Rajni Bector : ರಜನಿ ಬೆಕ್ಟರ್ ಖ್ಯಾತ ಉದ್ಯಮಿ.ಕರಾಚಿಯಲ್ಲಿ ಜನಿಸಿದ ಅವರು  ವಿಭಜನೆಯ ಸಮಯದಲ್ಲಿ ಲುಧಿಯಾನಕ್ಕೆ ಬಂದರು.ಅವರಿಗೆ 17 ವರ್ಷ ವಯಸ್ಸಾಗಿದ್ದಾಗ ಸ್ಥಳೀಯ ವ್ಯಾಪಾರ ಕುಟುಂಬದ ಹುಡುಗನೊಂದಿಗೆ  ವಿವಾಹವಾದರು.ಇದಾದ ನಂತರ ರಜನಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕರಿ ಕೋರ್ಸ್‌ಗೆ ಸೇರಿಕೊಂಡರು. 


COMMERCIAL BREAK
SCROLL TO CONTINUE READING

ರಜನಿಯ ಬೇಕಿಂಗ್ ಮತ್ತು ಐಸ್ ಕ್ರೀಮ್ ಪಾಕವಿಧಾನಗಳು ಶೀಘ್ರದಲ್ಲೇ ಜನಪ್ರಿಯವಾಯಿತು.ಇದು ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ರಜನಿಯನ್ನು ಪ್ರೇರೇಪಿಸಿತು.ಸ್ವಂತ ವ್ಯಾಪಾರ ಆರಂಭಿಸುವ ಯೋಚನೆಯಲ್ಲಿ 300 ರೂಪಾಯಿ ಆರಂಭಿಕ ಬಂಡವಾಳದಲ್ಲಿ ಒಲೆ ಖರೀದಿಸಿ ಹಿತ್ತಲಲ್ಲಿ ಐಸ್ ಕ್ರೀಂ ಮಾಡಲು ಆರಂಭಿಸಿದರು.


ಇದನ್ನೂ ಓದಿ : IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!


ಆದರೆ ಈ ವ್ಯವಹಾರ ಶೀಘ್ರದಲ್ಲೇ ಆರ್ಥಿಕ ತೊಂದರೆಗಳನ್ನು ಎದುರಿಸಿತು.ರಜನಿ ಅವರ ಪತಿ ಧರ್ಮವೀರ್ ಅವರು 1978ರಲ್ಲಿ ಐಸ್ ಕ್ರೀಮ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು 20,000 ರೂಪಾಯಿಯ ಆರ್ಥಿಕ ನೆರವು ನೀಡುತ್ತಾರೆ. 


ಬ್ರ್ಯಾಂಡ್ ಕ್ರೆಮಿಕಾ :
ರಜನಿ ತಮ್ಮ ಬ್ರ್ಯಾಂಡ್ ಅನ್ನು ಕ್ರೆಮಿಕಾ ಎಂದು ಹೆಸರಿಸಿದ್ದಾರೆ. ಇದು ಹಿಂದಿ ಪದ 'ಕ್ರೀಮ್ ಕಾ' ಅಂದರೆ ಕೆನೆಯಿಂದ ತಯಾರಿಸಲ್ಪಟ್ಟ ಎಂದರ್ಥ. ಮೊದಲು ಐಸ್ ಕ್ ತಯಾರಿಸಿದ ರಜನಿ ನಿಧಾನವಾಗಿ ನಂತರ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು.1980ರ ದಶಕದ ಸವಾಲುಗಳ ನಡುವೆಯೂ ರಜನಿ ತಮ್ಮ ಕುಟುಂಬದ ಬೆಂಬಲದೊಂದಿಗೆ ಯಶಸ್ಸನ್ನು ಸಾಧಿಸಿ, ಕ್ರೀಮಿಕಾವನ್ನು ಯಶಸ್ವಿಗೊಳಿಸಿದರು.


ಇದನ್ನೂ ಓದಿ : Ration Card: ಸೆಪ್ಟೆಂಬರ್ 30ರ ನಂತರ ಕ್ಯಾನ್ಸಲ್‌ ಆಗುತ್ತೆ ಇಂತವರ ರೇಷನ್ ಕಾರ್ಡ್!


ವರದಿಯ ಪ್ರಕಾರ,ಕ್ರೆಮಿಕಾ ಭಾರತದ ಎರಡನೇ ಅತಿದೊಡ್ಡ ಬಿಸ್ಕತ್ತು ರಫ್ತುದಾರ. ಇದರ ಉತ್ಪನ್ನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.ಉತ್ತರ ಭಾರತದಲ್ಲಿ ನಡೆಯುವ ಬಹುತೇಕ ಮದುವೆಗಳಲ್ಲಿ ಈ ಬ್ರ್ಯಾಂಡ್ ಪಾಶ್ಚಾತ್ಯ ಸಿಹಿತಿಂಡಿಗಳ ನೆಚ್ಚಿನ ರುಚಿಯಾಗಿದೆ.ಕ್ರೆಮಿಕಾ ವಾರ್ಷಿಕ ವಹಿವಾಟು 7,000 ಕೋಟಿ ರೂ.ಒಟ್ಟಾರೆಯಾಗಿ ರಜನಿ ಅವರ ವೃತ್ತಿ ಬದುಕು ಲಕ್ಷಾಂತರ ಮಹತ್ವಾಕಾಂಕ್ಷಿ ಭಾರತೀಯ ಮಹಿಳಾ ಉದ್ಯಮಿಗಳಿಗೆ ಸ್ಫೂರ್ತಿಯ ಮೂಲವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.