ಬೆಂಗಳೂರು : ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ಸಂತಸದ ಸುದ್ದಿ ಇದು. ದೇಶದ ಈ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಗೂ ಬರುವುದು  57,000 ರೂಪಾಯಿ. ಹೌದು, ಬ್ಯಾಂಕ್ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹಲವು ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ. ಬ್ಯಾಂಕ್ ಆರಂಭಿಸಿರುವ  ಯೋಜನೆಯ ಅಡಿಯಲ್ಲಿ ನೀವು ಕೂಡಾ 57,000 ರೂಪಾಯಿಗಳನ್ನು  ಪಡೆಯಬಹುದು. 


COMMERCIAL BREAK
SCROLL TO CONTINUE READING

ಎಸ್‌ಬಿಐನಲ್ಲಿ ಆರ್‌ಡಿ ಖಾತೆ  ಇದ್ದರೆ ಸಿಗುವುದು  57,658 ರೂ. : 
Recurring Deposit Scheme ಅಡಿಯಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಉದಾಹರಣೆಗೆ, ನೀವು 5 ವರ್ಷಗಳವರೆಗೆ ತಿಂಗಳಿಗೆ 5,000 ರೂ.ಗಳ ಆರ್‌ಡಿ ಮಾಡಿದ್ದೀರಿ ಎಂದಾದರೆ 6.75% ದರದಲ್ಲಿ ಬಡ್ಡಿ ಸಿಗುತ್ತದೆ. ಇದರ ಪ್ರಕಾರ ಮೆಚ್ಯೂರಿಟಿ ವೇಳೆಗೆ 57,658 ರೂಪಾಯಿ ಹೆಚ್ಚುವರಿ  ಹಣ ಪಡೆಯುವುದು ಸಾಧ್ಯವಾಗುತ್ತದೆ.  


ಇದನ್ನೂ ಓದಿ : ವಾಹನ ಸವಾರರಿಗೆ ಬಿಗ್ ರಿಲೀಫ್ ! ಪೆಟ್ರೋಲಿಯಂ ಬೆಲೆ ಬಗ್ಗೆ ಕೇಂದ್ರ ಸಚಿವರೇ ನೀಡಿದ ಮಾಹಿತಿ


5 ವರ್ಷಗಳಲ್ಲಿ 3 ಲಕ್ಷ ರೂಪಾಯಿಗಳನ್ನು ಠೇವಣಿ : 
5 ವರ್ಷಗಳ ಅವಧಿಗೆ ಪ್ರತಿ ತಿಂಗಳು 5000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ 3 ಲಕ್ಷ ರೂಪಾಯಿ ಹೂಡಿಕೆಯಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯಲ್ಲಿ ನಿಮ್ಮ ಖಾತೆಗೆ 3,57,658 ಲಕ್ಷ ರೂಪಾಯಿ ಜಮಾವಣೆಯಾಗುತ್ತದೆ. ಇದರಲ್ಲಿ 3 ಲಕ್ಷ ರೂ. ನಿಮ್ಮ ಹೂಡಿಕೆಯಾಗಿದ್ದರೆ 57,658ರೂ. ಬಡ್ಡಿಯ  ಮೊತ್ತವಾಗಿರುತ್ತದೆ. 


ಹಿರಿಯ ನಾಗರಿಕರಿಗೆ ಎಷ್ಟು ಪ್ರಯೋಜನ ಸಿಗಲಿದೆ ? : 
SBI ಆರ್ ಡಿ ಮೇಲೆ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿಯ ಲಾಭ ಸಿಗುತ್ತದೆ. ಹಿರಿಯ ನಾಗರಿಕರು ಆರ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಆ ಹೂಡಿಕೆ ಮೇಲೆ  6.75 ರಿಂದ ಶೇಕಡಾ 7.25 ರವರೆಗಿನ ಬಡ್ಡಿ ಸಿಗುತ್ತದೆ. 


ಇದನ್ನೂ ಓದಿ : Gold Price Today: ಚಿನ್ನ ಪ್ರಿಯರೇ.. ಇಂದಿನ ಬಂಗಾರದ ಬೆಲೆ ಕೇಳಿದ್ರೆ ನಿಮ್ಮ ಖುಷಿ ದುಪ್ಪಟ್ಟಾಗುತ್ತೆ


ಎಷ್ಟು ತಿಂಗಳವರೆಗೆ ಹೂಡಿಕೆ ಮಾಡಬಹುದು? :
ಎಸ್‌ಬಿಐನಲ್ಲಿ 12 ತಿಂಗಳಿಂದ 120 ತಿಂಗಳವರೆಗೆ ಆರ್‌ಡಿ ಮಾಡಬಹುದು. ಇದರಲ್ಲಿ, ಕನಿಷ್ಟ 100 ರೂಯಿಂದ ಹೂಡಿಕೆ ಪ್ರಾರಂಭಿಸಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.