ನವದೆಹಲಿ : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ತನ್ನ ಗ್ರಾಹಕರನ್ನು ಎಚ್ಚರಿಕೆಯ ಸಂದೇಶ ರವಾನಿಸಿದೆ. ತನ್ನ 40 ಕೋಟಿ ಗ್ರಾಹಕರಿಗೆ ಈ ಎಚ್ಚರಿಕೆಯನ್ನು ನೀಡಿದೆ. ಈ ಕೆಲಸವನ್ನು ಶೀಘ್ರ ಮಾಡದೆ ಹೋದಲ್ಲಿ ಎಲ್ಲಾ ಬ್ಯಾಂಕಿಂಗ್ ಸೇವೆಗಳು (Banking service)ಸ್ಥಗಿತಗೊಳ್ಳಲಿವೆ. ಹಾಗಾಗಿ ನಿಗದಿತ ಸಮಯದೊಳಗೆ ಈ ಕೆಲಸ ಮಾಡಿ ಮುಗಿಸುವಂತೆ ಬ್ಯಾಂಕ್ (Bank) ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. 


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 30 ರವರೆಗೆ ಅವಕಾಶ:
ಎಸ್‌ಬಿಐ (SBI) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತನ್ನ ಗ್ರಾಹಕರಿಗೆ ಈ ಮಾಹಿತಿ ನೀಡಿದೆ. ಯಾವುದೇ ಅಡೆತಡೆ ಗಳಿಲ್ಲದೆ, ಬ್ಯಾಂಕಿಂಗ್ ಸೇವೆ (Banking Service) ಮುಂದುವರಿಸಲು,  ಆದಷ್ಟು ಶೀಘ್ರವಾಗಿ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವಂತೆ (PAN Aadhaar link) ಹೇಳಿದೆ. ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಕೂಡಾ ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ ಮತ್ತು ನಿರ್ದಿಷ್ಟಪಡಿಸಿದ ವಹಿವಾಟು ನಡೆಸಲು ಪ್ಯಾನ್ ಅನ್ನು ಬಳಸುವೂ ಸಾಧ್ಯವಾಗುವುದಿಲ್ಲ. ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ (PAN Aadhaar link) ಮಾಡಬೇಕು.  


Income Tax Return : ತೆರಿಗೆದಾರರಿಗೆ ಸಿಹಿ ಸುದ್ದಿ : IT ರಿಟರ್ನ್ ಸಲ್ಲಿಸುವ ದಿನಾಂಕ ಮತ್ತೆ ವಿಸ್ತರಣೆ 


ಕರೋನಾ ವೈರಸ್ (Coronavirus) ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ತಿಂಗಳು, ಕೇಂದ್ರ ಸರ್ಕಾರವು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಇದಕ್ಕೂ ಮೊದಲು  ಮಾರ್ಚ್ 31ರೊಳಗೆ ಪಾನ್ ಆಧಾರ್ ಲಿಂಕ್ ಮಾಡುವುದು ಅನಿವಾರ್ಯ ಎಂದು ಹೇಳಿತ್ತು.   ನಂತರ ಅದನ್ನು ಜೂನ್ 30ರವರೆಗೆ ವಿಸ್ತರಿಸಲಾಯಿತು. 


ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?


1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ https://www.incometaxindiaefiling.gov.in/home  ಹೋಗಿ 
2- ಇಲ್ಲಿ ಎಡಭಾಗದಲ್ಲಿ Link Aadhaar ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ 
3- ಹೊಸ  ಪುಟ ತೆರೆಯುತ್ತದೆ. ಇಲ್ಲಿ  PAN, AADHAAR ಬಗೆಗಿನ ಮಾಹಿತಿಗಳನ್ನು ಭರ್ತಿ ಮಾಡಬೇಕು.  
4. ನಿಮ್ಮ ಆಧಾರ್ ನಲ್ಲಿ (Aadhaar) ಕೇವಲ ಹುಟ್ಟಿದ ವರ್ಷ ಮಾತ್ರ ನಮೂದಿಸಲಾಗಿದ್ದರೆ, I have only year of birth in aadhaar card'ಬಾಕ್ಸ್ ಟಿಕ್  ಮಾಡಿ. 
5- ಕ್ಯಾಪ್ಚಾ ಕೋಡ್ ಹಾಕಿ ಅಥವಾ ಒಟಿಪಿಗಾಗಿ ಕ್ಲಿಕ್ ಮಾಡಿ.
6 ಲಿಂಕ್ ಆಧಾರ ಬಟನ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಮಾಡಿದರೆ ನಿಮ್ಮ PAN, AADHAAR ಲಿಂಕ್ ಆಗುತ್ತದೆ .


ಇದನ್ನೂ ಓದಿ : Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ


ಇನ್ನು ಎಸ್ಎಂಎಸ್ (SMS) ಮೂಲಕವೂ ಈ ಕೆಲಸವನ್ನು ಮಾಡಬಹುದು . 
- ಮೊಬೈಲ್ ಮೆಸೇಜ್ ಬಾಕ್ಸ್ ನಲ್ಲಿ  UIDPAN<12-digit Aadhaar><10-digit PAN>   ಎಂದು ಟೈಪ್ ಮಾಡಿ,  ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ. ನಿಮ್ಮ PAN, AADHAAR ಲಿಂಕ್ ಆಗುತ್ತದೆ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.