Stock market: ಬಜೆಟ್‌ಗೂ ಮುನ್ನ ಷೇರುಪೇಟೆ ಭಾರಿ ಕುಸಿತ ಕಂಡಿದ್ದರೂ ಈ 5 ಷೇರುಗಳಲ್ಲಿ ಭಾರಿ ಲಾಭ

ಸೆನ್ಸೆಕ್ಸ್ ಮತ್ತು ನಿಫ್ಟಿಗಳ ದೊಡ್ಡ ಕುಸಿತದ ಮಧ್ಯೆಯೂ ಕೆಲವು ಷೇರುಗಳು ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿವೆ.

ಮಧ್ಯಪ್ರಾಚ್ಯ(Middle East)ದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಚ್ಚಾ ತೈಲದ ಬೆಲೆಯಲ್ಲಿ ದಾಖಲೆಯ ಏರಿಕೆಯೊಂದಿಗೆ ದೇಶೀಯ ಷೇರು ಮಾರುಕಟ್ಟೆಯು ಭಾರೀ ಕುಸಿತ ಕಂಡಿದೆ. ಶುಕ್ರವಾರ ಮುಕ್ತಾಯವಾದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 427.44(ಶೇ.0.72) ಅಂಕ ಕುಸಿತ ಕಂಡಿದ್ದರೆ, ನಿಫ್ಟಿ 139.85(ಶೇ.0.79) ಅಂಕಗಳ ಕುಸಿತ ಕಂಡಿದೆ. ಕಳೆದೊಂದು ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರ ಭಾರೀ ಪ್ರಮಾಣದ ಸಂಪತ್ತು ಕರಗಿಹೋಗಿದೆ. ಕಳೆದ ಒಂದು ವಾರದಲ್ಲಿ ಸೆನ್ಸೆಕ್ಸ್ ಸುಮಾರು 2182.46(ಶೇ.3.56) ಅಂಕ ಕುಸಿತ ಕಂಡಿದ್ದರೆ, ನಿಫ್ಟಿ 618.50(ಶೇ.3.39) ಅಂಕ ಕುಸಿತ ಕಂಡಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿಗಳ ದೊಡ್ಡ ಕುಸಿತದ ಮಧ್ಯೆಯೂ ಕೆಲವು ಷೇರುಗಳು ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿವೆ. ಇಡೀ ಮಾರುಕಟ್ಟೆಯಲ್ಲಿಯೇ ಕಡರಿ ಕುಣಿತ ಜೋರಾಗಿದ್ದರೆ ಈ ಷೇರುಗಳಲ್ಲಿನ ಗೂಳಿ ನೆಗೆತವು ಭರ್ಜರಿಯಾಗಿಯೇ ಇತ್ತು. ಹೀಗಾಗಿ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದವರು ಭಾರೀ ಮಾರುಕಟ್ಟೆ ಕುಸಿತದ ಮಧ್ಯೆ ಲಾಭ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಹಾಗಾದರೆ ಯಾವವು ಆ ಷೇರುಗಳು ಅಂತೀರಾ..?  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

ಕಿಂಗ್ಸ್ ಇನ್‌ಫ್ರಾ ವೆಂಚರ್ಸ್ ಲಿಮಿಟೆಡ್‌(Kings Infra Ventures)ನ ಷೇರು ಶುಕ್ರವಾರದ ವಹಿವಾಟಿನಲ್ಲಿ 52.22 ರೂ.ನಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನ ಅಂತ್ಯದ ವೇಳೆಗೆ 52.60 ರೂ. ಇತ್ತು. ಈ ಷೇರು ಕಳೆದ ಕೇವಲ 1 ತಿಂಗಳಲ್ಲಿ ಶೇ.52ರಷ್ಟು ರಿಟರ್ನ್ಸ್ ನೀಡಿದ್ದರೆ, ಕಳೆದ 1 ವಾರದಲ್ಲಿಯೇ ಶೇ.31.50ರಷ್ಟು ಲಾಭ ನೀಡಿದೆ.

2 /5

ಖಂಡ್ವಾಲಾ ಸೆಕ್ಯುರಿಟೀಸ್ ಲಿಮಿಟೆಡ್(Khandwala Securities)ಷೇರು ಕಳೆದ ಕೇವಲ 1 ತಿಂಗಳಿನಲ್ಲಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದೆ. ಈ ಷೇರು ಕಳೆದ ಕೇವಲ 5 ದಿನಗಳಲ್ಲಿಯೇ ಶೇ.56ರಷ್ಟು ಲಾಭ ನೀಡಿದೆ.  

3 /5

ವಿವಿಡ್ ಗ್ಲೋಬಲ್ ಇಂಡಸ್ಟ್ರೀಸ್ (Vivid Global Industries)ಷೇರು ಕಳೆದ ಕೇವಲ 1 ತಿಂಗಳಿನಲ್ಲಿ ಶೇ.87.86ರಷ್ಟು ರಿಟರ್ನ್ಸ್ ನೀಡಿದೆ. ಕಳೆದ ಕೇವಲ 5 ದಿನಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಶೇ.43.38ರಷ್ಟು ಲಾಭ ನೀಡಿದೆ.

4 /5

ಇನ್ನೋವೇಟಿವ್ ಟೆಕ್ನಾಲಜಿ(innovative tech) ಷೇರು ಕಳೆದ 1 ತಿಂಗಳಿನಲ್ಲಿ ಹೂಡಿಕೆದಾರರಿಗೆ ಬಂಪರ್ ಆದಾಯವನ್ನು ತಂದುಕೊಟ್ಟಿದೆ. ಈ ಷೇರು 1 ತಿಂಗಳಿಗೆ ಶೇ.26.58ರಷ್ಟು ರಿಟರ್ನ್ಸ್ ನೀಡಿದ್ದರೆ, ಕಳೆದ 5 ದಿನಗಳಲ್ಲಿ ಶೇ.11.09ರಷ್ಟು ಲಾಭ ನೀಡಿದೆ.

5 /5

UH Zaveri (UH Zaveri Ltd) ಷೇರು ಕೂಡ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಈ ಷೇರು ಕಳೆದ 1 ತಿಂಗಳಿನಲ್ಲಿ ಶೇ.74.24 ರಷ್ಟು ಮತ್ತು ಕಳೆದ ಕೇವಲ 5 ದಿನಗಳಲ್ಲಿ ಶೇ.21ರಷ್ಟು ಲಾಭ ನೀಡಿದೆ.