Stock Market Latest News: ಆರ್‌ಬಿಐನ ತನ್ನ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡಿದ ಹೊರತಾಗಿಯೂ, ಭಾರತೀಯ ಷೇರು ಮಾರುಕಟ್ಟೆಯು ಭಾರಿ ಉತ್ಸಾಹ ಮುಂದುವರೆದಿದೆ. ಆರ್‌ಬಿಐನ ವಿತ್ತೀಯ ನೀತಿ ಪ್ರಕಟಣೆಯಿಂದಾಗಿ, ಬ್ಯಾಂಕಿಂಗ್ ಷೇರುಗಳಲ್ಲಿ ಪ್ರಚಂಡ ಖರೀದಿ ಮುಂದುವರೆದಿದ್ದು, ಷೇರು ಮಾರುಕಟ್ಟೆಯು ಭಾರಿ ಏರಿಕೆಯನ್ನು ಕಾಣುತ್ತಿದೆ. ಮುಂಬೈ ಷೇರುಪೇಟೆಯ ಸೂಚ್ಯಂಕ ಸೆನ್ಸೆಕ್ಸ್ 1273  ಮತ್ತು ನಿಫ್ಟಿ 300ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಸದ್ಯ ಸೆನ್ಸೆಕ್ಸ್ 1273 ಅಂಕಗಳ ಏರಿಕೆಯೊಂದಿಗೆ 57,683 ಹಾಗೂ ನಿಫ್ಟಿ 361 ಅಂಕಗಳ ಏರಿಕೆಯೊಂದಿಗೆ 17,177ರಲ್ಲಿ ವಹಿವಾಟು ನಡೆಸುತ್ತಿದೆ. ಅರ್ಥಾತ್ ಸೆನ್ಸೆಕ್ಸ್ 57,000 ಮತ್ತು ನಿಫ್ಟಿ 17,000 ಗಡಿ ದಾಟಲು ಯಶಸ್ವಿಯಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-RBI Repo Rate Hike: ಸತತ ನಾಲ್ಕನೇ ಬಾರಿಗೆ ರೆಪೋ ರೇಟ್ ಶೇ.0.50 ರಷ್ಟು ಹೆಚ್ಚಿಸಿದ RBI


ಆರ್‌ಬಿಐನ ನೀತಿ ಘೋಷಣೆಯ ನಂತರ ಬ್ಯಾಂಕಿಂಗ್ ಷೇರುಗಳಲ್ಲಿ ಭಾರೀ ಖರೀದಿ ಕಂಡುಬರುತ್ತಿದೆ. ಬ್ಯಾಂಕ್ ನಿಫ್ಟಿ ಶೇ.2.95 ಅಂದರೆ 1110 ಅಂಕಗಳ ಜಿಗಿತದೊಂದಿಗೆ 38,758ರಲ್ಲಿ ವಹಿವಾಟು ನಡೆಸುತ್ತಿದೆ. ಬ್ಯಾಂಕಿಂಗ್ ಷೇರುಗಳಲ್ಲಿ, ಪಿಎನ್‌ಬಿ ಶೇರುಗಳು ಶೇ.4.87, ಫೆಡರಲ್ ಬ್ಯಾಂಕ್ ಶೇ. 4.69, ಬ್ಯಾಂಕ್ ಆಫ್ ಬರೋಡಾ ಶೇ. 4.55 ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಶೇ. 4.50 ರಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕೂಡ ಭಾರೀ ಲಾಭವನ್ನು ಕಾಣುತ್ತಿವೆ. ಇಂದು ಮಾರುಕಟ್ಟೆಯಲ್ಲಿರುವ ಆಟೋ, ಐಟಿ, ಫಾರ್ಮಾ, ಲೋಹ, ಇಂಧನ ಕ್ಷೇತ್ರಗಳಲ್ಲಿಯೂ ಖರೀದಿ ವಹಿವಾಟು ಮುಂದುವರೆದಿದೆ.


ಇದನ್ನೂ ಓದಿ-Share Market Closing: ಅದ್ಭುತ ಆರಂಭ ಕಂಡು, ದಿನದಾಂತ್ಯಕ್ಕೆ ಕುಸಿತದೊಂದಿಗೆ ವಹಿವಾಟು ನಿಲ್ಲಿಸಿದ ಷೇರುಪೇಟೆ


ಸಾಲ ದುಬಾರಿಯಾದರೂ ಕೂಡ ಮಾರುಕಟ್ಟೆಯಲ್ಲಿ ಉತ್ಸಾಹ
ವಾಸ್ತವದಲ್ಲಿ, ಆರ್‌ಬಿಐ ತನ್ನ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.5ರಷ್ಟು ಹೆಚ್ಚಿಸಲಿದೆ ಎಂಬುದನ್ನು ಮಾರುಕಟ್ಟೆ ಈ ಮೊದಲೇ ಊಹಿಸಿತ್ತು. ಮಾರುಕಟ್ಟೆಯ ಈ ಮುನ್ಸೂಚನೆ ಸರಿ ಸಾಬೀತಾಗಿದೆ. ಇದರಿಂದ ಮಾರುಕಟ್ಟೆ ಭರಾಟೆ ಮುಂದುವರೆದಿದೆ. ಮಾರುಕಟ್ಟೆಯಲ್ಲಿ ಈ ಖರೀದಿಯಿಂದಾಗಿ ಮಾರುಕಟ್ಟೆ ಮೌಲ್ಯ 272 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಹೂಡಿಕೆದಾರರ ಸಂಪತ್ತಿನಲ್ಲಿ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಏರಿಕೆ ಗಮನಿಸಲಾಗುತ್ತಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.