ವೀಡಿಯೊ ಮೂಲಕ ದೇಶದ ಅತಿದೊಡ್ಡ BANK ನೀಡಿದೆ ಈ ಎಚ್ಚರಿಕೆ
ವಂಚನೆಗೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡುವ ಮೂಲಕ ಜನರನ್ನು ಎಚ್ಚರಿಸುವ ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ.
ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ವೀಡಿಯೊ ಮೂಲಕ ಎಚ್ಚರಿಕೆ ನೀಡಿದೆ. ಕೆವೈಸಿ ಪರಿಶೀಲನೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರುವಂತೆ ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.
ಎಸ್‌ಬಿಐ ಟ್ವೀಟ್ :
ಸಾಮಾಜಿಕ ಮಾಧ್ಯಮ (Social Media) ದಲ್ಲಿ, 'ಕೆವೈಸಿ ಪರಿಶೀಲನೆಗಾಗಿ ವಿನಂತಿಸುವ ಮೋಸದ ಕರೆಗಳು ಅಥವಾ ಸಂದೇಶಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ' ಎಂದು ಬ್ಯಾಂಕ್ (Bank) ಟ್ವೀಟ್ ಮಾಡಿದೆ. ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು ಮೋಸಗಾರನು ಫೋನ್ ಕರೆ ಮಾಡುತ್ತಾರೆ ಅಥವಾ ಬ್ಯಾಂಕ್ / ಕಂಪನಿ ಪ್ರತಿನಿಧಿಯಂತೆ ನಟಿಸುವ ಪಠ್ಯ ಸಂದೇಶವನ್ನು ಕಳುಹಿಸುತ್ತಾರೆ. ಅಂತಹ ಪ್ರಕರಣಗಳನ್ನು cybercrime.gov.in. ನಲ್ಲಿ ವರದಿ ಮಾಡಿ ಎಂದು ಬ್ಯಾಂಕ್ ಗ್ರಾಹಕರಿಗೆ ಸಂದೇಶ ರವಾನಿಸಿದೆ.
ಇದನ್ನೂ ಓದಿ - ಎಚ್ಚರ: Pizza ಆಸೆಗೆ ಅಕೌಂಟ್ ಖಾಲಿಯಾಗದಿರಲಿ!
ಇತ್ತೀಚಿನ ದಿನಗಳಲ್ಲಿ ಕೆವೈಸಿ ಹೆಸರಿನಲ್ಲಿ ವಂಚನೆ :
ಇತ್ತೀಚಿನ ದಿನಗಳಲ್ಲಿ ಕೆವೈಸಿ (KYC) ಹೆಸರಿನಲ್ಲಿ ಹೆಚ್ಚಿನ ವಂಚನೆ ಪ್ರಕರಣಗಳು ಹೊರಬರುತ್ತಿವೆ ಎಂದು ಬ್ಯಾಂಕ್ ತಿಳಿಸಿದೆ. ಕೆವೈಸಿ ಚೆಕ್ ಮಾಡುವುದಾಗಿ ಯಾರಾದರೂ ನಿಮಗೆ ಕರೆ ಮಾಡಿದರೆ ಅಥವಾ ಸಂದೇಶ ಕಳುಹಿಸಿದರೆ ಅಂತಹ ಕರೆ ಅಥವಾ ಸಂದೇಶಗಳನ್ನು ನಂಬಬೇಡಿ. ಬ್ಯಾಂಕ್ ವತಿಯಿಂದ ಅಂತಹ ಯಾವುದೇ ಕರೆ/ಸಂದೇಶಗಳನ್ನು ಕಳುಹಿಸುವುದಿಲ್ಲ. ಅದು ಆನ್‌ಲೈನ್ ಮೋಸದ (Online Fraud) ಕರೆ ಎಂದು ಬ್ಯಾಂಕ್ ಗ್ರಾಹಕರನ್ನು ಎಚ್ಚರಿಸಿದೆ.
ಇದನ್ನೂ ಓದಿ - ಬ್ಯಾಂಕ್ ಖಾತೆಯಲ್ಲಿ ಮೋಸವಾಗಿದ್ದರೆ, ನಿಮ್ಮೆಲ್ಲಾ ಹಣ ಹಿಂತಿರುಗಿಸಲಾಗುತ್ತದೆ! ಇಲ್ಲಿದೆ ದಾರಿ
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.