Petrol ptrice today : ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯ ಪರಿಣಾಮ ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ. ಇಂದು ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ಅಗ್ಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 84 ಡಾಲರ್‌ಗೆ ತಲುಪಿದೆ. ಇದೇ ವೇಳೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮುಖ್ಯವಾದ ಮಾಹಿತಿಯನ್ನು ನೀಡಿದ್ದಾರೆ. ದೇಶದ ಜನತೆಗೆ ಶೀಘ್ರವೇ ಅಗ್ಗದ ದರದಲ್ಲಿ ಪೆಟ್ರೋಲ್ ಸಿಗಲಿದೆ ಎನ್ನುವುದನ್ನು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.
ಹರ್ದೀಪ್ ಸಿಂಗ್ ಪುರಿ ನೀಡಿದ ಮಾಹಿತಿ :
ನಿರ್ದಿಷ್ಟ ಗಡುವು ಅಂದರೆ 2030ಕ್ಕಿಂತ ಐದು ವರ್ಷಗಳ ಮುಂಚಿತವಾಗಿ ಅಗ್ಗದ ಬೆಲೆಯಲ್ಲಿ ಪೆಟ್ರೋಲಿಯಂ ಒದಗಿಸುವ ಕಾರ್ಯ ನೆರವೇರುವ ವಿಶ್ವಾಸವನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ವ್ಯಕ್ತಪಡಿಸಿದ್ದಾರೆ. ಶೇಕಡಾ 20 ರಷ್ಟು ಎಥೆನಾಲ್ನೊಂದಿಗೆ ಮಿಶ್ರಣಗೊಂಡ ಪೆಟ್ರೋಲ್ ಅನ್ನು ಒದಗಿಸುವ ಗುರಿಯನ್ನು ಸರ್ಕಾರ 2025ಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಸರ್ಕಾರವು ಶೇ.20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Gold Price Today: ಚಿನ್ನ ಪ್ರಿಯರೇ.. ಇಂದಿನ ಬಂಗಾರದ ಬೆಲೆ ಕೇಳಿದ್ರೆ ನಿಮ್ಮ ಖುಷಿ ದುಪ್ಪಟ್ಟಾಗುತ್ತೆ
11 ರಾಜ್ಯಗಳಲ್ಲಿ ಎಥೆನಾಲ್ ಪರಿಚಯ :
ಫೆಬ್ರವರಿಯಲ್ಲಿ, ಹಸಿರು ಇಂಧನದ ಬಗ್ಗೆ ಜಾಗೃತಿ ಮೂಡಿಸಲು 11 ರಾಜ್ಯಗಳ ಆಯ್ದ ಪಂಪ್‌ಗಳಲ್ಲಿ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಅನ್ನು ಪರಿಚಯಿಸಲಾಯಿತು. ಸದ್ಯ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗಿದೆ. ಈ ಮಧ್ಯೆ, ಭಾರತ ಜೂನ್ 2022 ರ ವೇಳೆಗೆ ನಿಗದಿತ ಸಮಯಕ್ಕಿಂತ ಐದು ತಿಂಗಳ ಮುಂಚಿತವಾಗಿ ಪೆಟ್ರೋಲ್‌ನಲ್ಲಿ ಶೇಕಡಾ 10 ರಷ್ಟು ಎಥೆನಾಲ್ ಅನ್ನು ಮಿಶ್ರ ಮಾಡುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವುದರಿಂದ ಇಂಗಾಲದ ಮಾನಾಕ್ಸೈಡ್ ಹೊರಸೂಸುವಿಕೆಯ ಪ್ರಮಾಣ ಕೂಡಾ ಕಡಿಮೆಯಾಗಲಿದೆ.
ಪೆಟ್ರೋಲ್-ಡೀಸೆಲ್ ಇಂದಿನ ದರ ಎಷ್ಟು ?
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್ ಬೆಲೆ ಇಂದು ಕೂಡಾ 101.94ರೂಪಾಯಿ ಆಗಿದೆ. ಮೈಸೂರಿನಲ್ಲಿ 101.50 ರೂ. ಆಗಿದ್ದರೆ, ದ. ಕ ಜಿಲ್ಲೆಯಲ್ಲಿ 101.21ರೂ. ಧಾರವಾಡದಲ್ಲಿ 101.71ರೂ. ಶಿವಮೊಗ್ಗದಲ್ಲಿ 103.61, ಬೆಳಗಾವಿಯಲ್ಲಿ 102.48ರೂಪಾಯಿ ಆಗಿದೆ.
ಇದನ್ನೂ ಓದಿ : Gold: ಬಂಗಾರದ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್: ಶೇ.74ರಷ್ಟು ಕುಸಿತ ಕಂಡ ಚಿನ್ನ!
ಇನ್ನು ಡಿಸೇಲ್ ಬೆಲೆ ಬೆಂಗಳೂರಿನಲ್ಲಿ 87.89 ರೂಪಾಯಿ ಆಗಿದೆ. ಮೈಸೂರಿನಲ್ಲಿ 87.49 ರೂ. ಆಗಿದ್ದರೆ, ದ. ಕ ಜಿಲ್ಲೆಯಲ್ಲಿ 87.20ರೂ. ಧಾರವಾಡದಲ್ಲಿ 87.71ರೂ. ಶಿವಮೊಗ್ಗದಲ್ಲಿ 89. 35 ರೂ , ಬೆಳಗಾವಿಯಲ್ಲಿ 88.41 ರೂಪಾಯಿ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.