SBI e Auction: ವರ್ಷಾಂತ್ಯಕ್ಕೂ ಮುನ್ನವೇ ಮನೆ ಬುಕ್ ಮಾಡಿ... ಅಗ್ಗದ ದರದಲ್ಲಿ ಮನೆ ಖರೀದಿಗೆ SBI ನೀಡುತ್ತಿದೆ ಈ ಅವಕಾಶ
SBI e Auction: ವಿದಾಯ ಹೇಳುತ್ತಿರುವ 2020 ರಲ್ಲಿ ನಿಮ್ಮ ಕನಸಿನ ಮನೆಯನ್ನು ಕೈಗೆಟಕುವ ದರದಲ್ಲಿ ಖರೀದಿಸುವ ಮೂಲಕ ನೀವು ಈ ವರ್ಷವನ್ನು ಅವಿಸ್ಮರಣೀಯಗೊಳಿಸಬಹುದು. ಏಕೆಂದರೆ ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ನಿಮಗೆ ಈ ಅವಕಾಶ ಕಲ್ಪಿಸುತ್ತಿದೆ.
ನವದೆಹಲಿ: SBI e Auction: ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶೀಘ್ರದಲ್ಲಿಯೇ ಹಲವು ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ವಸತಿ, ವಾಣಿಜ್ಯ ಹಾಗೂ ಔದ್ಯೋಗಿಕ ವಲಯದ ಆಸ್ತಿಗಳು ಶಾಮೀಲಾಗಿರಲಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ನೀವೂ ಕೂಡ ಪಾಲ್ಗೊಂಡು ನಿಮ್ಮ ನೆಚ್ಚಿನ ಸ್ಥಿರಾಸ್ತಿ ಅಥವಾ ಕನಸಿನ ಮನೆಯನ್ನು ಖರೀದಿಸಬಹುದು. ಸಾಲ ಮರುಪಾವತಿಯಾಗದ ಆಸ್ತಿಗಳನ್ನು ಬ್ಯಾಂಕ್ ಹರಾಜಿಗಿಡುತ್ತದೆ.
ಇದನ್ನು ಓದಿ -ಎಸ್‌ಬಿಐ ಸೇರಿದಂತೆ ಈ 4 ದೊಡ್ಡ ಬ್ಯಾಂಕ್‌ಗಳ ಗ್ರಾಹಕರಿಗೆ Whatsapp ನೀಡುತ್ತಿದೆ ಈ ಸೌಲಭ್ಯ
WhatsApp Payment Goes Live:ದೇಶಾದ್ಯಂತ WhatsAppನ ಹಣ ಪಾವತಿ ಸೇವೆ ಆರಂಭ
SBI), ಹರಜಿಗಿಡಲಾಗುವ ಫ್ರೀ ಹೋಲ್ಡ್ ಅಥವಾ ಲೀಜ್ ಹೋಲ್ಡ್ ಆಸ್ತಿಯ ಸ್ಥಾನವನ್ನು ಅದರ ಮ್ಯಾಪ್ ಹಾಗೂ ಇತರೆ ಮಾಹಿತಿಗಳೊಂದಿಗೆ ಸಾರ್ವಜನಿಕ ನೋಟಿಸ್ ಬ್ಯಾಂಕ್ ಜಾರಿಗೊಳಿಸುತ್ತದೆ ಎಂದು ಹೇಳಿದೆ. ಒಂದು ವೇಳೆ ನೀವೂ ಕೂಡ ಇ-ಆಕ್ಷನ್ ಮೂಲಕ ಆಸ್ತಿ ಖರೀದಿಸಲು ಬಯಸುತ್ತಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಕ್ರಿಯೆ ಹಾಗೂ ಆಸ್ತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಹರಾಜು ಪ್ರಕ್ರಿಯೆ ಡಿಸೆಂಬರ್ 30 ರಂದು ನಡೆಯಲಿದೆ.
ಇದನ್ನು ಓದಿ- SBI Alert! Google Search ಮೂಲಕ ಸೈಟ್ ಪ್ರವೇಶಿಸುವ ಮೊದಲು ಈ ನಂಬರ್ ಮತ್ತು ಲಿಂಕ್ ನೆನಪಿಡಿ
Paytm ಪಾವತಿಯಲ್ಲಿ ಪಡೆಯಿರಿ ಇನ್ನಷ್ಟು ಲಾಭ, ಕಂಪನಿ ನೀಡಿದೆ ಈ ಆಫರ್
ಎಸ್‌ಬಿಐನ ಈ ಖಾತೆಯ ಮೂಲಕ ವ್ಯವಹಾರ ಆಗಲಿದೆ ಸುಲಭ
ಕಾಲಕಾಲಕ್ಕೆ ಈ ಹರಾಜು ಪ್ರಕ್ರಿಯೆ ನಡೆಯುತ್ತದೆ
ಭಾರತೀಯ ಸ್ಟೇಟ್ ಬ್ಯಾಂಕ್ ಕಾಲ-ಕಾಲಕ್ಕೆ ಈ ರೀತಿಯ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸುತ್ತದೆ. ಈ ಹರಾಜು ಪ್ರಕ್ರಿಯೆ ಮೂಲಕ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕ್ ಬಾಕಿ ಹಣವನ್ನು ವಸೂಲಿ ಮಾಡುತ್ತದೆ.