Shopping Via WhatsApp: ಇನ್ಮುಂದೆ ನೀವು WhatsApp ಮೂಲಕ ಕೂಡ ದಿನಸಿ ಖರೀದಿಸಬಹುದು, Jio Mart ಯೋಜನೆ ಇಲ್ಲಿದೆ
Order Groceries Via WhatsApp - ಇನ್ಮುಂದೆ ನೀವು WhatsApp ಮೂಲಕ ಕೂಡ ಪಡಿತರವನ್ನು ಆರ್ಡರ್ ಮಾಡಬಹುದು... ಹೌದು! JioMart ಬಿಗ್ ಪ್ಲಾನ್ ಬಿಡುಗಡೆ ಮಾಡಿದೆ. ಈಗ ನೀವು WhatsApp ಮೂಲಕ Jiomart ನಿಂದ ದಿನಸಿಗಳನ್ನು ಆರ್ಡರ್ ಮಾಡಬಹುದು. ಇದು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ತೀವ್ರ ಪೈಪೋಟಿ ನೀಡಲಿದೆ ಎಂದೇ ಭಾವಿಸಲಾಗಿದೆ.
ನವದೆಹಲಿ: Shopping Via WhatsApp - ಹೊಸ "ಟ್ಯಾಪ್ ಮತ್ತು ಚಾಟ್" (Tap And Chat) ಆಯ್ಕೆಯ ಮೂಲಕ JioMart ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಲು ಭಾರತೀಯರು ಇದೀಗ WhatsApp ಅನ್ನು ಬಳಸಬಹುದು. ಇದು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗೆ ಕಠಿಣ ಪೈಪೋಟಿ ನೀಡಲಿದೆ. 90 ಸೆಕೆಂಡುಗಳ ಟ್ಯುಟೋರಿಯಲ್‌ಗಳು ಮತ್ತು ಕ್ಯಾಟಲಾಗ್‌ಗಳೊಂದಿಗೆ WhatsApp ಶಾಪಿಂಗ್ ಆಹ್ವಾನಗಳನ್ನು ಪೋಸ್ಟ್ ಮಾಡಿದ JioMart ಬಳಕೆದಾರರ ಪ್ರಕಾರ, ವಿತರಣೆಯು ಉಚಿತವಾಗಿದೆ ಮತ್ತು ಆರ್ಡರ್ ಮೌಲ್ಯದ ಕನಿಷ್ಠ ಮಿತಿ ನಿಗದಿಪಡಿಸಲಾಗಿಲ್ಲ
ಏನೇನು ಆದೇಶಿಸಬಹುದು? (Reliance JioMart)
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಟೂತ್‌ಪೇಸ್ಟ್ ಮತ್ತು ಕಾಟೇಜ್ ಚೀಸ್ ಮತ್ತು ಕಡಲೆ ಹಿಟ್ಟಿನಂತಹ ಅಡುಗೆಯ ಸ್ಟೇಪಲ್ಸ್ ಗಳಿಗೆ ನೀವು ಆರ್ಡರ್ ಮಾಡಬಹುದು.ಗ್ರಾಹಕರು ಆಪ್ ಬಳಸಿ ತಮ್ಮ ಶಾಪಿಂಗ್ ಬಾಸ್ಕೆಟ್ ಅನ್ನು ತುಂಬಬಹುದು ಮತ್ತು ಆರ್ಡರ್ ಸ್ವೀಕರಿಸುವ ಸಮಯದಲ್ಲಿ JioMart ಮೂಲಕ ಅಥವಾ ನಗದು ರೂಪದಲ್ಲಿ ಹಣವನ್ನುಪಾವತಿಸಬಹುದು.
ಇದನ್ನೂ ಓದಿ-ಡಿಸೆಂಬರ್ 1 ರಿಂದ ದುಬಾರಿಯಾಗಲಿದೆ SBI ವಹಿವಾಟು, ಎಷ್ಟು ಹೆಚ್ಚಾಗಲಿದೆ Charges
ಇದರಿಂದ ಜಿಯೋಮಾರ್ಟ್‌ಗೆ ಲಾಭವಾಗಲಿದೆ
ಹಿಂದೆ Facebook Inc. ಎಂದು ಕರೆಯಲ್ಪಡುವ Meta Platforms Inc. ರಿಲಯನ್ಸ್‌ನ Jio ಪ್ಲಾಟ್‌ಫಾರ್ಮ್‌ಗಳ ಘಟಕದಲ್ಲಿ ಸುಮಾರು $6 ಶತಕೋಟಿ ಹೂಡಿಕೆ ಮಾಡಿದ 19 ತಿಂಗಳ ನಂತರ ಈ ವ್ಯವಸ್ಥೆ ಆರಂಭಗೊಂಡಿದೆ. Jio ಈ ಪಾಲುದಾರಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಲಿದೆ ಏಕೆಂದರೆ ಹೀಗೆ ಮಾಡುವುದರಿಂದ JioMart ನ ಮಾರಾಟ ಹೆಚ್ಚಾಗಲಿದೆ. WhatsApp ದೇಶದಲ್ಲಿ ಸುಮಾರು 53 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು Jio 425 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ಇದನ್ನೂ ಓದಿ-December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ
ಆರ್ಡರ್ ಹೇಗೆ ಮಾಡಬೇಕು?
ಅಪ್ಲಿಕೇಶನ್‌ಗೆ ಹೋದ ನಂತರ, ನೀವು WhatsApp ಟ್ಯಾಪ್ ಮತ್ತು ಚಾಟ್ ಅನ್ನು ಕ್ಲಿಕ್ ಮಾಡಬೇಕು. ಅಲ್ಲಿ ನೀವು ದಿನಸಿಗಳ ಸಂಪೂರ್ಣ ಪಟ್ಟಿಯನ್ನು ಪಡೆಯುವಿರಿ. ನೀವು WhatsApp ನಲ್ಲಿ ಮಾತ್ರ ಆರ್ಡರ್‌ಗಳನ್ನು ಪಟ್ಟಿ ಮಾಡಲು ಸಾಧ್ಯವಾಗುತ್ತದೆ. ಇದರ ನಂತರ, ಆನ್‌ಲೈನ್ ಪಾವತಿ ಮೂಲಕ ಅಥವಾ ಕ್ಯಾಶ್ ಆನ್ ಡೆಲಿವರಿ ಮೂಲಕ ಪಾವತಿ ಮಾಡಬಹುದು.
ಇದನ್ನೂ ಓದಿ-ಪಿಂಚಣಿದಾರರು ಈಗ ನೀಡಬೇಕಾಗಿಲ್ಲ 'Life Certificate', ಏನು ಹೇಳುತ್ತದೆ ಹೊಸ ನಿಯಮ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ