Share Market Today: ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಸಂಕೇತಗಳು ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಭಾರತೀಯ ಷೇರುಪೇಟೆಯಲ್ಲಿ ಭಾರಿ ಗೂಳಿ ಜಿಗಿತಕ್ಕೆ ಕಾರಣವಾಗಿದೆ. ಶುಕ್ರವಾರದ ವಹಿವಾಟಿನಲ್ಲಿ ಎರಡೂ ಪ್ರಮುಖ ಸೂಚ್ಯಂಕಗಳು ಹಸಿರು ಅಂಕಗಳೊಂದಿಗೆ ಆರಂಭ ಕಂಡಿವೆ. 30-ಷೇರುಗಳ ಸೆನ್ಸೆಕ್ಸ್ 927.41 ಅಂಕಗಳನ್ನು ಗಳಿಸಿ 58,162.74 ಕ್ಕೆ ವ್ಯವಹರಿಸುತ್ತಿದ್ದಾರೆ, 50-ಷೇರುಗಳ ನಿಫ್ಟಿ ಕೂಡ ಭಾರಿ ಏರಿಕೆಯೊಂದಿಗೆ ತನ್ನ ದಿನದ ವಹಿವಾಟನ್ನು ಆರಂಭಿಸಿದೆ ಮತ್ತು ಅದು 17,322.30 ಮಟ್ಟದಲ್ಲಿ 308 ಪಾಯಿಂಟ್‌ಗಳ ಏರಿಕೆಯೊಂದಿಗೆ ಪ್ರಾರಂಭವಾಗಿದೆ. ಇದಕ್ಕೂ ಮೊದಲು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಭಾರತದ ಆರ್ಥಿಕತೆಯು ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ನಿಫ್ಟಿಯ ಟಾಪ್ ಗೇನರ್ ಮತ್ತು ಟಾಪ್ ಲೂಸರ್ಸ್
ಮಾರುಕಟ್ಟೆಯ ಆರಂಭಿಕ ಗೂಳಿ ಜಿಗಿತ ಮುಂದುವರೆದಿದೆ, ಬೆಳಗ್ಗೆ 9.20 ರ ಸುಮಾರಿಗೆ, ಅದು 1000 ಪಾಯಿಂಟ್‌ಗಳಿಗಿಂತ ಹೆಚ್ಚಿನ ಲಾಭದೊಂದಿಗೆ 58,276.15 ಪಾಯಿಂಟ್‌ಗಳ ಮಟ್ಟವನ್ನು ತಲುಪಿದೆ. ಈ ಅವಧಿಯಲ್ಲಿ, ಸೆನ್ಸೆಕ್ಸ್‌ನ ಎಲ್ಲಾ 30 ಷೇರುಗಳು ಹಸಿರು ಅಂಕಗಳೊಂದಿಗೆ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಇನ್ಫೋಸಿಸ್ ಷೇರುಗಳು ಶೇ.4ರಷ್ಟು ಏರಿಕೆ ಕಂಡಿವೆ. ಇದೇ ವೇಳೆ, ಸನ್‌ಫಾರ್ಮಾದಲ್ಲಿ ಕನಿಷ್ಠ ಶೇ.0.5 ರಷ್ಟು ಗಳಿಕೆ ಕಂಡುಬಂದಿದೆ. ನಿಫ್ಟಿಯ ಟಾಪ್ ಗೇನರ್‌ಗಳೆಂದರೆ INFOSYS, ICICI ಬ್ಯಾಂಕ್, SBI LIFE, HCL TECH ಮತ್ತು SBI.


ಇದನ್ನೂ ಓದಿ-New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ


ಡೌ ಜೋನ್ಸ್ 30 ಸಾವಿರ ದಾಟಿದೆ
ಇನ್ನೊಂದೆಡೆ, ಜಾಗತಿಕ ಮಾರುಕಟ್ಟೆಯಿಂದ ದೊರೆತೆ ಉತ್ತಮ ಸಂಕೇತಗಳಿಂದ ಅಮೆರಿಕದ ಮಾರುಕಟ್ಟೆ ಗುರುವಾರ ಏರಿಕೆ ಕಂಡಿದೆ.ಡೌ ಜೋನ್ಸ್ 827 ಪಾಯಿಂಟ್‌ಗಳ ಏರಿಕೆಯೊಂದಿಗೆ 30,039 ಕ್ಕೆ ತಲುಪಿದೆ. ನಾಸ್ಡಾಕ್ 232 ಪಾಯಿಂಟ್‌ಗಳ ಏರಿಕೆ ಕಂಡು 10649 ಮಟ್ಟವನ್ನು ತಲುಪಿತ್ತು. S&P 500 ಕೂಡ ಶೇ.2.6 ರಷ್ಟು ಏರಿಕೆ ದಾಖಲಿಸಿದೆ. SGX ನಿಫ್ಟಿ 250 ಅಂಕಗಳ ಬಲದೊಂದಿಗೆ 17200ರ ಗಡಿ ದಾಟಿದೆ. US ನಲ್ಲಿ, ಹಣದುಬ್ಬರ ದರವು ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಶೇ.0.4 ರಿಂದ 8.2 ಶೇಕಡಾಕ್ಕೆ ಏರಿದೆ.  


ಇದನ್ನೂ ಓದಿ-Diwali Bonus: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಸಿಗಲಿದೆ 1 ತಿಂಗಳ ವೇತನ ಬೋನಸ್


ಗುರುವಾರ ಷೇರು ಮಾರುಕಟ್ಟೆ ಸ್ಥಿತಿ ಹೇಗಿತ್ತು?
ಇದಕ್ಕೂ ಮುನ್ನ ಗುರುವಾರ, ಷೇರು ಮಾರುಕಟ್ಟೆಯು ಮಾರಾಟದ ಭರಾಟೆಯಲ್ಲಿ ಕುಸಿಯುತ್ತಲೇ ಇತ್ತು ಮತ್ತು ಎರಡೂ ಪ್ರಮುಖ ಸೂಚ್ಯಂಕಗಳು ಕುಸಿತದೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿದ್ದವು. ಒಂದೆಡೆ 30 ಷೇರುಗಳ ಸಂವೇದಿ ಸೂಚ್ಯಂಕವಾಗಿರುವ ಸೆನ್ಸೆಕ್ಸ್ 390.58 ಅಂಕಗಳ ಕುಸಿತದೊಂದಿಗೆ 57,235.33 ಅಂಕಗಳಿಗೆ ತಲುಪಿದ್ದರೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕವಾಗಿರುವ ನಿಫ್ಟಿ ಕೂಡ 109.25 ಅಂಕ ಕಳೆದುಕೊಂಡು 17,014.35 ಅಂಕಗಳಿಗೆ ತಲುಪಿತ್ತು. ವಿಪ್ರೋ ಸೆನ್ಸೆಕ್ಸ್ ಷೇರುಗಳಲ್ಲಿ ಅತಿ ಹೆಚ್ಚು ಅಂದರೆ ಶೇ.7.03ರಷ್ಟು ನಷ್ಟವನ್ನು ಅನುಭವಿಸಿತ್ತು,


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.