ದೆಹಲಿ : ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಅಥವಾ ಸ್ವಂತ ವ್ಯವಹಾರ ಆರಂಭಿಸುವ ಬಗ್ಗೆ ಯೋಚನೆಯಲ್ಲಿದ್ದರೆ, SBI ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದೆ. ಎಸ್‌ಬಿಐ SME Gold Loan ಅನ್ನು ವ್ಯಾಪಾರಿಗಳಿಗೆ ಬಹಳ ಸುಲಭವಾಗಿ ನೀಡುತ್ತಿದೆ. ಈ ಸಾಲದ ವಿಶೇಷವೆಂದರೆ, ಇದರಲ್ಲಿ ಸಾಲಕ್ಕಾಗಿ ಬ್ಯಾಂಕಿಗೆ ಅಲೆದಾಡುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ  ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಎಸ್‌ಬಿಐನ SME ಚಿನ್ನದ ಮೇಲಿನ ಸಾಲ : 
SBIನ ಈ ಚಿನ್ನದ ಮೇಲಿನ ಸಾಲದ ಆಫರ್ ವ್ಯಾಪಾರ ಮಾಡುವುವವರಿಗಾಗಿ ಮಾತ್ರ ನೀಡಲಾಗುತ್ತದೆ.  ಆದ್ದರಿಂದ, ಈ ಆಫರ್ ಗೆ SME Gold Loan ಎಂದು ಹೆಸರಿಸಲಾಗಿದೆ. ಈ ಆಫರ್ ಅಡಿಯಲ್ಲಿ1 ಲಕ್ಷದಿಂದ 50 ಲಕ್ಷದವರೆಗಿನ ಸಾಲವನ್ನು  ನೀಡಲಾಗುವುದು. ವ್ಯಾಪಾರಸ್ಥರು ಈ ಸಾಲ ಸೌಲಭ್ಯದ  ಮೂಲಕ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. 


ಇದನ್ನೂ ಓದಿ : Petrol-Diesel Rate: ದೇಶಾದ್ಯಂತ 100 ರೂ.ಗಡಿ ದಾಟಲಿದೆಯೇ ಪೆಟ್ರೋಲ್-ಡಿಸೇಲ್ ಬೆಲೆ? ಕಾರಣ ಇಲ್ಲಿದೆ


ಬಹಳ ಆಕರ್ಷಕ ಬಡ್ಡಿದರ : 
ಎಸ್‌ಬಿಐನ ಈ ವಿಶೇಷ ಚಿನ್ನದ ಮೇಲಿನ ಸಾಲವು ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿ (interest rate) ಲಭ್ಯವಿದೆ.  ಅಂದರೆ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿಗಳ ಚಿನ್ನದ ಸಾಲವನ್ನು ತೆಗೆದುಕೊಂಡರೆ, ಇದಕ್ಕಾಗಿ ನೀವು ಕೇವಲ 7,250 ರೂಪಾಯಿಗಳನ್ನು ಬಡ್ಡಿಯಾಗಿ (Interest) ಪಾವತಿಸಬೇಕಾಗುತ್ತದೆ. ಈ ಸಾಲದ ಮೇಲಿನ ಬಡ್ಡಿ ದರವು ಅತ್ಯಂತ ಅಗ್ಗವಾಗಿದೆ.  


ಬ್ಯಾಲೆನ್ಸ್ ಶೀಟ್ ಇಲ್ಲದೆ ಸಾಲ ಪಡೆದುಕೊಳ್ಳಬಹುದು : 
ಸಾಮಾನ್ಯವಾಗಿ, ವ್ಯಾಪಾರಸ್ಥರು  ಯಾವುದೇ ರೀತಿಯ ಸಾಲವನ್ನು ಪಡೆದುಕೊಳ್ಳುವ ವೇಳೆ, ಬ್ಯಾಲೆನ್ಸ್ ಶೀಟ್ (Balance Sheet) ಅನ್ನು ತೋರಿಸಬೇಕಾಗುತ್ತದೆ.  ಆದರೆ ಎಸ್‌ಬಿಐನ ಈ ವಿಶೇಷ ಕೊಡುಗೆಯಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ತೋರಿಸುವ ಅಗತ್ಯವಿಲ್ಲ.  ಚಿನ್ನವನ್ನು ಅಡವಿಡುವ ಮೂಲಕ, ಸಾಲ ತೆಗೆದುಕೊಳ್ಳಬಹುದು. ಎಸ್‌ಬಿಐ ತನ್ನ ಅಧಿಕೃತ Twitter ಹ್ಯಾಂಡಲ್‌ನಲ್ಲಿ  ಈ ಚಿನ್ನದ ಮೇಲಿನ  ಸಾಲದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ  ಸಾಲ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಎಸ್ ಬಿಐ ತಿಳಿಸಿದೆ. 


ಇದನ್ನೂ ಓದಿ : E- Vehicle: ಈಗ ಇ-ಕಾರ್‌ಗೆ ಕಚೇರಿ, ಮಾಲ್‌ನಲ್ಲೂ ಚಾರ್ಜಿಂಗ್ ಕೇಂದ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.