ಈಗ ಹೋಮ್ ಲೋನ್ ಇನ್ನೂ ಅಗ್ಗ.! ಹೇಗೆ ಗೊತ್ತಾ..?

ಈ ದುಬಾರಿ ದಿನಗಳಲ್ಲಿ ಕೋಟಕ್ ಮಹಿಂದ್ರಾ ಬ್ಯಾಂಕ್  ಜನ ಸಾಮಾನ್ಯರಿಗೆ ಒಂದು ಖುಷಿಯ ಸುದ್ದಿ ನೀಡಿದೆ. ಕೊಟಕ್ ಮಹಿಂದ್ರಾ ಬ್ಯಾಂಕ್ ಒಂದು ಹೊಸ ಅಫರ್ ರಿಲೀಸ್ ಮಾಡಿದೆ.   

Written by - Ranjitha R K | Last Updated : Mar 2, 2021, 10:39 AM IST
  • ಕೋಟಕ್ ಮಹಿಂದ್ರಾ ಬ್ಯಾಂಕ್ ಜನ ಸಾಮಾನ್ಯರಿಗೆ ಒಂದು ಖುಷಿಯ ಸುದ್ದಿ ನೀಡಿದೆ.
  • ಮಹಿಂದ್ರಾ ಬ್ಯಾಂಕ್ ಒಂದು ಹೊಸ ಅಫರ್ ರಿಲೀಸ್ ಮಾಡಿದೆ.
  • ಕೋಟಕ್ ಮಹಿಂದ್ರಾ ಬ್ಯಾಂಕಿನ ಗೃಹ ಸಾಲ ತುಂಬಾ ಸಸ್ತಾ ಆಗಲಿದೆ.
ಈಗ ಹೋಮ್ ಲೋನ್ ಇನ್ನೂ ಅಗ್ಗ.! ಹೇಗೆ ಗೊತ್ತಾ..? title=
ಕೋಟಕ್ ಮಹಿಂದ್ರಾ ಬ್ಯಾಂಕಿನ ಗೃಹ ಸಾಲ ತುಂಬಾ ಸಸ್ತಾ (file photo)

ನವದೆಹಲಿ : ಈ ದುಬಾರಿ ದಿನಗಳಲ್ಲಿ ಕೋಟಕ್ ಮಹಿಂದ್ರಾ ಬ್ಯಾಂಕ್ (Kotak Mahindra Bank) ಜನ ಸಾಮಾನ್ಯರಿಗೆ ಒಂದು ಖುಷಿಯ ಸುದ್ದಿ ನೀಡಿದೆ. ಕೊಟಕ್ ಮಹಿಂದ್ರಾ ಬ್ಯಾಂಕ್ ಒಂದು ಹೊಸ ಅಫರ್ (New Offer) ರಿಲೀಸ್ ಮಾಡಿದೆ. ಅದರ ಪ್ರಕಾರ ಕೋಟಕ್ ಮಹಿಂದ್ರಾ ಬ್ಯಾಂಕಿನ ಗೃಹ ಸಾಲ (Home Loan ) ತುಂಬಾ ಸಸ್ತಾ ಆಗಲಿದೆ. ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿಯೇ ಶೇ. 6.65 ಕ್ಕೆ ಸೀಮಿತಗೊಳಿಸಲಾಗಿದೆ. ಕೆಲವೊಂದು ಆಯ್ದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. 

ಕೋಟಕ್ ಮಹಿಂದ್ರಾ ಬ್ಯಾಂಕಿನ ಸ್ಪೆಷಲ್ ಆಫರ್ :
SBI ಈಗಾಗಲೇ ಗೃಹ ಸಾಲ ಬಡ್ಡಿಯಲ್ಲಿ ಕಡಿತ ಮಾಡಿದೆ. ಇದಕ್ಕಿಂತಲೂ ಕಡಿಮೆ ಬಡ್ಡಿ ದರದಲ್ಲಿ ಕೋಟಕ್ ಮಹಿಂದ್ರಾ (Kotak Mahindra Bank)ಗೃಹ ಸಾಲ ನೀಡಲಿದೆ.  ಇದಕ್ಕಿಂತಲೂ ಕಡಿಮೆ ಬಡ್ಡಿದರದಲ್ಲಿ (Interest Rate) ಯಾವುದೇ ಬ್ಯಾಂಕ್ ಕೂಡಾ ಸಾಲ ನೀಡುತ್ತಿಲ್ಲ ಎಂದು ಕೋಟಕ್ ಮಹಿಂದ್ರಾ ಬ್ಯಾಂಕ್ ಹೇಳಿಕೊಂಡಿದೆ. ನಿಮಗೆ ಶೇ. 6.65ರ ಬಡ್ಡಿ ದರದಲ್ಲಿ ಸಾಲ ಬೇಕಾದರೆ, ನೀವು ಮಾರ್ಚ್ 31ಕ್ಕೆ ಮುನ್ನ ಬ್ಯಾಂಕಿಗೆ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ : ಮನೆ ಕಟ್ಟುವ ಕನಸು ಇನ್ನು ನನಸು : SBI ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್

ಸಿಬಲ್ ಸ್ಕೋರ್ ಚೆನ್ನಾಗಿರಬೇಕು.!
ಸಿಬಲ್ (CIBIL) ಸ್ಕೋರ್ ಚೆನ್ನಾಗಿರುವ ಗ್ರಾಹಕರಿಗೆ ಮಾತ್ರ ಇಷ್ಟೊಂದು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ (Home loan) ಸಿಗಲಿದೆ ಎಂದು ಕೋಟಕ್ ಮಹೀಂದ್ರಾ ಹೇಳಿದೆ. ಜೊತೆಗೆ ನಿಮ್ಮ ಮಾಸಿಕ ಆದಾಯದ ಲೆಕ್ಕವನ್ನೂ ಬ್ಯಾಂಕ್ (Bank) ಪಡೆಯಲಿದೆ. ಆವೆಲ್ಲಾ ಲೆಕ್ಕಾಚಾರದ ಬಳಿಕವೇ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಮನೆ ಸಾಲ ಸಿಗಲಿದೆ. 

ಗೃಹಸಾಲ ಬಡ್ಡಿ ಕಡಿತ ಮಾಡಿರುವ SBI:
ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ SBI ಇತ್ತೀಚೆಗೆ ಗೃಹ ಸಾಲ ಬಡ್ಡಿಯಲ್ಲಿ ಸಾಕಷ್ಟು ಕಡಿತ ಮಾಡಿದೆ. ಬ್ಯಾಂಕಿನ ಆರಂಭಿಕ ಬಡ್ಡಿ ದರ ಶೇ. 6.70 ಆಗಿದೆ.  ಈ ಬಡ್ಡಿ ದರದಲ್ಲಿ 75 ಲಕ್ಷ ತನಕ ಗೃಹ ಸಾಲ ಪಡೆಯಬಹುದಾಗಿದೆ.

ಇದನ್ನೂ ಓದಿ : Auto-Taxi ದರ ಹೆಚ್ಚಳ, ಹೊಸ ದರಗಳನ್ನು ತ್ವರಿತವಾಗಿ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News