕೊಳ್ಳಬಹುದು. ಈ  ಕಾರ್ಡ್ ನಲ್ಲಿ ಲಭ್ಯವಿರುವ ಎಲ್ಲಾ ಪ್ರಯೋಜನಗಳು ಸಿಗಬೇಕಾದರೆ, ಈ ಕಾರ್ಡ್ ಅನ್ನು ತಕ್ಷಣ ಡೌನ್ ಲೋಡ್ ಮಾಡಿಕೊಳ್ಳಿ.

Written by - Ranjitha R K | Last Updated : Jan 26, 2022, 01:06 PM IST
  • ಆಯುಷ್ಮಾನ್ ಭಾರತ್ ಕಾರ್ಡ್‌ನಲ್ಲಿ ಲಭ್ಯವಿದೆ ಹಲವು ಸೌಲಭ್ಯಗಳು
  • ಈ ಕಾರ್ಡ್‌ನಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಲಭ್ಯ
  • ಈ ಕಾರ್ಡ್ ಮಾಡುವ ಸುಲಭ ವಿಧಾನವನ್ನು ತಿಳಿಯಿರಿ
Ayushman Card: ಆಯುಷ್ಮಾನ್ ಭಾರತ್ ಕಾರ್ಡ್‌ ನಿಂದ ಪಡೆಯಬಹುದು ಈ ಎಲ್ಲಾ ಸೌಲಭ್ಯಗಳನ್ನು ,  ತಕ್ಷಣ ಡೌನ್ ಲೋಡ್ ಮಾಡಿಕೊಳ್ಳಿ  title=
ಆಯುಷ್ಮಾನ್ ಭಾರತ್ ಕಾರ್ಡ್‌ನಲ್ಲಿ ಲಭ್ಯವಿದೆ ಹಲವು ಸೌಲಭ್ಯಗಳು (file photo)

ನವದೆಹಲಿ : Ayushman Card Fraud: ಆಯುಷ್ಮಾನ್ ಭಾರತ್ ಕಾರ್ಡ್‌ ಇದ್ದರೆ ಅನೇಕ ಸೌಲಭ್ಯಗಳನ್ನು(Ayushman card benefits) ಪಡೆದುಕೊಳ್ಳಬಹುದು. ಈ  ಕಾರ್ಡ್ ನಲ್ಲಿ ಲಭ್ಯವಿರುವ ಎಲ್ಲಾ ಪ್ರಯೋಜನಗಳು ಸಿಗಬೇಕಾದರೆ, ಈ ಕಾರ್ಡ್ ಅನ್ನು ತಕ್ಷಣ ಡೌನ್ ಲೋಡ್ ಮಾಡಿಕೊಳ್ಳಿ. ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ (free health benefits) ಕಲ್ಪಿಸಲು ಕೇಂದ್ರ ಸರ್ಕಾರ, ಆಯುಷ್ಮಾನ್ ಭಾರತ್ ಕಾರ್ಡ್ (Ayushman bharat card) ಆರಂಭಿಸಿತ್ತು. ಈ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯವನ್ನು  ಕಲ್ಪಿಸಲಾಗಿದೆ. ಈ ನಡುವೆ, ಕಳೆದ ಕೆಲವು ದಿನಗಳಲ್ಲಿ, ಆಯುಷ್ಮಾನ್ ಕಾರ್ಡ್‌ನಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ವಂಚಕರು ಬೇರೆಯವರ ಹೆಸರಿನಲ್ಲಿ ಕಾರ್ಡ್ ಮಾಡಿಕೊಂಡು,  ಸೌಲಭ್ಯಗಳ ಲಾಭ ಪಡೆಯುತ್ತಿಬೆಳಕಿಗೆ ಬಂದಿದೆ. 

ನೀವು ಕೂಡಾ  ಈ ರೀತಿಯ ವಂಚನೆಗೆ ಒಳಗಾಗಿದ್ದರೆ, ಕೂಡಲೇ ದೂರು ನೀಡಬೇಕು. ಅಪರಿಚಿತ ವ್ಯಕ್ತಿ, ನಿಮ್ಮ ಹೆಸರಿನಲ್ಲಿ ಲಭ್ಯವಿರುವ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ, ತಕ್ಷಣವೇ ಆಯುಷ್ಮಾನ್ ಕಾರ್ಡ್‌ಗೆ (Ayushman Bharat card) ಸಂಬಂಧಿಸಿದಂತೆ ದೂರು ನೀಡಿ. 

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ , ಡಿಎಯಲ್ಲಿ ಶೇ.3ರಷ್ಟು ಏರಿಕೆ ಘೋಷಿಸಿದ ಸರ್ಕಾರ

ಈ ಸಂಖ್ಯೆಗೆ ದೂರು ನೀಡಿ :
ನಿಮಗೆ ಅಥವಾ ನಿಮ್ಮಲ್ಲಿ ಯಾರಿಗಾದರೂ ಇಂಥಹ ಸಮಸ್ಯೆ (Ayushman Card Fraud) ಎದುರಾಗಿದ್ದರೆ, ಈ ಬಗ್ಗೆ ದೂರು ನೀಡಬಹುದು. ಇಂತಹ ವಂಚನೆ ಪ್ರಕರಣಗಳ ಬಗ್ಗೆ ದೂರು ನೀಡಲು, ಸರ್ಕಾರ ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ. ವಂಚನೆಗೆ ಒಳಗಾಗಿದ್ದವರು ಟೋಲ್ ಫ್ರೀ ಸಂಖ್ಯೆ 180018004444 ಗೆ ಕರೆ ಮಾಡಿ  ದೂರನ್ನು ದಾಖಲಿಸಿಕೊಳ್ಳಬಹುದು. 

ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿ :
- ನೀವು ಸಹ ಆಯುಷ್ಮಾನ್ ಭಾರತ್ ಕಾರ್ಡ್ (Ayushman bharat card download) ಅನ್ನು ಡೌನ್‌ಲೋಡ್ ಮಾಡಬೇಕಾದರೆ https://pmjay.gov.in/ ಗೆ ಹೋಗಿ . 
-ಈಗ ಇಲ್ಲಿ ಲಾಗಿನ್ ಆಗಲು ನಿಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. 
-ಈಗ ತೆರೆಯುವ ಹೊಸ ಪುಟದಲ್ಲಿ ಆಧಾರ್ ಸಂಖ್ಯೆಯನ್ನು (Aadhaar) ನಮೂದಿಸುವ ಮೂಲಕ ಮುಂದುವರಿಯಿರಿ. ಮುಂದಿನ ಪುಟದಲ್ಲಿ ನಿಮ್ಮ ಹೆಬ್ಬೆರಳಿನ ಗುರುತನ್ನು ಪರಿಶೀಲಿಸಬೇಕು. 
- ಈಗ 'ಅಪ್ಪ್ರೋವ್ದ್ ಬೆನೆಫಿಶಿಯರಿ  ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಈಗ ಅಪ್ಪ್ರೋವ್ದ್ ಗೋಲ್ಡನ್ ಕಾರ್ಡ್‌ಗಳ ಪಟ್ಟಿ ಕಾಣಿಸುತ್ತಿದೆ.  
- ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ಮತ್ತು ಕನ್ಫರ್ಮ್ ಪ್ರಿಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
- ಈಗ ನೀವು CSC ವ್ಯಾಲೆಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ಹಾಕಿ.  
- ಈಗ ಇಲ್ಲಿ ಪಿನ್ ನಮೂದಿಸಿ ಮತ್ತು ಹೋಂ ಪೇಜ್ ಗೆ  ಬನ್ನಿ.
- ಡೌನ್‌ಲೋಡ್ ಕಾರ್ಡ್ ಆಯ್ಕೆಯು ಅಭ್ಯರ್ಥಿಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತದೆ. 
- ಇಲ್ಲಿಂದ ನೀವು ನಿಮ್ಮ ಆಯುಷ್ಮಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ : ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News