Safest Bank of India: ಈ ಮೂರು ಬ್ಯಾಂಕ್ ನಲ್ಲಿ ಇದ್ದರಷ್ಟೇ ನಿಮ್ಮ ಹಣ ಸೇಫ್ ! ಆರ್ ಬಿಐ ನೀಡಿದ ಮಾಹಿತಿ ಇದು !

Safest Bank of India:ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಸುರಕ್ಷಿತ ಬಂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿಮ್ಮ ಹಣ ಯಾವ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿಲ್ಲ ಎನ್ನುವುದು ಈ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ.

Written by - Ranjitha R K | Last Updated : Apr 17, 2023, 04:22 PM IST
  • ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಾರೆ.
  • ಬ್ಯಾಂಕ್ ನಲ್ಲಿ ಇಟ್ಟ ಹಣ ಸುರಕ್ಷಿತವಾಗಿರುತ್ತದೆ ಎನ್ನುವ ಕಲ್ಪನೆ ಜನ ಸಾಮಾನ್ಯರದ್ದು
  • ಆದರೆ ಕೆಲವೊಮ್ಮೆ ಬ್ಯಾಂಕ್ ಗಳೇ ನಷ್ಟದ ಹೊರೆಯಲ್ಲಿ ಮುಳುಗಿ ಬಿಡುತ್ತವೆ.
Safest Bank of India: ಈ ಮೂರು ಬ್ಯಾಂಕ್ ನಲ್ಲಿ  ಇದ್ದರಷ್ಟೇ ನಿಮ್ಮ ಹಣ ಸೇಫ್ ! ಆರ್ ಬಿಐ ನೀಡಿದ ಮಾಹಿತಿ ಇದು !  title=

Safest Bank of India : ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಾರೆ.  ತಮ್ಮ ಕಷ್ಟ ಕಾಲದಲ್ಲಿ ಈ ಹಣ ನೆರವಿಗೆ ಬರಲಿ ಎನ್ನುವ ಉದ್ದೇಶದಿಂದ ಬ್ಯಾಂಕ್ ನಲ್ಲಿ ಹಣ ಇಡುತ್ತಾರೆ. ಬ್ಯಾಂಕ್ ನಲ್ಲಿ ಇಟ್ಟ ಹಣ ಸುರಕ್ಷಿತವಾಗಿರುತ್ತದೆ ಎನ್ನುವ ಕಲ್ಪನೆ ಜನ ಸಾಮಾನ್ಯರದ್ದಾಗಿರುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್ ಗಳೇ ನಷ್ಟದ ಹೊರೆಯಲ್ಲಿ ಮುಳುಗಿ ಬಿಡುತ್ತವೆ. ಹಾಗಾಗಿ ನೀವು ಯಾವುದೇ ಬ್ಯಾಂಕ್ ನಲ್ಲಿ ಹಣ ಠೇವಣಿ  ಮಾಡುವ ಮುನ್ನ ನಿಮ್ಮ ಹಣ ಎಷ್ಟು ಸೇಫ್ ಆಗಿ ಇರಲಿದೆ ಎನ್ನುವ ಮಾಹಿತಿ ನಿಮಗೂ ಇರಬೇಕು. ರಿಸರ್ವ್ ಬ್ಯಾಂಕ್ ಈ ವರ್ಷದ ಆರಂಭದಲ್ಲಿ ದೇಶದ ಅತ್ಯಂತ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  

ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿಮ್ಮ ಹಣ ಯಾವ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿಲ್ಲ ಎನ್ನುವುದು ಈ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಒಂದು ದೇಶದಲ್ಲಿ ಒಂದು ದೊಡ್ಡ ಬ್ಯಾಂಕ್ ವಿಫಲವಾದರೆ, ಅದರ ನಷ್ಟವು ಇಡೀ ಭಾರತೀಯ ಆರ್ಥಿಕತೆಯ ಮೇಲೆ ಬೀಳುತ್ತದೆ.  

ಇದನ್ನೂ ಓದಿ : Jio Recharge Plan: ಕಡಿಮೆ ಮೊತ್ತದ ಜಿಯೋ ಅದ್ಭುತ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಿರಿ

ಆರ್ ಬಿಐ ಪಟ್ಟಿಯಲ್ಲಿರುವ ಬ್ಯಾಂಕ್‌ಗಳು : 
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯಲ್ಲಿ ಒಂದು ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್ ಗಳ ಹೆಸರು ಸೇರಿದೆ. ಸರ್ಕಾರಿ ವಲಯದ  ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮತ್ತು ICICI ಬ್ಯಾಂಕ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದರರ್ಥ ನಿಮ್ಮ ಖಾತೆಯು ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್‌ನಲ್ಲಿಟ್ಟರೆ   ಯಾವುದೇ ರೀತಿಯಲ್ಲಿಯೂ ಚಿಂತಿಸುವ ಅಗತ್ಯ ಇಲ್ಲ. 

ಈ ಪಟ್ಟಿಯಲ್ಲಿ ಯಾವ ಬ್ಯಾಂಕ್‌ಗಳು ಸ್ಥಾನ ಪಡೆಯಬಹುದು? : 
usual capital conservation buffer ಜೊತೆಗೆ additional Common Equity Tier 1 (CET1) ಅನ್ನು ನಿರ್ವಹಿಸುವ ಬ್ಯಾಂಕ್‌ಗಳು ಮಾತ್ರ ಈ ಪಟ್ಟಿಯಲ್ಲಿ ಬರುತ್ತವೆ. ಆರ್‌ಬಿಐ ಪಟ್ಟಿಯ ಪ್ರಕಾರ, ಎಸ್‌ಬಿಐನ ರಿಸ್ಕ್ ವೆಯ್ಟೆಡ್ ಅಸೆಟ್ ನ ಶೇಕಡಾ 0.60 ಅನ್ನು ಟೈರ್-1 ಆಗಿ ಇರಿಸಲಾಗಿದೆ.  ಇನ್ನು ICICI ಮತ್ತು HDFCಯ  ರಿಸ್ಕ್ ವೆಯ್ಟೆಡ್ ಅಸೆಟ್  0.20 ಪ್ರತಿಶತವಾಗಿದೆ.   

ಇದನ್ನೂ ಓದಿ :  Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ

ಈ ಬ್ಯಾಂಕ್‌ಗಳ ಮೇಲೆ ಆರ್‌ಬಿಐ  ನಿಗಾ :
ರಿಸರ್ವ್ ಬ್ಯಾಂಕ್‌ನ ಈ ಪಟ್ಟಿಯಲ್ಲಿ ಬರುವ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ತೀವ್ರ ನಿಗಾ ಇರಿಸುತ್ತದೆ. ರಿಸರ್ವ್ ಬ್ಯಾಂಕ್ ಈ ಬ್ಯಾಂಕ್‌ಗಳ ದಿನನಿತ್ಯದ ಕಾರ್ಯನಿರ್ವಹಣೆಯ ಮೇಲೆ ಕಣ್ಣಿಡುತ್ತದೆ. ಇಷ್ಟೇ ಅಲ್ಲ, ಬ್ಯಾಂಕ್ ಸಾಲ ನೀಡುವ ಯಾವುದೇ ದೊಡ್ಡ ಯೋಜನೆಯ ಬಗ್ಗೆ ಮಾತುಕತೆ ನಡೆಸಿದರೆ, ಅದನ್ನು ಸಹ ಮೌಲ್ಯಮಾಪನ ಮಾಡಲಾಗುತ್ತದೆ. ಇದು ಬ್ಯಾಂಕಿನ ಒಟ್ಟಾರೆ ವ್ಯವಹಾರದ ಮೇಲೆ ಏನಾದರೂ ಋಣಾತ್ಮಕ ಪರಿಣಾಮ ಬೀರಲಿದೆಯೇ ಎನ್ನುವುದನ್ನು ಪರಿಶೀಲಿಸುತ್ತದೆ. 

2015 ರಿಂದ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿ ಬಿಡುಗಡೆ:
ರಿಸರ್ವ್ ಬ್ಯಾಂಕ್ 2015 ರಿಂದ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಈ ಬ್ಯಾಂಕ್‌ಗಳಿಗೆ ಆರ್‌ಬಿಐ ಕೂಡ ರೇಟಿಂಗ್‌ಗಳನ್ನು ನೀಡಿದೆ. ಈ ರೇಟಿಂಗ್ ನಂತರವೇ, ಈ ಪ್ರಮುಖ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಇದುವರೆಗೆ ಈ ಪಟ್ಟಿಯಲ್ಲಿ 3 ಬ್ಯಾಂಕ್‌ಗಳ ಹೆಸರು ಮಾತ್ರ ಸೇರ್ಪಡೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News