ಎಸ್‌ಬಿಐನ ಈ ಕಾರ್ಡ್‌ನೊಂದಿಗೆ ಮೆಟ್ರೋದಲ್ಲಿ ಸುಲಭವಾಗಲಿದೆ ನಿಮ್ಮ ಪ್ರಯಾಣ

                 

  • Oct 24, 2020, 12:39 PM IST

ನೀವು ಪ್ರತಿದಿನ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರೆ ಇನ್ನುಮುಂದೆ ನಿಮ್ಮ ಪ್ರಯಾಣವು ಸುಲಭ ಮತ್ತು ವಿನೋದಮಯವಾಗಿರುತ್ತದೆ. ಏಕೆಂದರೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಕಾರ್ಡ್ ಸಹಾಯದಿಂದ ದೆಹಲಿ ಮೆಟ್ರೋ- ಪ್ಯೂರ್ ಪ್ಲೇ ಕ್ರೆಡಿಟ್ ಕಾರ್ಡ್ (Pure Play Credit Card) ನೀಡುತ್ತಿದೆ.

1 /5

ಈ ವಿವಿಧೋದ್ದೇಶ ಕಾರ್ಡ್ ದೆಹಲಿ ಮೆಟ್ರೊದ ಪ್ರಯಾಣಿಕರಿಗೆ ಎಲ್ಲ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ದೆಹಲಿ ಮೆಟ್ರೋ-ಎಸ್‌ಬಿಐ ಕಾರ್ಡ್ ಅನ್ನು ಡಿಎಂಆರ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಗು ಸಿಂಗ್ ಮತ್ತು ಎಸ್‌ಬಿಐ ಕಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶ್ವನಿ ಕುಮಾರ್ ತಿವಾರಿ ನೀಡಿದ್ದಾರೆ.  

2 /5

ಇದು Contactless ಕಾರ್ಡ್ ಆಗಿದ್ದು ಅದು ಕ್ರೆಡಿಟ್ ಕಾರ್ಡ್ (Credit Card)  ಜೊತೆಗೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಸೌಲಭ್ಯವನ್ನು ಒದಗಿಸುತ್ತದೆ. ಎಸ್‌ಬಿಐ ಕಾರ್ಡ್ ಪ್ರಕಾರ, ದೆಹಲಿ ಮೆಟ್ರೊದಿಂದ ಪ್ರಯಾಣಿಸುವ ದೈನಂದಿನ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.

3 /5

ಕಂಪನಿಯ ಪ್ರಕಾರ, ಇದು ಬಹುಪಯೋಗಿ ಕಾರ್ಡ್ ಆಗಿದ್ದು, ಇದನ್ನು ಕ್ರೆಡಿಟ್ ಕಾರ್ಡ್ ಮತ್ತು ಮೆಟ್ರೋ ಸ್ಮಾರ್ಟ್ ಕಾರ್ಡ್‌ನಂತೆ ಬಳಸಬಹುದು. ಕಾರ್ಡ್ ಅನ್ನು ಎನ್‌ಎಫ್‌ಸಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದರಿಂದಾಗಿ ಯಾವುದೇ ಮೇಲ್ಮೈಯನ್ನು ಮುಟ್ಟದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಕಾರ್ಡ್‌ನ ವಾರ್ಷಿಕ ಶುಲ್ಕ 499 ರೂಪಾಯಿಗಳು ಮತ್ತು ಇದರೊಂದಿಗೆ ಕಂಪನಿಯು ಅನೇಕ ವಿಶೇಷ ಕೊಡುಗೆಗಳನ್ನು ಸಹ ನೀಡಿದೆ.

4 /5

ಇದರೊಂದಿಗೆ, ಈ ಕಾರ್ಡ್‌ನಲ್ಲಿ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿದೆ. ಇವುಗಳಲ್ಲಿ ಮೊದಲ ಆಟೋ ಟಾಪ್ ಅಪ್ ವಹಿವಾಟಿನಲ್ಲಿ 50 ರೂ. ಕ್ಯಾಶ್‌ಬ್ಯಾಕ್ ಮತ್ತು ಮೆಟ್ರೊದಲ್ಲಿ ಪ್ರಯಾಣಿಸಲು 10 ಪ್ರತಿಶತ ರಿಯಾಯಿತಿ ಸೇರಿವೆ.

5 /5

ಎಸ್‌ಬಿಐ ಕಾರ್ಡ್ ಸಿಇಒ ಅಶ್ವನಿ ಕುಮಾರ್ ತಿವಾರಿ ಮಾತನಾಡಿ ಡಿಎಂಆರ್‌ಸಿಯ ವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಈ ಸಹಭಾಗಿತ್ವದಲ್ಲಿ, ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಅನುಭವವನ್ನು ಸುಧಾರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.