Wheat Price Latest News: 15 ವರ್ಷಗಳಲ್ಲಿ ಮೊದಲ ಬಾರಿಗೆ, ಏರುತ್ತಿರುವ ಗೋಧಿ ಬೆಲೆಗಳನ್ನು ತಡೆಯಲು ಸರ್ಕಾರವು ಮಾರ್ಚ್ 31, 2024 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಮೊದಲ ಹಂತದಲ್ಲಿ ಕೇಂದ್ರ ಪೂಲ್‌ನಿಂದ ಬೃಹತ್ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ 1.5 ಮಿಲಿಯನ್ ಟನ್ ಗೋಧಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
31 ಮಾರ್ಚ್ 2024 ರವರೆಗೆ ದಾಸ್ತಾನು ಮಿತಿ
ಈ ಕುರಿತು ಮಾಹಿತಿ ನೀಡಿರುವ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ , ಕಳೆದ ತಿಂಗಳು ಗೋಧಿ ಬೆಲೆಯಲ್ಲಿ ಏರಿಕೆಯಾಗಿದೆ. ಮಂಡಿ ಮಟ್ಟದಲ್ಲಿ ಶೇ.8ರಷ್ಟು ಬೆಲೆ ಏರಿಕೆಯಾಗಿದೆ. ಸಗಟು ಮತ್ತು ಚಿಲ್ಲರೆ ಬೆಲೆಗಳು ಅಷ್ಟಾಗಿ ಏರಿಕೆಯಾಗದಿದ್ದರೂ, ಸರ್ಕಾರವು ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ. ಮಾರ್ಚ್ 31, 2024 ರವರೆಗೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಚಿಲ್ಲರೆ ಸರಣಿ ಮಾರಾಟಗಾರರು ಮತ್ತು ಪ್ರೊಸೆಸರ್‌ಗಳ ಮೇಲೆ ಈ 'ಸ್ಟಾಕ್ ಮಿತಿ' ಅನ್ವಯಿಸಲಿದೆ.
ಗೋಧಿಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಕುರಿತು ಮಾತನಾಡಿರುವ ಕಾರ್ಯದರ್ಶಿಗಳು, ದೇಶದಲ್ಲಿ ಸಾಕಷ್ಟು ಪೂರೈಕೆ ಇರುವುದರಿಂದ ನೀತಿಯನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಗೋಧಿ ರಫ್ತು ನಿಷೇಧವೂ ಮುಂದುವರಿಯಲಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಸಾಕಷ್ಟು ಗೋಧಿ ದಾಸ್ತಾನು ಇದೆ ಎಂದು ಅವರು ಹೇಳಿದ್ದಾರೆ. ರೈತರು ಮತ್ತು ವ್ಯಾಪಾರಿಗಳು ದಾಸ್ತಾನುಗಳನ್ನು ಹೊಂದಿದ್ದಾರೆ ಮತ್ತು ಕೆಲವು ಸಮಾಜ ಕಂಟಕ ಶಕ್ತಿಗಳು ಸಹ ದಾಸ್ತಾನುಗಳನ್ನು ಹೊಂದಿವೆ. ದೇಶದಲ್ಲಿ ಗೋಧಿಗೆ ಕೊರತೆಯಿಲ್ಲದ ಕಾರಣ ನಾವು ಆಮದು ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಗೋಧಿಯ ಹೊರತಾಗಿ ಒಎಂಎಸ್‌ಎಸ್ ಅಡಿಯಲ್ಲಿ ಅಕ್ಕಿ ಮಾರಾಟ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತಾದ ಕ್ವಾಂಟಮ್ ಅನ್ನು ನಂತರ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇನ್ನು ಮುಂದೆ ಸಕ್ಕರೆ ರಫ್ತಿಗೆ ಅವಕಾಶ ನೀಡುವ ಪ್ರಸ್ತಾವನೆ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಜೂನ್ 28 ರಿಂದ OMSS ಮೂಲಕ ಗೋಧಿ ಹರಾಜು
ಜೂನ್ 28 ರಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ಮೂಲಕ ಗೋಧಿಯ ಹರಾಜು ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಗೋಧಿ ಬೆಲೆ ಏರಿಕೆಯಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕೂಡ ಬೆಲೆ ಕಡಿಮೆಯಾಗಿಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಿ ಪೂರೈಕೆ ಹೆಚ್ಚಿಸಲು ದಾಸ್ತಾನು ಮಿತಿ ಹೇರಲಾಗಿದೆ.
ದಾಸ್ತಾನು ಮಿತಿ
ಪರಿಸ್ಥಿತಿ ನಿಯಂತ್ರಿಸಲು ಮತ್ತು ಪೂರೈಕೆ ಒಪ್ಪಂದವನ್ನು ಪೂರೈಸಲು ಸರ್ಕಾರ ದಾಸ್ತಾನು ಮಿತಿಯನ್ನು ವಿಧಿಸಿದೆ. ಸಗಟು ವ್ಯಾಪಾರಿಗಳಿಗೆ 3,000 ಮೆಟ್ರಿಕ್ ಟನ್ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 10,000 ಮೆಟ್ರಿಕ್ ಟನ್ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಗೋಧಿಯ ಕೃತಕ ಸೆಳೆತವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ-RBI ರೆಪೋ ದರಗಳನ್ನು ಯಾವಾಗ ಕಡಿತಗೊಳಿಸಲಿದೆ? ಈ ಸುದ್ದಿ ಓದಿ
ಆಮದು ಕೊರತೆ ಇಲ್ಲ ಎಂದು ಸರಕಾರ ಹೇಳುತ್ತಿದೆ. ಕಾಳಧನಿಕರು ಉದ್ದೇಶಪೂರ್ವಕವಾಗಿ ಗೋಧಿಯನ್ನು ಸಂಗ್ರಹಿಸುತ್ತಿದ್ದಾರೆ ಅಥವಾ ಎಲ್ಲೋ ಅದನ್ನು ಕಪ್ಪು ಮಾರುಕಟ್ಟೆಗೆ ಹಾಕುತ್ತಿದ್ದಾರೆ ಎಂದು ಸರ್ಕಾರ ನಂಬುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.