Stock Market Crash: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಕುಸಿತ ಕಂಡುಬಂದಿದೆ. ಷೇರು ಮಾರುಕಟ್ಟೆಯಲ್ಲಿ ಗೂಳಿಯ ನಾಗಾಲೋಟಕ್ಕೆ ಬ್ರೇಕ್‌ ಬಿದ್ದಿದ್ದು, ಕರಡಿ ಕುಣಿತ ಪ್ರಾರಂಭವಾಗಿದೆ. ಇದು ಸತತ ಎರಡನೇ ದಿನವೂ ಮಾರುಕಟ್ಟೆ ಕುಸಿತ ದಾಖಲಿಸಿದೆ. ಕಳೆದ ವಾರ ಶುಕ್ರವಾರವೂ ದಾಖಲೆಯ ಮಟ್ಟ ತಲುಪಿದ ಬಳಿಕ ಮಾರುಕಟ್ಟೆ ಕುಸಿತ ಕಂಡಿತ್ತು. ಇಂದು ಅಂದರೆ ಸೆಪ್ಟೆಂಬರ್ ಕೊನೆಯ ಸೋಮವಾರದಂದು ಬಿಎಸ್‌ಇ ಸೆನ್ಸೆಕ್ಸ್ 1272.07(ಶೇ.1.49) ಪಾಯಿಂಟ್‌ಗಳ ಕುಸಿತದೊಂದಿಗೆ 84,299.78 ಪಾಯಿಂಟ್‌ಗಳಲ್ಲಿ ಕೊನೆಗೊಂಡರೆ, ಮತ್ತೊಂದೆಡೆ ನಿಫ್ಟಿ 50 ಸಹ 368.10(ಶೇ.1.41) ಪಾಯಿಂಟ್‌ಗಳ ನಷ್ಟದೊಂದಿಗೆ 25,810.85 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಇಂದು 30 ಸೆನ್ಸೆಕ್ಸ್ ಕಂಪನಿಗಳಲ್ಲಿ 5 ಷೇರುಗಳು ಮಾತ್ರ ಏರಿಕೆ ಕಂಡಿದ್ದರೆ, ಇನ್ನುಳಿದ 25 ಕಂಪನಿಗಳ ಷೇರುಗಳು ನಷ್ಟದೊಂದಿಗೆ ಕ್ಲೋಸ್‌ ಆದವರು. ನಿಫ್ಟಿ 50ಯ 50 ಕಂಪನಿಗಳ ಪೈಕಿ ಕೇವಲ 9 ಕಂಪನಿಗಳ ಷೇರುಗಳು ಗ್ರೀನ್‌ನಲ್ಲಿ ಕ್ಲೋಸ್‌ ಆದರೆ, 41 ಕಂಪನಿಗಳ ಷೇರುಗಳು ರೆಡ್ ಮಾರ್ಕ್‌ನಲ್ಲಿ ಕ್ಲೋಸ್‌ ಆದವು.


COMMERCIAL BREAK
SCROLL TO CONTINUE READING

JSW ಸ್ಟೀಲ್ ಷೇರುಗಳಲ್ಲಿ ಗರಿಷ್ಠ ಏರಿಕೆ: ಜೆಎಸ್‌ಡಬ್ಲ್ಯು ಸ್ಟೀಲ್ ಷೇರುಗಳು ಸೆನ್ಸೆಕ್ಸ್‌ಗೆ ಗರಿಷ್ಠ ಶೇ.2.86 ಲಾಭ ನೀಡಿದೆ. ಇದಲ್ಲದೇ ಎನ್‌ಟಿಪಿಸಿ ಶೇರು ಶೇ.1.25, ಟಾಟಾ ಸ್ಟೀಲ್ ಶೇ.1.08, ಟೈಟಾನ್ ಶೇ.0.41 ಮತ್ತು ಏಷ್ಯನ್ ಪೇಂಟ್ಸ್ ಶೇ.0.22ರಷ್ಟು ಏರಿಕೆ ದಾಖಲಿಸಿದವು.


ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೂ ಮೊದಲೇ ಜಾಕ್ ಪಾಟ್: ರಾಜ್ಯ ಸರ್ಕಾರ ನೀಡುತ್ತೇ 3 ಉಚಿತ ಸಿಲಿಂಡರ್


ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಭಾರೀ ಕುಸಿತ!: ಆಕ್ಸಿಸ್ ಬ್ಯಾಂಕ್ ಷೇರುಗಳು ಇಂದು ಶೇ.3.15ರಷ್ಟು ದೊಡ್ಡ ಕುಸಿತ ಕಂಡಿತು. ರಿಲಯನ್ಸ್ ಷೇರು ಶೇ.3.09, ICICI ಬ್ಯಾಂಕ್ ಶೇ.2.56, ಮಹೀಂದ್ರಾ ಮತ್ತು ಮಹೀಂದ್ರಾ ಶೇ.2.03, ಬಜಾಜ್ ಫಿನ್‌ಸರ್ವ್ ಶೇ.2.02ರಷ್ಟು ಕುಸಿತ ಕಂಡಿವೆ. 


ಈ ಷೇರುಗಳು ಶೇ.1ಕ್ಕಿಂತ ಹೆಚ್ಚು ಕುಸಿತ ದಾಖಲಿಸಿವೆ: ಟೆಕ್ ಮಹೀಂದ್ರಾ, ಮಾರುತಿ ಸುಜುಕಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನೆಸ್ಲೆ ಇಂಡಿಯಾ, ಟಾಟಾ ಮೋಟಾರ್ಸ್, ಇನ್ಫೋಸಿಸ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ.1ರಿಂದ 2ರಷ್ಟು ಕುಸಿತ ದಾಖಲಿಸಿವೆ. ಬಜಾಜ್ ಫೈನಾನ್ಸ್, ಐಟಿಸಿ, ಟಿಸಿಎಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಅದಾನಿ ಪೋರ್ಟ್ಸ್, ಪವರ್ ಗ್ರಿಡ್, ಲಾರ್ಸನ್ ಆ್ಯಂಡ್ ಟೂಬ್ರೊ, ಎಚ್‌ಸಿಎಲ್ ಟೆಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಶೇ.1ಕ್ಕಿಂತ ಕಡಿಮೆ ಇಳಿಕೆ ಕಂಡಿವೆ.


ಇದನ್ನೂ ಓದಿ: 8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್.. ಎಲ್ಲಿ ಹೇಗೆ ಖರೀದಿಸಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ!


3 ಲಕ್ಷ ಕೋಟಿ ನಷ್ಟ!


ಕಳೆದ ವಾರ ಏರಿಕೆಯತ್ತ ದಾಪುಗಾಲು ಇಟ್ಟು ಹೂಡಿಕೆದಾರರ ಜೇಬು ತುಂಬಿಸಿದ್ದ ಭಾರತೀಯ ಷೇರುಪೇಟೆ ಈ ತಿಂಗಳ ಕೊನೆಯ ದಿನದ ವಹಿವಾಟಿನಲ್ಲಿ ಭಾರೀ ಕುಸಿತದೊಂದಿಗೆ ಅಂತ್ಯಗೊಳಿಸಿದೆ. ಇಂದು ಒಂದೇ ದಿನ ಹೂಡಿಕೆದಾರರು ಬರೋಬ್ಬರಿ 3 ಲಕ್ಷ ಕೋಟಿ ರೂ.ನಷ್ಟು ನಷ್ಟ ಅನುಭವಿಸಿದ್ದಾರೆ. ಕಳೆದೊಂದು ವಾರದಿಂದ ಏರುಗತಿಯ ಮೂಲಕ ದಾಖಲೆ ಮಟ್ಟ ತಲುಪಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸೋಮವಾರ ಪ್ರಾಫಿಟ್‌ ಬುಕ್ಕಿಂಗ್‌ ಕಂಡುಬಂದಿತು. ಇದು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣವೆಂದು ವರದಿಯಾಗಿದೆ. ಇದಲ್ಲದೆ ಚೀನೀ ಮಾರುಕಟ್ಟೆಯತ್ತ ಎಫ್‌ಐಐಗಳ ಆಸಕ್ತಿ, ಭೌಗೋಳಿಕ ರಾಜಕೀಯ ಅನಿಶ್ಚಿತತೆ, ನವೆಂಬರ್‌ನಲ್ಲಿ ಘೋಷಣೆಯಾಗಲಿರುವ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ, ಜಪಾನ್‌ನಿಂದ ಬಡ್ಡಿದರ ಹೆಚ್ಚಳದ ಒತ್ತಡ ಮತ್ತು ಎಫ್‌ಐಐಗಳಿಂದ ಷೇರುಗಳ ಮಾರಾಟದಿಂದ ಮಾರುಕಟ್ಟೆ ಕುಸಿತ ಕಂಡಿದ ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.