ATM ನಿಂದ ಹರಿದ ನೋಟುಗಳು ಸಿಕ್ಕಿದರೆ ಏನು ಮಾಡಬೇಕು?ಇದನ್ನು ಬದಲಾಯಿಸಿಕೊಳ್ಳುವುದು ಹೇಗೆ ?

ಹರಿದ ನೋಟುಗಳು ಸಿಕ್ಕಿರುವ ಬಗ್ಗೆ ಗ್ರಾಹಕರು ದೂರು ನೀಡಿದರೆ, ಬ್ಯಾಂಕ್ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತದೆಯೇ? ಈ ಪ್ರಶ್ನೆಗೆ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಉತ್ತರಿಸಿದೆ. 

Written by - Ranjitha R K | Last Updated : Sep 9, 2021, 04:42 PM IST
  • ಹರಿದ ನೋಟುಗಳನ್ನು ಹೇಗೆ ವಿನಿಮಯ ಮಾಡುವುದು?
  • ಇಂತಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ನಿಯಮಗಳನ್ನು ಮಾಡಿದೆ.
  • ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು
ATM ನಿಂದ ಹರಿದ ನೋಟುಗಳು ಸಿಕ್ಕಿದರೆ ಏನು ಮಾಡಬೇಕು?ಇದನ್ನು ಬದಲಾಯಿಸಿಕೊಳ್ಳುವುದು ಹೇಗೆ ?   title=
ಹರಿದ ನೋಟುಗಳನ್ನು ಹೇಗೆ ವಿನಿಮಯ ಮಾಡುವುದು? (file photo)

ನವದೆಹಲಿ :  SBI On Mutilated Notes: ಹರಿದ ನೋಟುಗಳು ನಮ್ಮ ಕೈ ಸೇರಿದರೆ ಏನು ಮಾಡುವುದು ಎನ್ನುವ ಚಿಂತೆ ಕಾಡತೊಡಗುತ್ತದೆ. ಅನೇಕ ಬಾರಿ ಹರಿದ ನೋಟುಗಳು ಬ್ಯಾಂಕಿನ ಎಟಿಎಂನಿಂದಲೇ (ATM) ಸಿಗುತ್ತವೆ. ಹೀಗಾದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆ ನೋಟುಗಳನ್ನು ಬೇರೆ ಯಾರು ಕೂಡಾ ತೆಗೆದುಕೊಳ್ಳುವುದೂ ಇಲ್ಲ.  ಒಂದರ್ಥದಲ್ಲಿ ಆ ಹರಿದ ನೋಟುಗಳು ಪ್ರಯೋಜನಕ್ಕೆ ಬಾರದೆ ಹೋಗುತ್ತದೆ. 

ಹರಿದ ನೋಟಿನ ಬಗ್ಗೆ SBI ಏನು ಹೇಳುತ್ತದೆ ? 
ಹರಿದ ನೋಟುಗಳು ಸಿಕ್ಕಿರುವ ಬಗ್ಗೆ ಗ್ರಾಹಕರು ದೂರು ನೀಡಿದರೆ, ಬ್ಯಾಂಕ್  (Bank) ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತದೆಯೇ? ಈ ಪ್ರಶ್ನೆಗೆ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India), ಉತ್ತರಿಸಿದೆ. ಬ್ಯಾಂಕಿನ ನೋಟುಗಳ ಗುಣಮಟ್ಟವನ್ನು ಅತ್ಯಾಧುನಿಕ ನೋಟು ವಿಂಗಡಣೆ ಯಂತ್ರಗಳ ಮೂಲಕ ಪರಿಶೀಲಿಸಲಾಗುತ್ತದೆ ಎಂದು ಗ್ರಾಹಕರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಎಸ್‌ಬಿಐ (SBI) ಹೇಳಿದೆ.  ATMನಲ್ಲಿ ಹರಿದ ನೋಟುಗಳನ್ನು ಪಡೆಯುವ ಸಾಧ್ಯತೆಗಳು ತೀರಾ ಕಡಿಮೆ. ಒಂದು ವೇಳೆ ಇಂಥಹ ನೋಟುಗಳು ಸಿಕ್ಕಿದರೆ, ಅದನ್ನು ಯಾವುದೇ ಶಾಖೆಗಳಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು.  

ಇದನ್ನೂ ಓದಿ : EPFO Alert : ನೀವು ಕೂಡಾ ಈ ತಪ್ಪು ಮಾಡಿರಬಹುದಾ ? ಒಮ್ಮೆ ಪರಿಶೀಲಿಸಿಕೊಳ್ಳಿ

ಆರ್‌ಬಿಐ ನಿಯಮಗಳು :
ಹರಿದ ನೋಟುಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ RBI ಸುತ್ತೋಲೆಗಳನ್ನು ಹೊರಡಿಸುತ್ತಲೇ ಬಂದಿದೆ. ಯಾವುದೇ ಬ್ಯಾಂಕ್ ಶಾಖೆ ಅಥವಾ ರಿಸರ್ವ್ ಬ್ಯಾಂಕ್ (Reserve Bank) ಕಚೇರಿಯಲ್ಲಿ ಸುಲಭವಾಗಿ ಇಂತಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಗರಿಷ್ಠ 20 ನೋಟುಗಳನ್ನು ಒಂದೇ ಬಾರಿಗೆ ವಿನಿಮಯ ಮಾಡಿಕೊಳ್ಳಬಹುದು. ಈ ನೋಟುಗಳ ಒಟ್ಟು ಗರಿಷ್ಠ ಮೌಲ್ಯ  5,000 ರೂ. ಮೀರಬಾರದು. 

ಹರಿದ ನೋಟುಗಳನ್ನು ವಿನಿಮಯ ಮಾಡಲು ಶುಲ್ಕಎಷ್ಟು ?
ಗ್ರಾಹಕರು ರಿಸರ್ವ್ ಬ್ಯಾಂಕ್ ನಿರ್ಧರಿಸಿದ ಕೇಂದ್ರಗಳಲ್ಲಿ ವಿನಿಮಯಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 20 ಕ್ಕಿಂತ ಹೆಚ್ಚು ನೋಟುಗಳನ್ನು, ಬ್ಯಾಂಕ್ನಿಂದ ಒಂದು ರಶೀಡಿ ಪಡೆದು ವಿನಿಮಿ ಮಾಡಿಕೊಳ್ಳಬಹುದು. ಇದಕ್ಕಾಗಿ, ಬ್ಯಾಂಕ್ ನಿಮಗೆ RBI ನಿಗದಿಪಡಿಸಿದ ಶುಲ್ಕವನ್ನು ವಿಧಿಸುತ್ತದೆ.

ಇದನ್ನೂ ಓದಿ : SBI ಗ್ರಾಹಕರಿಗೆ ಸಿಹಿ ಸುದ್ದಿ : Debit Card ಮೂಲಕ ಖರೀದಿ ಮಾಡಿದರೂ EMIಗೆ ಕನ್ವರ್ಟ್ ಮಾಡಬಹುದು..!

ಎಟಿಎಂನಿಂದ ಹರಿದ ನೋಟುಗಳು ಸಿಕ್ಕಿದರೆ ಏನು ಮಾಡಬೇಕು?
ಹರಿದ ನೋಟುಗಳನ್ನು ಎಟಿಎಂನಲ್ಲಿ ಸಿಕ್ಕಿದರೆ, ಅದನ್ನು ಎಕ್ಸ್ಚೇಂಜ್ ಮಾಡಿಕೊಳ್ಳಲು (torn note exchange)ನೀವು ಯಾವ್ ಬ್ಯಾಂಕ್ ಎಟಿಎಂನಿಂದ ಹಣ ಪಡೆದಿದ್ದೀರಿ ಅದೇ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯಲ್ಲಿ,  ಎಟಿಎಂನಿಂದ ಹಣ ಪಡೆದಿರುವ  ದಿನಾಂಕ, ಸಮಯ ಮತ್ತು ಸ್ಥಳವನ್ನು ಬರೆಯಬೇಕಾಗುತ್ತದೆ. ಹಣ ಪಡೆದಿರುವ ಸ್ಲಿಪ್ ಅನ್ನು ಕೂಡಾ ಲಗತ್ತಿಸಬೇಕು. ನಿಮ್ಮ ಬಳಿ ಸ್ಲಿಪ್ ಇಲ್ಲದಿದ್ದರೆ, ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ ಸಂದೇಶದ ವಿವರಗಳನ್ನು ನೀಡಬೇಕಾಗುತ್ತದೆ. ವಾ

ಹೇಗೆ ದೂರು ನೀಡುವುದು ?
ನೀವು ಅದರ ಬಗ್ಗೆ https://crcf.sbi.co.in/ccf/ ಜನರಲ್ ಬ್ಯಾಂಕಿಂಗ್ // Cash Related categoryಯಲ್ಲಿ ದೂರು ನೀಡಬಹುದು ಎಂದು SBI ಹೇಳಿದೆ . ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATM ಗಾಗಿ. ಕಾರ್ಯ ನಿರ್ವಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News