SEBI Settlement Cycle: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು Big News! ಜಾರಿಯಾಗುತ್ತಿದೆ T+1 ಸೆಟಲ್ಮೆಂಟ್ ಸೈಕಲ್
Share Market Rule: ಸೆಟಲ್ಮೆಂಟ್ ಸೈಕಲ್ ಅನ್ನು ಜಾರಿಗೊಳಿಸುವಂತೆ ಕೋರಿ ಮಾರುಕಟ್ಟೆ ನಿಯಂತ್ರಕ SEBI ಹಲವು ಬೇಡಿಕೆಗಳು ಬಂದಿದ್ದವು. ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮವೊಂದನ್ನು ರೂಪಿಸಲಾಗಿದೆ.
ನವದೆಹಲಿ: SEBI Settlement Cycle - ಷೇರುಪೇಟೆಯಲ್ಲಿ ಹೂಡಿಕೆ (Share Market Trading) ಮಾಡುವವರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಮಾರುಕಟ್ಟೆಗಳ ನಿಯಂತ್ರಕ SEBI ಷೇರುಗಳ ಖರೀದಿ ಮತ್ತು ಮಾರಾಟದ ಇತ್ಯರ್ಥಕ್ಕಾಗಿ ಪರ್ಯಾಯ ಆಧಾರದ ಮೇಲೆ 'T+1' (ವ್ಯಾಪಾರ ಮತ್ತು ಮುಂದಿನ ದಿನ) ಹೊಸ ವ್ಯವಸ್ಥೆಯನ್ನು (Settlement Cycle) ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಿಸುವುದು ಇದರ ಉದ್ದೇಶ. ಪ್ರಸ್ತುತ, ದೇಶೀಯ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿನ (Bse Trading) ವ್ಯವಹಾರಗಳನ್ನು ಮುಚ್ಚಲು ವ್ಯಾಪಾರದ ದಿನದ ನಂತರ ಎರಡು ವ್ಯವಹಾರ ದಿನಗಳು ಬೇಕಾಗುತ್ತದೆ (T+2) ಎಂಬುದು ಇಲ್ಲಿ ಉಲ್ಲೇಖನೀಯ.
ಫೆಬ್ರುವರಿ 2022 ರಿಂದ ಜಾರಿಗೆ ಬರಲಿದೆ T+1
SEBI ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನಿಯಂತ್ರಕವು ಷೇರು ಖರೀದಿ-ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇತ್ಯರ್ಥ ಸಮಯಕ್ಕಾಗಿ 'T + 1' ಅಥವಾ 'T + 2' ಆಯ್ಕೆಯನ್ನು ನೀಡುವ ಮೂಲಕ ಷೇರು ವಿನಿಮಯ (Share Market Investment) ಕೇಂದ್ರಗಳಿಗೆ (NSE) ಫ್ಲೆಕ್ಸಿಬಿಲಿಟಿ ಒದಗಿಸಿದೆ. ಈ ಸೆಟಲ್ಮೆಂಟ್ ಪ್ಲಾನ್ ಷೇರುಗಳಿಗೆ ಮತ್ತು ಐಚ್ಛಿಕವಾಗಿದೆ, ಅಂದರೆ ವ್ಯಾಪಾರಿಗಳು ಬಯಸಿದಲ್ಲಿ ಅದನ್ನು ಆರಿಸಿಕೊಳ್ಳಬಹುದು. ಈ ಹೊಸ ನಿಯಮವು 25 ಫೆಬ್ರವರಿ 2022 ರಿಂದ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.
ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ
ಇದಕ್ಕೂ ಮೊದಲು T+1 ಅನುಷ್ಠಾನಕ್ಕೆ 1 ಜನವರಿ 2022 ಗಡುವನ್ನು ನಿಗದಿಪಡಿಸಲಾಗಿತ್ತು. ಆದರೆ SEBI ಅದರಲ್ಲಿ ಕೆಲವು ಸಡಿಲಿಕೆಗಳನ್ನು ನೀಡಿ, ಈ ಗಡುವನ್ನು 25 ಫೆಬ್ರವರಿ 2022 ಕ್ಕೆ ವಿಸ್ತರಿಸಿದೆ, ಈಗಾಗಲೇ ಗಡುವು ವಿಸ್ತರಣೆಗೆ ಬೇಡಿಕೆ ಕೂಡ ಇತ್ತು. ಇಷ್ಟು ಬೇಗ ಹೊಸ ವ್ಯವಸ್ಥೆ ಜಾರಿಗೆ ತರಲು ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಈ ಸೆಟಲ್ಮೆಂಟ್ ಯೋಜನೆ ಷೇರುಗಳಿಗಾಗಿಯೂ ಕೂಡ ಇರಲಿದೆ. ಮೊದಲು ಇದು ವಿನಿಮಯಕ್ಕಾಗಿ ಐಚ್ಛಿಕವಾಗಿತ್ತು, ಆದರೆ ಈಗ ಅದು ಕಡ್ಡಾಯವಾಗಿರಲಿದೆ.
ಸೆಟಲ್ಮೆಂಟ್ ಸೈಕಲ್ ಕಡಿಮೆ ಮಾಡಲು ಬೇಡಿಕೆ ಇತ್ತು
ಇದಕ್ಕೂ ಮೊದಲು ಸೆಟಲ್ಮೆಂಟ್ ಸೈಕಲ್ ನಲ್ಲಿ ಇಳಿಕೆ ಮಾಡುವಂತೆ ಮಾರುಕಟ್ಟೆ (Stock Exchange) ನಿಯಂತ್ರಕ SEBI ಹಲವಾರು ಬೇಡಿಕೆಗಳು ಬಂದಿದವು. ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸೇಬಿ ಹೊಸ ನಿಯಮವನ್ನು ಸಿದ್ಧಪಡಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ SEBI, ಷೇರು ವಿನಿಮಯ ಕೇಂದ್ರಗಳು, ಕ್ಲಿಯರಿಂಗ್ ಕಾರ್ಪೊರೇಷನ್‌ಗಳು ಮತ್ತು ಠೇವಣಿದಾರರಂತಹ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳೊಂದಿಗೆ ಚರ್ಚಿಸಿದ ನಂತರ, ಷೇರು ವಿನಿಮಯ ಕೇಂದ್ರವು T+1 ಅಥವಾ T+2 ಸೆಟಲ್ಮೆಂಟ್ ಸೈಕಲ್ ನಲ್ಲಿ ನೆಲೆಗೊಳ್ಳಲು ಸೌಲಭ್ಯವನ್ನು ಹೊಂದಿರುತ್ತದೆ ಎಂದು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ-Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ!
1 ತಿಂಗಳು ಮುಂಚಿತವಾಗಿ ನೋಟಿಸ್ ನೀಡಬೇಕು
SEBI ಸುತ್ತೋಲೆಯ ಪ್ರಕಾರ, ಯಾವುದೇ ಷೇರು ವಿನಿಮಯ ಕೇಂದ್ರವು ಎಲ್ಲಾ ಷೇರುದಾರರಿಗೆ ಯಾವುದೇ ಷೇರಿಗೆ T+1 ಸೆಟಲ್ಮೆಂಟ್ ಸೈಕಲ್ ಆಯ್ಕೆ ಮಾಡಬಹುದು. ಆದರೆ ಸೆಟಲ್ಮೆಂಟ್ ಸೈಕಲ್ ಬದಲಾಯಿಸಲು, ಕನಿಷ್ಠ ಒಂದು ತಿಂಗಳ ನೋಟಿಸ್ ನೀಡಬೇಕು. ಒಮ್ಮೆ ಸ್ಟಾಕ್ ಎಕ್ಸ್ಚೇಂಜ್ ಯಾವುದೇ ಷೇರಿಗೆ T+1 ಸೆಟಲ್ಮೆಂಟ್ ಸೈಕಲ್ ಅನ್ನು ಆಯ್ಕೆ ಮಾಡಿಕೊಂಡರೆ, ಅದು ಕನಿಷ್ಟ 6 ತಿಂಗಳವರೆಗೆ ಮುಂದುವರೆಯಬೇಕಾಗುತ್ತದೆ. ಷೇರು ವಿನಿಮಯ ಕೇಂದ್ರವು T+2 ಸೆಟಲ್ಮೆಂಟ್ ಸೈಕಲ್ ಆಯ್ಕೆ ಮಾಡಲು ಬಯಸಿದರೆ, ಅದು ಮುಂಚಿತವಾಗಿ ಒಂದು ತಿಂಗಳ ಸೂಚನೆಯನ್ನು ನೀಡಬೇಕಾಗುತ್ತದೆ. ಷೇರು ಮಾರುಕಟ್ಟೆಯು ತನ್ನ ವೆಬ್‌ಸೈಟ್‌ನಲ್ಲಿ ಆ ಕುರಿತು ಪ್ರಚಾರ ಕೈಗೊಳ್ಳಬೇಕು ಎಂದೂ ಕೂಡ ಹೇಳಲಾಗಿದೆ.
ಇದನ್ನೂ ಓದಿ-Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ
ಆದರೆ, ಟಿ+1 ಮತ್ತು ಟಿ+2 ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ. ಸ್ಟಾಕ್ ಎಕ್ಸ್ಚೇಂಜ್ನಲ್ಲಿನ ಎಲ್ಲಾ ರೀತಿಯ ವಹಿವಾಟುಗಳಿಗೆ ಇದು ಅನ್ವಯಿಸುತ್ತದೆ. ಪ್ರಸ್ತುತ, ಏಪ್ರಿಲ್ 2003 ರಿಂದ ದೇಶದಲ್ಲಿ T+2 ಸೆಟಲ್ಮೆಂಟ್ ಸೈಕಲ್ ಜಾರಿಯಲ್ಲಿದೆ. ಇದಕ್ಕೂ ಮೊದಲು T+3 ಸೆಟಲ್ಮೆಂಟ್ ಸೈಕಲ್ ಜಾರಿಯಲ್ಲಿತ್ತು. ಆದರೆ ಇದೀಗ SEBI T+1 ಸೈಕಲ್ ಅಳವಡಿಸಲು ಮುಂದಾಗಿದೆ.
ಇದನ್ನೂ ಓದಿ-National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.