SBI Mega E-Auction: ಅಗ್ಗದ ದರದಲ್ಲಿ ಮನೆ ಖರೀದಿಗೆ ಮಾ.5 ರಿಂದ SBI ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಬೇಡಿ
SBI Mega E-Auction - ಒಂದು ವೇಳೆ ನೀವೂ ಕೂಡ ಮನೆ, ನಿವೇಶನ, ಪ್ಲಾಂಟ್ ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಬಯಸುತ್ತಿದ್ದು, ಅದಕ್ಕಾಗಿ ಸಾಕಷ್ಟು ಬಂಡವಾಳವಿಲ್ಲದಿದ್ದರೆ, ಮಾರ್ಚ್ 5 ರಿಂದ SBI Mega E-Auctionನಲ್ಲಿ ನೀವು ಭಾಗವಹಿಸಬಹುದು.
ನವದೆಹಲಿ: SBI Mega E-Auction - ಒಂದು ವೇಳೆ ನೀವೂ ಕೂಡ ಮನೆ, ನಿವೇಶನ, ಪ್ಲಾಂಟ್ ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಬಯಸುತ್ತಿದ್ದು, ಅದಕ್ಕಾಗಿ ಸಾಕಷ್ಟು ಬಂಡವಾಳವಿಲ್ಲದಿದ್ದರೆ, ಮಾರ್ಚ್ 5 ರಿಂದ SBI Mega E-Auctionನಲ್ಲಿ ನೀವು ಭಾಗವಹಿಸಬಹುದು. ಈ ಮೆಗಾ ಇ-ಹರಾಜಿನಲ್ಲಿ ಅಗ್ಗದ ವಸತಿ ಮತ್ತು ವಾಣಿಜ್ಯ ಆಸ್ತಿಗಳು, ನಿವೇಶನ, ಪ್ಲಾಂಟ್ ಮತ್ತು ಯಂತ್ರೋಪಕರಣಗಳು, ವಾಹನಗಳು ಮತ್ತು ಇತರ ಅನೇಕ ವಸ್ತುಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಅವಕಾಶ ಸಿಗಲಿದೆ. ಎಸ್‌ಬಿಐ (SBI) ತನ್ನ ಈ ಮೆಗಾ ಇ-ಹರಾಜಿನ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ಇ-ಹರಾಜಿನಲ್ಲಿ ಭಾಗವಹಿಸುವ ಮೂಲಕ ನಿಮ್ಮ ಬಿಡ್ ಅನ್ನು ಇರಿಸಿ ಮತ್ತು ನಿಮ್ಮ ಅಗತ್ಯಗಳನ್ನು ನೀವು ಅಗ್ಗದ ದರದಲ್ಲಿ ಪೂರೈಸಿಕೊಳ್ಳಬಹುದು. ಹರಾಜಿನಲ್ಲಿ ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಕೃಷಿ ಆಸ್ತಿಗಳಿವೆ. ಸಾಲ ನೀಡಲು ಬ್ಯಾಂಕ್ (State Bank Of India) ಸಾಲಗಾರರಿಂದ ಅಡವು ಇಟ್ಟುಕೊಂಡ ಎಲ್ಲ ಸಂಗತಿಗಳನ್ನು ಈ ಇ-ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ಸಾಲ ತೀರಿಸದ ಕಾರಣ ಬ್ಯಾಂಕ್ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುತ್ತದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಲಿಲಾವು ಪ್ರಕ್ರಿಯೆ
ಯಾವುದೇ ಓರ್ವ ಗ್ರಾಹಕನಿಗೆ ಸಾಲ ನೀಡಲು ಬ್ಯಾಂಕ್ ಕೆಲವು ಆಸ್ತಿಗಳನ್ನು (ವಸತಿ ಆಸ್ತಿ, ವಾಣಿಜ್ಯ ಆಸ್ತಿ) ಅಡವು ಇಡಲು ಹೇಳಿರುತ್ತದೆ. ಗ್ರಾಹಕರು ಸಾಲವನ್ನು ಮರುಪಾವತಿಸಲು ವಿಫಲವಾದರೆ, ಬಾಕಿ ಹಣವನ್ನು ವಸೂಲಿ ಮಾಡಲು ಬ್ಯಾಂಕ್ ತಮ್ಮ ಅಡಮಾನ ಆಸ್ತಿಗಳನ್ನು ಹರಾಜು ಮಾಡುತ್ತದೆ. ಇದಕ್ಕಾಗಿ, ಎಸ್‌ಬಿಐನ ಆಯಾ ಶಾಖೆಗಳು ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುತ್ತವೆ, ಇದರಲ್ಲಿ ಹರಾಜಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ. ಅಡಮಾನದ ಆಸ್ತಿಗಳ ಹೊರತಾಗಿ, ನ್ಯಾಯಾಲಯವು ಲಗತ್ತಿಸಲಾದ ಸ್ಥಿರ ಆಸ್ತಿಗಳ ಹರಾಜನ್ನು ಸಹ ಬ್ಯಾಂಕ್ ನಡೆಸುತ್ತದೆ. ಹರಾಜಿಗೆ ಬಿಡುಗಡೆಯಾದ ಸಾರ್ವಜನಿಕ ಮಾಹಿತಿಯಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಬ್ಯಾಂಕ್ ಒದಗಿಸುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಹರಾಜು ಮಾಡಬೇಕಾದ ಆಸ್ತಿಗಳನ್ನು ಸಹ ಪರಿಶೀಲಿಸಬಹುದು.
ಇದನ್ನೂ ಓದಿ- Blockchain Technology ಮೂಲಕ ಪಾವತಿ ಸೌಲಭ್ಯ ನೀಡಲು ಮುಂದಾದ SBI
ಮೆಗಾ ಇ-ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಗತ್ಯ ಸಂಗತಿಗಳು ಇಲ್ಲಿವೆ
- ಇ-ಹರಾಜು ಪ್ರಕ್ರಿಯೆಯ ನೋಟಿಸ್ ನಲ್ಲಿ ನೀಡಲಾಗಿರುವ ಸಂಬಂಧಿತ ಸಂಪತ್ತಿಯ EMD (ಅರ್ನಸ್ಟ್ ಮನಿ ಡಿಪಾಸಿಟ್)
0 KYC ದಾಖಲೆ - ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿ ಇದನ್ನು ಜಮಾ ಮಾಡಬೇಕು.
- ವ್ಯಾಲಿಡ್ ಡಿಜಿಟಲ್ ಸಿಗ್ನಿಚರ್- ಲಿಲಾವು ಅಥವಾ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಯಸುವ ವ್ಯಕ್ತಿ ಡಿಜಿಟಲ್ ಸಿಗ್ನಿಚರ ನೀಡಲು ಇ-ಹರಾಜು - ಮಾಡುವವರನ್ನು ಅಥವಾ ಬೇರೆ ಯಾವುದೇ ಅಧಿಕೃತ ಏಜೆಂಟ್ ರನ್ನು ಸಂಪರ್ಕಿಸಬೇಕು.
- ಲಾಗಿನ್ ಐಡಿ ಹಾಗೂ ಪಾಸ್ವರ್ಡ್-ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿ EMD ಪಾವತಿಸಿದ ಬಳಿಕ ಹಾಗೂ KYC ದಾಖಲೆ ತೋರಿಸಿದ ಬಳಿಕ ಘೋಷಣೆ ಕೂಗುವವರ ಹೆಸರಿಗೆ ಇ-ಹರಾಜಿನ (SBI e-Auction) ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಕಳುಹಿಸಲಾಗುತ್ತದೆ.
- ಘೋಷಣೆ ಮೊಳಗಿಸುವವರು ನಿಯಮಗಳ ಅನುಸಾರ ಇ-ಹರಾಜು ಪ್ರಕ್ರಿಯೆಯ (SBI e-Auction Process) ವೇಳೆ ಲಾಗಿನ್ ಮಾಡಿ ತಮ್ಮ ಘೋಷಣೆಗಳನ್ನು ಮಾಡಬೇಕು.
ಇದನ್ನೂ ಓದಿ-ಮನೆ ಕಟ್ಟುವ ಕನಸು ಇನ್ನು ನನಸು : SBI ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್
ಆಸ್ತಿಗಳು ಹಾಗೂ ಘೋಷಣೆಗಳ ಬಗ್ಗೆ ಈ ತಾಣಗಳಿಗೆ ಭೇಟಿ ನೀಡಿ ನೀವು ಅಧಿಕೃತ ಮಾಹಿತಿ ಪಡೆಯಬಹುದು
- ಸಿ1 ಇಂಡಿಯಾ ಪ್ರೈವೇಟ್ ಲಿಮಿಟೆಡ್: https://www.bankeauctions.com/Sbi
- ಇ-ಪ್ರೋಕ್ಯೂರ್ಮೆಂಟ್ ಟೆಕ್ನಾಲಜಿ ಲಿಮಿಟೆಡ್ : https://sbi.auctiontiger.net/EPROC/
- ಆಸ್ತಿಗಳನ್ನು ನೋಡಲು : https://ibapi.in
- ಹರಾಜಿನ ವೇದಿಕೆ: https://www.mstcecommerce.com/auctionhome/ibapi/index.jsp
ಇದನ್ನೂ ಓದಿ-ಈಗ ಹೋಮ್ ಲೋನ್ ಇನ್ನೂ ಅಗ್ಗ.! ಹೇಗೆ ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.