RBI Repo Rate Hike: ಹಬ್ಬದ ಋತುವಿನಲ್ಲಿ ನಿಮ್ಮ ಮೇಲೆ ಇಎಂಐ ಹೊರೆ ಹೆಚ್ಚಾಗಿದೆ. ಹೌದು, ಆರ್‌ಬಿಐ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಆರ್‌ಬಿಐ ರೆಪೊ ದರವನ್ನು ಶೇ.5.40ರಿಂದ ಶೇ.5.90ಕ್ಕೆ ಹೆಚ್ಚಿಸಿದ್ದು, ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಆರ್‌ಬಿಐ ಹಣಕಾಸು ನೀತಿ ಸಭೆಯ ನಂತರ ಗವರ್ನರ್ ಶಕ್ತಿಕಾಂತ ದಾಸ್ ಈ ಘೋಷಣೆ ಮಾಡಿದ್ದಾರೆ. ಅಂದರೆ, ಕಳೆದ ಐದು ತಿಂಗಳಲ್ಲಿ ರೆಪೋ ದರ ಒಟ್ಟು ಶೇ.1.90ರಷ್ಟು ಏರಿಕೆಯಾಗಿದೆ.
ಇಎಂಐ ದುಬಾರಿಯಾಗಲಿದೆ
ಆರ್ ಬಿಐನ ಈ ನಿರ್ಧಾರದ ನಂತರ ಗೃಹ ಸಾಲದಿಂದ ಹಿಡಿದು ವಾಹನ ಸಾಲ, ಶಿಕ್ಷಣ ಸಾಲದವರೆಗೆ ದುಬಾರಿಯಾಗುವುದು ಖಚಿತ. ಮತ್ತೊಂದೆಡೆ, ಈಗಾಗಲೇ ಗೃಹ ಸಾಲ ಪಡೆದಿರುವವರು, ಹೆಚುವರಿ ಇಎಂಐ ಪಾವತಿಸಬೇಕಾಗಲಿದೆ. ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ನಂತರ ಆರ್‌ಬಿಐ ಗವರ್ನರ್ ರೆಪೊ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ-Small Saving Scheme : ಹೂಡಿಕೆದಾರರಿಗೆ ಸಿಹಿ ಸುದ್ದಿ : ಸರ್ಕಾರಿ ಯೋಜನೆಗಳ ಬಡ್ಡಿದರ ಹೆಚ್ಚಿಸಿದ ಕೇಂದ್ರ!
ಹಣದುಬ್ಬರ ಹೆಚ್ಚಳದಿಂದಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ
ವಿತ್ತೀಯ ನೀತಿ ಸಮಿತಿಯ ಸಭೆಯು ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.7 ರಷ್ಟಿತ್ತು. ಇದರಿಂದಾಗಿ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-RBI New Rule : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಅ.1 ರಿಂದ ಬದಲಾಗಲಿವೆ ಈ ನಿಯಮಗಳು!
ನಾಲ್ಕನೇ ಬಾರಿಗೆ ಸಾಲಗಳು ದುಬಾರಿಯಾಗಿವೆ
2022-23ರ ಹಣಕಾಸು ವರ್ಷದಲ್ಲಿ, ಹಣದುಬ್ಬರ ಏರಿಕೆಯ ನಂತರ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಲು ಆರ್‌ಬಿಐ ನಿರ್ಧರಿಸಿದೆ. ಮೇ 4 ರಂದು, ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಅಂದರೆ ಶೇ.4.40 ಹೆಚ್ಚಿಸಲಾಗಿತ್ತು, ನಂತರ ಜೂನ್ 8 ರಂದು ಅದನ್ನು ಮತ್ತೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಯಿತು, ನಂತರ ಆಗಸ್ಟ್‌ನಲ್ಲಿ ರೆಪೊ ದರವನ್ನು ಮತ್ತೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. ಸೆಪ್ಟೆಂಬರ್ 30, 2022 ರಂದು, ರೆಪೊ ದರವನ್ನು ಮತ್ತೆ 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಲು ನಿರ್ಧರಿಸಲಾಗಿದೆ. ಆರ್‌ಬಿಐನ ಈ ನಿರ್ಧಾರದ ನಂತರ ಕಳೆದ ಐದು ತಿಂಗಳುಗಳಲ್ಲಿ ರೆಪೊ ದರ ಒಟ್ಟು ಶೇ.1.90ರಷ್ಟು ಹೆಚ್ಚಿಸಿದನ್ತಗಿದೆ. ಆರ್‌ಬಿಐನ ಇತ್ತೀಚಿನ ನಿರ್ಧಾರದ ನಂತರ, ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳ ಸಾಲಗಳು ದುಬಾರಿಯಾಗುವುದು ಬಹುತೇಕ ನಿಚ್ಚಳವಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.