Stock Market Crash: ಷೇರು ಮಾರುಕಟ್ಟೆಯ ಕುಸಿತದ ಸಮಯದಲ್ಲಿ ಕಾರುಗಳು ಮತ್ತು ಮನೆಗಳಂತಹ ಆಸ್ತಿಗಳ ಬೆಲೆಗಳಲ್ಲಿನ ಕುಸಿತವಾಗಲಿವೆ. ಸ್ಟಾಕ್ ಮಾರುಕಟ್ಟೆ ಭಾರೀ ಕುಸಿತಗೊಂಡಾಗ ಎಲ್ಲವೂ ಅಗ್ಗವಾಗಿ ಮಾರಾಟವಾಗಲಿವೆ ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ.
Stock Market Live News Updates: ವಹಿವಾಟಿನ ಪ್ರಾರಂಭದಲ್ಲಿ, ಭಾರ್ತಿ ಏರ್ಟೆಲ್, ಶ್ರೀರಾಮ್ ಫೈನಾನ್ಸ್, ಬಜಾಜ್ ಆಟೋ, ಡಿವಿಸ್ ಲ್ಯಾಬ್ಸ್ ಮತ್ತು M & M ನಿಫ್ಟಿಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.
ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ ಲಾಭದ ದೃಷ್ಟಿಯಿಂದ ಭಾರಿ ಹಿನ್ನಡೆ ಅನುಭವಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ.35ರಷ್ಟು ಕುಸಿದು 9,164 ಕೋಟಿ ರೂ.ಗೆ ತಲುಪಿದೆ.
ಜನವರಿ 22, ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ 'ಪ್ರಾಣ ಪ್ರತಿಷ್ಠಾನ' ಸಮಾರಂಭಕ್ಕೆ ಮುಂಚಿತವಾಗಿ ಷೇರು ಮಾರುಕಟ್ಟೆಯು ಶನಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3:30 ರವರೆಗೆ ತೆರೆದಿರುತ್ತದೆ ಮತ್ತು ಸೋಮವಾರ ಮುಚ್ಚಿರುತ್ತದೆ ಎಂದು ಷೇರು ಮಾರುಕಟ್ಟೆ ಮೂಲಗಳು ತಿಳಿಸಿವೆ.
Stock Market Updates: ದೇಶೀಯ ಷೇರುಪೇಟೆಯಲ್ಲಿ ಶುಕ್ರವಾರವೂ ರೈಲ್ವೆ ಷೇರುಗಳು ಭರ್ಜರಿ ಏರಿಕೆ ದಾಖಲಾಗಿದ್ದು, 52 ವಾರಗಳ ಗರಿಷ್ಠ ಮಟ್ಟ ತಲುಪಿವೆ. IRFC, RVNL, IRCTC ಸೇರಿದಂತೆ ಪ್ರಮುಖ ರೈಲ್ವೆ ಷೇರುಗಳ ಏರಿಕೆಯಿಂದ ಶುಕ್ರವಾರ ಹೂಡಿಕೆದಾರರ ಸಂಪತ್ತು ಭಾರೀ ಏರಿಕೆಗೊಂಡಿದೆ.
Stock market update: BSE ಮತ್ತು NSE ಈ ವಿಶೇಷ ಲೈವ್ ಸೆಷನ್ ಮೂಲಕ DR ಸೈಟ್ಗೆ ಬದಲಾಯಿಸುವ ಗುರಿ ಹೊಂದಿದೆ. BSE ಮತ್ತು NSE ಎರಡೂ ಜನವರಿ 20ರಂದು ಎರಡು ವಿಶೇಷ ಲೈವ್ ಟ್ರೇಡಿಂಗ್ ಸೆಷನ್ಗಳನ್ನು ನಡೆಸುತ್ತಿವೆ.
Stock Market Updates: ಇಂಟ್ರಾ ಡೇನಲ್ಲಿ ಪ್ರಮುಖ ಷೇರುಗಳಾದ IRFC ಶೇ. 14.59, ವಿಪ್ರೋ ಶೇ. 6.94, ರೈಲ್ ವಿಕಾಸ್ ನಿಗಮ ಶೇ. 8.98 ಮತ್ತು IREDA ಶೇ. 9.98 ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟವು.
SEBI: ಸೆಪ್ಟೆಂಬರ್ನಲ್ಲಿ, ಸೆಬಿ ನೋಂದಾಯಿತ ಘಟಕಗಳಿಗೆ ಸ್ಕೋರ್ಗಳ ವೇದಿಕೆಯ ಮೂಲಕ ಸ್ವೀಕರಿಸಿದ ದೂರುಗಳನ್ನು ನಿರ್ವಹಿಸಲು ಸುತ್ತೋಲೆಯನ್ನು ಹೊರತಂದಿದೆ. ನಿಬಂಧನೆಗಳ ಅನುಷ್ಠಾನದ ಪರಿಣಾಮಕಾರಿ ದಿನಾಂಕವನ್ನು ಏಪ್ರಿಲ್ 1, 2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
Tata Technologies IPO: ಟಾಟಾ ಮೋಟಾರ್ಸ್ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್ ಇಂಜಿನಿಯರಿಂಗ್ ಸೇವೆಗಳ ಸಂಸ್ಥೆಯಾಗಿದೆ. 3 ದಿನಗಳ ಕೊಡುಗೆಯ ಅಂತಿಮ ದಿನವಾದ ಶುಕ್ರವಾರ ಟಾಟಾ ಟೆಕ್ನಾಲಜೀಸ್ ಐಪಿಒ 69.43 ಪಟ್ಟು ಹೆಚ್ಚು ಚಂದಾದಾರಿಕೆ ಪಡೆದುಕೊಂಡಿತ್ತು.
IPO Opens: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು ಚಂದಾದಾರಿಕೆಗಳಿಗಾಗಿ ಇಂದಿನಿಂದ ಮೂರು ದಿನ ತೆರೆದಿದ್ದು, ಆಫರ್ ಪ್ರತಿ ಷೇರಿಗೆ 30 ರೂ ರಿಂದ 32 ರೂ ಸ್ಥಿರ ಬೆಲೆ ಶ್ರೇಣಿಯನ್ನು ಹೊಂದಿದ್ದು ಮತ್ತು ಹೂಡಿಕೆದಾರರು 460 ಷೇರುಗಳು ಅಥವಾ ಆ ಮೊತ್ತದ ಗುಣಕಗಳಲ್ಲಿ ಬಿಡ್ ಮಾಡಬಹುದು.
ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ಪ್ರವೃತ್ತಿ ಮತ್ತು ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತಗಳಿಂದ ಈ ವಾರದ ಸ್ಥಳೀಯ ಷೇರು ಮಾರುಕಟ್ಟೆಗಳ ದಿಕ್ಕನ್ನು ನಿರ್ಧರಿಸಲಾಗುತ್ತದೆ. ಈ ಅಭಿಪ್ರಾಯವನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಪಶ್ಚಿಮ ಏಷ್ಯಾದ ಚಟುವಟಿಕೆಗಳು ಮತ್ತು ಹಮಾಸ್-ಇಸ್ರೇಲ್ ಸಂಘರ್ಷದ ನಡುವೆ ವಿದೇಶಿ ಹೂಡಿಕೆದಾರರ ವರ್ತನೆಯ ಮೇಲೆಯೂ ಗಮನ ಹರಿಸುತ್ತಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
Futures and Options Trading: ಷೇರು ಮಾರುಕಟ್ಟೆಯಿಂದ ಸಾಕಷ್ಟು ಹಣ ಗಳಿಸಬಹುದು ಮತ್ತು ಅದೇ ರೀತಿ ಹಣ ಕಳೆದುಕೊಳ್ಳಬಹುದು. ಹೀಗಾಗಿ ಯಾರೇ ಆಗಲಿ ಷೇರು ಮಾರುಕಟ್ಟೆಯಲ್ಲಿ ಸ್ಮಾರ್ಟ್ ಆಗಿ ಕೆಲಸ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.