ನವದೆಹಲಿ - WhatsApp Payment Goes Live: ಇನ್ಮುಂದೆ ನೀವು ನಿಮ್ಮ ವಾಟ್ಸ್ ಆಪ್ ಮೇಲೆ ಸಂದೇಶ ರವಾನಿಸುವ ಜೊತೆಗೆ ಹಣ ಪಾವತಿ ಕೂಡ ಮಾಡಬಹುದು. ಬುಧವಾರ ಈ ಸೇವೆಯನ್ನು ದೇಶಾದ್ಯಂತ ಆರಂಭಿಸಲಾಗಿದೆ. ಪ್ದ್ರಸ್ತುತ ದೇಶದ ಸುಮಾರು 2 ಕೋಟಿ ಜನರಿಗಾಗಿ ಈ ಸೇವೆ ಲಭ್ಯವಿರಲಿದೆ. ವಾಟ್ಸ್ ಆಪ್ ತನ್ನ ಈ ಸೇವೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI), HDFC ಬ್ಯಾಂಕ್, ICICI ಬ್ಯಾಂಕ್ ಹಾಗೂ AXIS ಬ್ಯಾಂಕ್ ಜೊತೆಗೆ ಸೇರಿ ಆರಂಭಿಸಿದೆ. ವಾಟ್ಸ್ ಆಪ್ ನ ಈ ಪೇಮೆಂಟ್ಸ್ ವೈಶಿಷ್ಟ್ಯ ನತಿಒನಳ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ನ ಯುನಿಫೈಡ್ ಪೇಮೆಂಟ್ ಸಿಸ್ಟಂ ಆಧಾರಿತವಾಗಿರಲಿದೆ. NPCI ಕಳೆದ ತಿಂಗಳಲ್ಲಷ್ಟೇ ವಾಟ್ಸ್ ಆಪ್ ನ ಈ ಪೇಮೆಂಟ್ಸ್ ಸೇವೆಗೆ (WhatsApp Payments Service) ಅನುಮತಿ ನೀಡಿದೆ. ವಾಟ್ಸ್ ಆಪ್ ನ ಈ ಸೇವೆಯನ್ನು ಬಳಸಿ ಇದೀಗ ಬಳಕೆದಾರರು ಹಣಪಾವತಿ, ಹಣ ವರ್ಗಾವಣೆ ಮಾಡಬಹುದು. ದೇಶಾದ್ಯಂತ ವಾಟ್ಸ್ ಆಪ್ ನ ಒಟ್ಟು 40 ಕೋಟಿ ಬಳಕೆದಾರರಿದ್ದಾರೆ.
ಈ ರೀತಿ WhatsApp Pay ಖಾತೆ ತೆರೆಯಿರಿ
- ಮೊದಲು ವಾಟ್ಸ್ ಆಪ್ ಸ್ಕ್ರೀನ್ ನ ಬಲಭಾಗದಲ್ಲಿ ನೀಡಲಾಗಿರುವ (:) ಚುಕ್ಕೆಗಳ ಮೇಲೆ ಕ್ಲಿಕ್ಕಿಸಿ.
- ಬಳಿಕ ನಿಮಗೆ pements ಆಯ್ಕೆ ಸಿಗಲಿದೆ. ಅಲ್ಲಿ Add Payment Method ಮೇಲೆ ಕ್ಲಿಕ್ಕಿಸ.
-ಯಾವ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ಇದೆ ಆದನ್ನು ಆಯ್ಕೆ ಮಾಡಿ.
- ವೆರಿಫಿಕೆಶನ್ ಗಾಗಿ sms ಮೂಲಕ ವೆರಿಫೈ ಆಯ್ಕೆಯನ್ನು ಆರಿಸಿ.
- ಇದಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ ಹೊಂದಿಕೆಯಾಗಿರುವ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಕೋಡ್ ಬರಲಿದೆ. ಅದನ್ನು ನಮೂದಿಸಿ. ಈಗ ನಿಮ್ಮ ಪರಿಶೀಲನೆ ಪೂರ್ಣಗೊಳ್ಳಲಿದೆ. ಆದರೆ, ನಿಮ್ಮ ವಾಟ್ಸ್ ಆಪ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಹೊಂದಿಕೊಂಡಿರುವ ಸಂಖ್ಯೆ ಒಂದೇ ಆಗಿರಬೇಕು ಎಂಬುದು ಅನಿವಾರ್ಯ.
- ಈಗ ನೀವು ನಿಮ್ಮ UPI ಪಿನ್ ಅನ್ನು ಜನರೇಟ್ ಮಾಡಬೇಕು. ಇದಕ್ಕಾಗಿ ನೀವು ಒಂದು ಸಂಖ್ಯೆಯನ್ನು ಆಯ್ಕೆಮಾಡಿಕೊಳ್ಳಬೇಕು. ಅದನ್ನು ಒಟ್ಟು ಎರಡು ಭಾರಿ ಭರ್ತಿ ಮಾಡಿ ದೃಢಪಡಿಸಬೇಕು.
ಇದನ್ನು ಓದಿ-Alert...! WhatsApp Payments ಬಳಸುವ ಮುನ್ನ ಈ ಸುದ್ದಿ ಓದಿ...
ಪೇಮೆಂಟ್ ಅಕೌಂಟ್ ಸಿದ್ಧಗೊಂಡ ಬಳಿಕ ಈ ರೀತಿ ಹಣಪಾವತಿ ಮಾಡಿ
- ನೀವು ಹಣ ಕಳುಹಿಸಲು ಬಯಸಿರುವ ವ್ಯಕ್ತಿಯ ಚಾಟ್ ಓಪನ್ ಮಾಡಿ.
- ಮೆಸೇಜ್ ಬಾಕ್ಸ್ ನಲ್ಲಿರುವ ಅಟ್ಯಾಚ್ಮೆಂಟ್ ಆಯ್ಕೆಯ ಮೇಲೆ ಕ್ಲಿಕ್ಕ ಮಾಡಿ.
- ಬಳಿಕ ಪೇಮೆಂಟ್ಸ್ ಮೇಲೆ ಟ್ಯಾಪ್ ಮಾಡಿ, ಎಷ್ಟು ಹಣ ಪಾವತಿಸಬೇಕು ಅದನ್ನು ಟೈಪ್ ಮಾಡಿ.
- ಬಳಿಕ ಯುಪಿಐ ಪಿನ್ ನಮೂದಿಸಿ.
-ಪೇಮೆಂಟ್ ಆದ ಬಳಿಕ ನಿಮಗೆ ಕನ್ಫರ್ಮೇಶನ್ ಸಂದೇಶ ಬರಲಿದೆ.
ಇದನ್ನು ಓದಿ-WhatsApp ನಲ್ಲಿ ಪೇಮೆಂಟ್ ಸೆಟ್ ಅಪ್ ಅನ್ನು ಹೇಗೆ ಸಕ್ರೀಯಗೊಳಿಸಬೇಕು, ಸ್ಟೆಪ್ ಬೈ ಸ್ಟೆಪ್ ವಿವರ ಇಲ್ಲಿದೆ
ಭಾರತೀಯ ಸ್ಟೇಟ್ ಬ್ಯಾಂಕ್ ಅತಿ ಹೆಚ್ಚು UPI ಬಳಕೆದಾರರಿದ್ದಾರೆ
ಪ್ರಸ್ತುತ ಭಾರತದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಅತಿ ಹೆಚ್ಚು ಅಂದರೆ ಸುಮಾರು 12 ಕೋಟಿ UPI ಬಳಕೆದಾರರನ್ನು ಹೊಂದಿದ್ದು, ಇದು ದೇಶಾದ್ಯಂತ UPI ಸಿಸ್ಟಂ ಬಳಕೆದಾರರ ಶೇ.28 ರಷ್ಟಿದೆ. ದೇಶದಲ್ಲಿ UPI ವ್ಯವಹಾರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. NPCI ನ ಲೇಟೆಸ್ಟ್ ಅಂಕಿ-ಅಂಶಗಳ ಪ್ರಕಾರ ಒಟ್ಟು 221 UPI ವ್ಯವಹಾರಗಳು ನಡೆದಿದ್ದು ಅಕ್ಟೋಬರ್ ನಲ್ಲಿ 207 ಕೋಟಿ UPI ವ್ಯವಹಾರಗಳ ತುಲನೆಯಲ್ಲಿ ಶೇ.6.7 ರಷ್ಟು ಅಧಿಕವಾಗಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ 180 ಕೋಟಿ UPI ವ್ಯವಹಾರಗಳು ನಡೆದಿವೆ.