ನವದೆಹಲಿ: ಕೋಟ್ಯಾಧಿಪತಿಯಾಗುವ ಕನಸು ಕಾಣುವುದು ಸಾಮಾನ್ಯ. ಪ್ರತಿಯೊಬ್ಬರೂ ಕೋಟ್ಯಾಧಿಪತಿಯಾಗಲು ವಿವಿಧ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುವ ಕುರಿತು ಯೋಚಿಸುತ್ತಾರೆ. ಆದರೆ, ಸ್ವಂತ ಆದಾಯವನ್ನು ಉಳಿತಾಯದ ಹೂಡಿಕೆಗೆ ಸೇರಿಸಿ ಎಂದಾದರೂ ಕ್ಯಾಲ್ಕುಲೆಟ್ ಮಾಡಿದ್ದೀರಾ?. ಇಲ್ಲ ಎಂದಾದರೆ ಇಂದೇ ಈ ಕೆಲಸ ಮಾಡಿ. ಕೊತ್ಯಾಧಿಪತಿಯಾಗುವುದು ಕಷ್ಟದ ಕೆಲಸ ಅಲ್ಲ. ಆದರೆ, ಇದಕ್ಕಾಗಿ ನಿಯಮಿತ ಹೂಡಿಕೆ ಹಾಗೂ ಉತ್ತಮ ಸೇವಿಂಗ್ ಪ್ರಮುಖವಾಗಿದೆ. ಹಾಗಾದರೆ ಬನ್ನಿ ಇಂತಹುದೇ ಒಂದು ಯೋಜನೆ, ಇದರಲ್ಲಿ ನೀವು ನಿತ್ಯ 100 ರೂ. ಹೂಡಿಕೆ ಮಾಡಿ 4.5 ಕೋಟಿ ರೂ. ಸಂಪಾದಿಸಬಹುದು.
ದೀರ್ಘಾವಧಿ ಹೂಡಿಕೆ ಮಾಡಬೇಕು
ಕೋಟ್ಯಾಧಿಪತಿಯಾಗಲು ದೀರ್ಘಾವಧಿಗೆ ಹೂಡಿಕೆ ಮಾಡಬೇಕು. ಹಣದುಬ್ಬರ, ಖರ್ಚು ಹಾಗೂ ವೈದ್ಯಕೀಯ ಸೇವೆಗಳ ಮೇಲಾಗುವ ಖರ್ಚುಗಳ ಅಂದಾಜು ಪಡೆದು ಈ ಹೂಡಿಕೆ ಮಾಡಬೇಕು. ಆದರೆ ಈ ಹೂಡಿಕೆಯಲ್ಲಿ ಬಳಸಲಾಗುವ ಕೆಲ ಇನ್ಸ್ಟ್ರುಮೆಂಟ್ ಗಳು ನಿಮ್ಮ ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತವೆ. ಈ ಇನ್ಸ್ಟ್ರುಮೆಂಟ್ ಗಳಲ್ಲಿ ನೀವು ಹಣ ಹೂಡಿಕೆ ಮಾಡಿ. ಸತತವಾಗಿ ನಿಮ್ಮ ಆಸ್ತಿಯನ್ನು ಹೆಚ್ಚಿಸಬಹುದು ಹಾಗೂ ಕೋಟ್ಯಾಧಿಪತಿಯಾಗಬಹುದು.
ಯಾವುದು ಉತ್ತಮ ಆಪ್ಶನ್
ಟ್ಯಾಕ್ಸ್ ಹಾಗೂ ಇನ್ವೆಸ್ಟ್ ಮೆಂಟ್ ತಜ್ಞರ ಪ್ರಕಾರ, ಸ್ವಂತ ಹೂಡಿಕೆಯನ್ನು ಕೋಟ್ಯಂತರ ರೂ.ಗಳಾಗಿ ಮಾರ್ಪಾಡುವುದನ್ನು ನೋಡಲು ಬಯಸುವವರಿಗೆ ಇಕ್ವಿಟಿ ಮ್ಯುಚುವಲ್ ಫಂಡ್ ಒಂದು ಉತ್ತಮ ಆಯ್ಕೆಯಾಗಿದೆ. ಯಾವುದೇ ಓರ್ವ ವ್ಯಕ್ತಿ ಒಂದು ವೇಳೆ ತನ್ನ 30ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ, ಆತನ ಬಳಿ ನಿಯಮಿತ ಹೂಡಿಕೆಗಾಗಿ ಅವಕಾಶ ಇರಲಿದೆ. ಇಕ್ವಿಟಿ ಮ್ಯೂಚವಲ್ ಫಂಡ್ ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP)ನಲ್ಲಿ ಅವರು ಹಣ ಹೂಡಿಕೆ ಮಾಡಬೇಕು.
ಸ್ಟೆಪ್-ಅಪ್ ರೇಟ್ ಕಾಯುವುದು ಆವಶ್ಯಕ
ಈ ಕುರಿತು ಮಾಹಿತಿ ನೀಡಿರುವ ಟ್ರಾನ್ಸ್ ಸೆಂಡ್ ಕನ್ಸಲ್ಟೆನ್ಸಿಯ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕ್ ಝವೇರಿ, ಮ್ಯೂಚವಲ್ ಫಂಡ್ ನಲ್ಲಿ 30 ವರ್ಷಗಳ ಅವಧಿಗೆ ಶೇ.15 ರಷ್ಟು ರಿಟರ್ನ್ (ಅಂದಾಜು) ಮೂಲಕ ಹಣ ಹೂಡಿಕೆ ಮಾಡಿದರೆ ಶೀಘ್ರದಲ್ಲಿಯೇ ನೀವು ಕೋಟ್ಯಾಧಿಪತಿಯಾಗಬಹುದು ಎಂದಿದ್ದಾರೆ. ಜೊತೆಗೆ ಪ್ರತಿ ವರ್ಷ ಶೇ.10 ರಷ್ಟು ಸ್ಟೆಪ್ ಅಪ್ ರೇಟ್ ಕಾಯ್ದುಕೊಳ್ಳಬೇಕು. ಇದರಿಂದ ನೀವು ಉಳಿತಾಯ ಮಾಡುವ ಹಣದಲ್ಲಿ ವೃದ್ಧಿಯಾಗಿ ಕೋಟಿ ರೂ.ಗಡಿ ದಾಟಲಿದೆ ಎನ್ನುತ್ತಾರೆ.
ನಿತ್ಯ ಕೇವಲ ರೂ.100 ಹೂಡಿಕೆ ಮಾಡಿ
ಕಾರ್ತಿಕ್ ಝವೇರಿ ಹೇಳುವ ಪ್ರಕಾರ, SIP ಯಲ್ಲಿ ನಿತ್ಯ ರೂ.100 ಹೂಡಿಕೆ ಮಾಡಬೇಕು. 30 ವರ್ಷಗಳವರೆಗೆ ನಿಮ್ಮ ಹೂಡಿಕೆಯ ಗುರಿ ನಿಗದಿಪಡಿಸಿ. ವಾರ್ಷಿಕವಾಗಿ ಶೇ.10ರಷ್ಟು ಸ್ಟೆಪ್ ಅಪ್ ರೇಟ್ ಜೋಡಿಸಿ. 30 ವರ್ಷಗಳ ಬಳಿಕ ನಿಮ್ಮ ಮ್ಯಾಚುರಿಟಿ ಅಮೌಂಟ್ 4,50,66,809 ಆಗಲಿದೆ. ಮ್ಯೂಚವಲ್ ಫಂಡ್ ಕ್ಯಾಲ್ಕುಲೇಟರ್ ಲೆಕ್ಕಾಚಾರದ ಪ್ರಕಾರ 30 ವರ್ಷಗಳ ಬಳಿಕ ನಿಮ್ಮ ಒಟ್ಟು ಹೂಡಿಕೆ ರೂ.59,17,512 ಆಗಿರಲಿದೆ. ಆದರೆ ಇದೆ ವೇಳೆ ಈ ಸಂಪತ್ತಿಯಲ್ಲಿನ ಏರಿಕೆ 3,91,49,297 ರೂ. ಅಗಿರಲಿದೆ. ಹೀಗಾಗಿ ಸ್ಟೆಪ್ ಅಪ್ ರೇಟ್ ಟ್ರಿಕ್ ಬಳಸಿ ನೀವು ಕೋಟ್ಯಾಧಿಪತಿಯಾಗಬಹುದು.