ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಆನ್‌ಲೈನ್ ಬ್ಯಾಂಕಿಂಗ್ (Online Banking) ಅನುಭವವನ್ನ ಸುಧಾರಿಸಲು ತನ್ನ ಇಂಟರ್ನೆಟ್ ಬ್ಯಾಂಕಿಂಗ್ (Internet Banking) ವೇದಿಕೆಯನ್ನ ನವೀಕರಿಸುತ್ತಿದೆ. 


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ನವೆಂಬರ್ 8 ರಂದು ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್, SBI yono ಮತ್ತು yono lite ಸೇವೆಗಳನ್ನ ಬಳಸಲು ತೊಂದರೆಯಾಗಬಹುದು ಎಂದು ಟ್ವೀಟ್ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. 


ಗುಡ್ ನ್ಯೂಸ್! ಜನ ಧನ್ ಖಾತೆಗಳಲ್ಲಿ ಈ ವಹಿವಾಟುಗಳಿಗೆ ಇಲ್ಲ ಶುಲ್ಕ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನುಕೂಲವಾಗುವಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಆದರೆ ಮಿಸ್ಡ್ ಕಾಲ್ ಸೇವೆಯೂ ಒಂದು. ಗ್ರಾಹಕರು ತಮ್ಮ ನೋಂದಾಯಿತ ಸಂಖ್ಯೆಯ ಮೂಲಕ ಟೋಲ್ ಫ್ರೀ ಸಂಖ್ಯೆಗೆ ಮಿಸ್ಡ್ ಕಾಲ್  ನೀಡಿ ತಮ್ಮ ಖಾತೆಯ ವಿವರ ತಿಳಿಯಬಹುದು.


ನಿಮ್ಮ SBI ಖಾತೆಯಲ್ಲಿ ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ..? 
SBI ನ ಬ್ಯಾಲೆನ್ಸ್ ತಿಳಿಯಲು ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಯಿಂದ ಟೋಲ್ ಫ್ರೀ ಸಂಖ್ಯೆ '9223766666' ಗೆ ನೀವು ಮಿಸ್ಡ್ ಕಾಲ್ ನೀಡಿ. ಸಂದೇಶದ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ತಿಳಿಯಬಹುದು.


ಎಸ್‌ಬಿಐನ ಈ ಕಾರ್ಡ್‌ನೊಂದಿಗೆ ಮೆಟ್ರೋದಲ್ಲಿ ಸುಲಭವಾಗಲಿದೆ ನಿಮ್ಮ ಪ್ರಯಾಣ


SMS ನಿಂದ ಬ್ಯಾಲೆನ್ಸ್ ತಿಳಿಯಲು ನೀವು 'BAL' ಎಸ್‌ಎಂಎಸ್ ಅನ್ನು 09223766666 ಗೆ ಕಳುಹಿಸಬೇಕು. ಇದರ ನಂತರ ನೀವು ಸಂದೇಶದ ಮೂಲಕ ಬ್ಯಾಲೆನ್ಸ್ ಮಾಹಿತಿಯನ್ನ ಪಡೆಯುತ್ತೀರಿ. 


ನೆನಪಿನಲ್ಲಿಡಿ: ಈ ಸೌಲಭ್ಯಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಿರಬೇಕು.
SBI sms ಬ್ಯಾಂಕಿಂಗ್ ಮತ್ತು ಮೊಬೈಲ್ ಸೇವೆಗಳಿಗೆ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಖಾತೆ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ನೀವು REG 1234567890 ನಂತಹ ರಿಜಿಸ್ಟರ್ ಮೊಬೈಲ್ ಸಂಖ್ಯೆಯಿಂದ 09223488888 ಗೆ 'REG ಖಾತೆ ಸಂಖ್ಯೆ' ಅನ್ನು SMS ಮಾಡಬೇಕು. ಇದರ ನಂತರ ನೀವು ದೃಡೀಕರಣದ ಸಂದೇಶವನ್ನು ಪಡೆಯುತ್ತೀರಿ.