Share Market Updates Today, ಐವತ್ತೊಂದು ಸಾವಿರ ಗಡಿ ದಾಟಿದ ಸೆನ್ಸೆಕ್ಸ್
Share Market Updates Today - ಷೇರು ಮಾರುಕಟ್ಟೆ ಇಂದು ಹೊಸ ಗರಿಷ್ಠ ಅಂದರೆ 51,031.39 ರಿಂದ ತನ್ನ ದಿನದ ವಹಿವಾಟು ಆರಂಭಿಸಿದೆ. 30 ಷೇರುಗಳ ಬಿಎಸ್‌ಇ ಷೇರು ಸೂಚ್ಯಂಕ ಇಂದು 417 ಪಾಯಿಂಟ್‌ಗಳ ಏರಿಕೆ ಕಂಡು 51,031 ಕ್ಕೆ ತಲುಪಿದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 73.30 ಪಾಯಿಂಟ್ ಏರಿಕೆ ಕಂಡು 14,968.95 ಕ್ಕೆ ತನ್ನ ವಹಿವಾಟನ್ನು ಮುಂದುವರೆಸಿದೆ.
Share Market Updates Today - ನವದೆಹಲಿ: ಷೇರು ಮಾರುಕಟ್ಟೆ ಇಂದು ಹೊಸ ಗರಿಷ್ಠ ಅಂದರೆ 51,031.39 ರಿಂದ ತನ್ನ ದಿನದ ವಹಿವಾಟು ಆರಂಭಿಸಿದೆ. 30 ಷೇರುಗಳ ಬಿಎಸ್‌ಇ ಷೇರು ಸೂಚ್ಯಂಕ ಇಂದು 417 ಪಾಯಿಂಟ್‌ಗಳ ಏರಿಕೆ ಕಂಡು 51,031 ಕ್ಕೆ ತಲುಪಿದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 73.30 ಪಾಯಿಂಟ್ ಏರಿಕೆ ಕಂಡು 14,968.95 ಕ್ಕೆ ತನ್ನ ವಹಿವಾಟನ್ನು ಮುಂದುವರೆಸಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ಗರಿಷ್ಠ 15,005 ಕ್ಕೆ ತಲುಪಿದೆ. ಮತ್ತೊಂದೆಡೆ, ಎಸ್‌ಬಿಐ, ಮಹೀಂದ್ರಾ ಮತ್ತು ಮಹೀಂದ್ರಾ, ಎನ್‌ಟಿಪಿಸಿ, ಐಸಿಐಸಿಐ, ಏಷ್ಯನ್ ಪೇಂಟ್ಸ್ ಸೇರಿದಂತೆ ಹೆಚ್ಚಿನ ಷೇರುಗಳು ಹಸಿರು ಅಂಕಗಳಲ್ಲಿ ವಹಿವಾಟು ನಡೆಸುತ್ತಿವೆ ಸೆಲೆಕ್ಟರಲ್ ಇಂಡೆಕ್ಸ್ ಕುರಿತು ಹೇಳುವುದಾದರೆ, ನಿಫ್ಟಿ (Nifty) ಮೀಡಿಯಾ, ಐಟಿ ಮತ್ತು ಮೆಟಲ್ ಹೊರತುಪಡಿಸಿ, ಬ್ಯಾಂಕ್, ಪಿಎಸ್‌ಯು ಬ್ಯಾಂಕ್, ರಿಯಾಲಿಟಿ ಇಂಡೆಕ್ಸ್, ಫೈನಾನ್ಷಿಯಲ್ ಸರ್ವೀಸಸ್, ಪ್ರೈವೇಟ್ ಬ್ಯಾಂಕ್‌ನಂತಹ ಎಲ್ಲಾ ಸೂಚ್ಯಂಕಗಳು ಹಸಿರು ಅಂಕಗಳಲ್ಲಿ ವ್ಯಾಪಾರ ನಡೆಸುತ್ತಿವೆ. ಪಿಎಸ್ಯು ಬ್ಯಾಂಕ್ ಷೇರುಗಳಲ್ಲಿ ಅತಿ ಹೆಚ್ಚು ಏರಿಕೆ ಗಮನಿಸಲಾಗಿದೆ.
ಗುರುವಾರದ ವಹಿವಾಟು ಹೇಗಿತ್ತು
ಷೇರು ಮಾರುಕಟ್ಟೆಯಲ್ಲಿನ (Stock Market Updates) ಈ ಪರಿಸ್ಥಿತಿ ಗುರುವಾರ ಸತತ ನಾಲ್ಕನೇ ವಹಿವಾಟಿನಿಂದ ಮುಂದುವರೆದಿದೆ ಮತ್ತು ಸೆನ್ಸೆಕ್ಸ್ (Sensex) 359 ಪಾಯಿಂಟ್‌ಗಳ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಐಟಿಸಿ, ಎಸ್‌ಬಿಐ ಮತ್ತು ಕೊಟಕ್ ಬ್ಯಾಂಕ್ ಷೇರುಗಳ ಲಾಭದಿಂದ ಮಾರುಕಟ್ಟೆ(Stock Market) ಮನೋಭಾವ ಬಲಗೊಂಡಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ 50,687.51 ಅಂಕಗಳಿಗೆ ಏರಿತು. ಸೆನ್ಸೆಕ್ಸ್ ನಂತರ 358.54 ಪಾಯಿಂಟ್ ಅಥವಾ 0.71 ಶೇಕಡಾವನ್ನು ಗಳಿಸಿ ತನ್ನ ಹೊಸ ದಾಖಲೆಯ 50,614.29 ಅಂಕಗಳನ್ನು ಗಳಿಸಿತ್ತು. ಅದರಂತೆಯೇ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 105.71 ಪಾಯಿಂಟ್ ಅಥವಾ 0.71 ರಷ್ಟು ಏರಿಕೆ ಕಂಡು 14,895.65 ಪಾಯಿಂಟ್ಗಳಿಗೆ ತಲುಪಿತ್ತು. ಇದು ಅದರ ಹೊಸ ದಾಖಲೆ. ಹಿಂದಿನ ದಿನ, ನಿಫ್ಟಿ ವಹಿವಾಟು ಸಾರ್ವಕಾಲಿಕ ಗರಿಷ್ಠ 14,913.70 ಕ್ಕೆ ತಲುಪಿತ್ತು.
- ತಳಮಟ್ಟದಿಂದ 51 ಸಾವಿರ ಗಡಿ ದಾಟಿದ ಷೇರು ಸೂಚ್ಯಂಕ ಮಾರ್ಚ್ 8 ರಂದು ಕನಿಷ್ಠ ಮಟ್ಟಕ್ಕೆ ತಲುಪಿದ ನಂತರ, ಅಕ್ಟೋಬರ್ 8 ರಂದು ಸೆನ್ಸೆಕ್ಸ್ 40 ಸಾವಿರವನ್ನು ದಾಟಿ 40,182 ಕ್ಕೆತಲುಪಿತ್ತು.
- ನವೆಂಬರ್ 5 ರಂದು ಸೆನ್ಸೆಕ್ಸ್ 41,340 ಕ್ಕೆ ತನ್ನ ದಿನದ ವಹಿವಾಟು ಅಂತ್ಯಗೊಳಿಸಿತ್ತು. ನವೆಂಬರ್ 10 ರಂದು, ಇಂಟ್ರಾಡೇನಲ್ಲಿ ಸೂಚ್ಯಂಕ ಮಟ್ಟವು 43,227 ಕ್ಕೆ ತಲುಪಿದರೆ, ಅದು ನವೆಂಬರ್ 18 ರಂದು 44180 ಮತ್ತು ಡಿಸೆಂಬರ್ 4 ರಂದು 45000 ಅನ್ನು ದಾಟಿದೆ.
ಇದನ್ನು ಓದಿ-ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಮ್ಮಲ್ಲಿ RIL, Infosys, Tech Mahindra ಷೇರುಗಳಿದ್ದರೆ, ದುಡ್ಡಿನ ಮಳೆ..!
- ಡಿಸೆಂಬರ್ 9 ರಂದು, ಸೆನ್ಸೆಕ್ಸ್ 46103.50 ಕ್ಕೆ ಮುಚ್ಚಲ್ಪಟ್ಟಿತು, ಇದು ಮೊದಲ ಬಾರಿಗೆ 46000 ರಿಂದ ಹೆಚ್ಚಾಗಿದೆ.
- ಡಿಸೆಂಬರ್ 14 ರಂದು ಸೆನ್ಸೆಕ್ಸ್ 46284.7 ಕ್ಕೆ ಪ್ರಾರಂಭವಾದರೆ, ಸೆನ್ಸೆಕ್ಸ್ ಡಿಸೆಂಬರ್ 21 ರಂದು 47055.69 ಕ್ಕೆ ತಲುಪಿತು.
- ಡಿಸೆಂಬರ್ 30 ರಂದು ಸೆನ್ಸೆಕ್ಸ್ 47,807.85 ಅಂಕಗಳಿಗೆ ಏರಿತ್ತು. ಇದರ ನಂತರ, ಸೆನ್ಸೆಕ್ಸ್ ಡಿಸೆಂಬರ್ 6 ರ ಬುಧವಾರ ಹೊಸ ಗರಿಷ್ಠ 48616.66 ಕ್ಕೆ ತನ್ನ ದಿನದ ವಹಿವಾಟು ಆರಂಭಿಸಿತ್ತು. ಹೊಸ ವರ್ಷದಲ್ಲಿ 48 ಸಾವಿರ ಮಟ್ಟವನ್ನು ದಾಟಿದೆ.
ಇದನ್ನು ಓದಿ- Share Market Update: ಇದು ದುಡ್ಡಿನ ವಿಷ್ಯ ಸ್ವಾಮೀ... ಐತಿಹಾಸಿಕ ಗಡಿಯತ್ತ Sensex ದಾಪುಗಾಲು
- ಸೆನ್ಸೆಕ್ಸ್ ಡಿಸೆಂಬರ್ 8 ರಂದು 48797.97 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು. - - ಸೆನ್ಸೆಕ್ಸ್ ಡಿಸೆಂಬರ್ 11 ರಂದು 49260.21 ಕ್ಕೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.
- ಇನ್ನೊಂದೆಡೆ ಜನವರಿ 12 ಮತ್ತು ಜನವರಿ 13 ರಂದು ಸೆನ್ಸೆಕ್ಸ್ ಸೂಚ್ಯಂಕ 49569.14 ರ ಉತ್ತುಂಗಕ್ಕೇರಿತು.
- ಜನವರಿ 21 ರಂದು, ಸೆನ್ಸೆಕ್ಸ್ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿ ಸಾರ್ವಕಾಲಿಕ ಗರಿಷ್ಠ 50,184.01 ಕ್ಕೆ ತಲುಪಿತು.
- ಸೆನ್ಸೆಕ್ಸ್ ಜನವರಿ 5 ರಂದು 51031 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಇನ್ನೂ ತನ್ನ ವಹಿವಾಟು ಮುಂದುವರೆಸಿದೆ.
ಇದನ್ನು ಓದಿ- ನಿತ್ಯ ಕೇವಲ ರೂ.100 ಉಳಿತಾಯ ಮಾಡಿ 4.5 ಕೋಟಿ ರೂ. ಸಂಪಾದಿಸಲು ಇಲ್ಲಿದೆ ಟ್ರಿಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.