Stock Market Update: ಸೆನ್ಸೆಕ್ ನಲ್ಲಿ ಭಾರಿ ಗೂಳಿ ಜಿಗಿತ, 18700 ಅಂಕ ದಾಟಿದ ನಿಫ್ಟಿ
Share Market Update: ಬಿಎಸ್‌ಇಯ 30-ಷೇರುಗಳನ್ನು ಹೊಂದಿರುವ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ ಇಂದು ದಿನದಾಂತ್ಯಕ್ಕೆ ಒಟ್ಟು 418.45 ಅಂಕಗಳ ಅಥವಾ ಶೇ. 0.67 ಜಿಗಿತ ಕಂಡು 63,143.16 ಅಂಕಗಳಿಗೆ ತಲುಪಿದೆ. ವಹಿವಾಟಿನ ವೇಳೆ ಒಂದು ಕ್ಷಣ ಈ ಜಿಗಿತ 452.76 ಅಂಕಗಳಿಗೂ ಕೂಡ ತಲುಪಿತ್ತು. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾಗಿರುವ (ಎನ್‌ಎಸ್‌ಇ) ನಿಫ್ಟಿ ಕೂಡ 114.65 ಅಂಕಗಳ ಅಥವಾ ಶೇ. 0.62 ರಷ್ಟು ಏರಿಕೆಯೊಂದಿಗೆ 18,716.15 ಪಾಯಿಂಟ್‌ಗಳಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Stock Market Update: ಜಾಗತಿಕ ಮಾರುಕಟ್ಟೆಗಳಿಂದ ಧನಾತ್ಮಕ ಸೂಚನೆಗಳು ಮತ್ತು ದೇಶೀಯ ಮುಂಭಾಗದಲ್ಲಿ ಅನುಕೂಲಕರವಾದ ಸ್ಥೂಲ-ಆರ್ಥಿಕ ದತ್ತಾಂಶಗಳಿಂದ ಪ್ರೇರಣೆ ಪಡೆದ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ ಮಂಗಳವಾರ 418 ಅಂಕಗಳನ್ನು ಜಿಗಿದು ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದರೆ, ನಿಫ್ಟಿ ಕೂಡ 18,700 ಅಂಕಗಳನ್ನು ದಾಟಿ ತನ್ನ ದೈನಂದಿನ ವಹಿವಾಟನ್ನು ಅಂತ್ಯಗೊಳಿಸಿದೆ. ಹೂಡಿಕೆದಾರರ ಪ್ರಕಾರ ಪ್ರಕಾರ, ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಟಿಸಿಯ ಷೇರುಗಳಲ್ಲಿ ಹುರುಪಿನ ಖರೀದಿಯು ಷೇರು ಮಾರುಕಟ್ಟೆಗಳಲ್ಲಿ ಉತ್ಕರ್ಷಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸೆನ್ಸೆಕ್ಸ್-ನಿಫ್ಟಿ
ಬಿಎಸ್‌ಇಯ 30-ಷೇರುಗಳನ್ನು ಹೊಂದಿರುವ ಸೂಚ್ಯಂಕ ಸೆನ್ಸೆಕ್ಸ್ 418.45 ಪಾಯಿಂಟ್‌ಗಳು ಅಥವಾ ಶೇ. 0.67 ರಷ್ಟು ಏರಿಕೆ ಕಂಡು 63,143.16 ಅಂಕಗಳಿಗೆ ತಲುಪಿದೆ. ವಹಿವಾಟಿನ ವೇಳೆ ಒಂದು ಕ್ಷಣ ಈ ಸೂಚ್ಯಂಕ 452.76 ಅಂಕಗಳ ಜಿಗಿತವನ್ನೂ ಕಂಡಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಕೂಡ 114.65 ಪಾಯಿಂಟ್‌ಗಳು ಅಥವಾ ಶೇಕಡಾ 0.62 ರಷ್ಟು ಏರಿಕೆಯೊಂದಿಗೆ 18,716.15 ಪಾಯಿಂಟ್‌ಗಳಲ್ಲಿ ತನ್ನ ವಹಿವಾಟನ್ನು ಮುಗಿಸಿದೆ. ಷೇರುಪೇಟೆಯಲ್ಲಿ ಇದು ಸತತ ಎರಡನೇ ದಿನವೂ ಏರು ಪೆರು ಮುಂದುವರೆದಿತ್ತು
ಗೇನರ್-ಟಾಪ್ ಲೂಸರ್
ಸೆನ್ಸೆಕ್ಸ್ ಕಂಪನಿಗಳಲ್ಲಿ, ಐಟಿಸಿ, ಟೈಟಾನ್, ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ನೆಸ್ಲೆ ಮತ್ತು ಐಸಿಐಸಿಐ ಬ್ಯಾಂಕ್ ಲಾಭ ಗಳಿಸಿವೆ. ಮತ್ತೊಂದೆಡೆ, ಕೋಟಕ್ ಮಹೀಂದ್ರಾ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ನಷ್ಟ ಅನುಭವಿಸಿವೆ.
ಅಂಕಿಅಂಶಗಳು ಏನು ಹೇಳುತ್ತವೆ
ವಿಶ್ಲೇಷಕರ ಪ್ರಕಾರ, ಒಂದು ದಿನದ ಹಿಂದೆ ಬಿಡುಗಡೆಯಾದ ಸಕಾರಾತ್ಮಕ ಸ್ಥೂಲ-ಆರ್ಥಿಕ ಅಂಕಿಅಂಶಗಳಿಂದ ದೇಶೀಯ ಷೇರು ಮಾರುಕಟ್ಟೆಯು ಲವಲವಿಕೆಯಿಂದ ಕೂಡಿತ್ತು. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ 25 ತಿಂಗಳ ಕನಿಷ್ಠ ಮಟ್ಟವಾದ 4.25 ಶೇಕಡಾಕ್ಕೆ ಇಳಿದಿದ್ದರೆ, ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 4.2 ರಷ್ಟು ಬೆಳವಣಿಗೆಯಾಗಿದೆ. ಈ ಅಂಕಿಅಂಶಗಳು ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಸಂಕೇತಗಳನ್ನು ನೀಡಿವೆ.
ಇದನ್ನೂ ಓದಿ-Investment Ideas: ನೀವು ಮಾಡುವ ಹೂಡಿಕೆಗೆ FD ಗಿಂತ ಉತ್ತಮ ಆದಾಯ ಗಳಿಸಬೇಕೆ? ಈ ವರದಿ ತಪ್ಪದೆ ಓದಿ
ಸಾಗರೋತ್ತರ ಮಾರುಕಟ್ಟೆ
ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್‌ನ ನಿಕ್ಕಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಲಾಭದೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿವೆ. ಮಧ್ಯಾಹ್ನದ ಸೆಷನ್‌ನಲ್ಲಿ ಹೆಚ್ಚಿನ ಯುರೋಪಿಯನ್ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸಿವೆ. ಸೋಮವಾರ ಒಂದು ದಿನ ಮುಂಚಿತವಾಗಿ, ಅಮೇರಿಕನ್ ಮಾರುಕಟ್ಟೆಗಳಲ್ಲಿ ಹೆಚ್ಚಳವನ್ನು ದಾಖಲಿಸಲಾಗಿದೆ. ಏತನ್ಮಧ್ಯೆ, ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 1.55 ರಷ್ಟು ಏರಿಕೆಯಾಗಿ 72.95 ಡಾಲರ್‌ಗಳಿಗೆ ತಲುಪಿದೆ. ಸ್ಟಾಕ್ ಎಕ್ಸ್ಚೇಂಜ್ಗಳ ಅಂಕಿ ಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 626.62 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.