IRCTC ticket booking: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ IRCTC, ಪ್ರಯಾಣಿಕರು ವಿವಿಧ surname ಹೊಂದಿರುವ ಕಾರಣ ಇ-ಟಿಕೆಟ್‌ಗಳನ್ನು ಬುಕ್ ಮಾಡುವುದರ ಮೇಲಿನ ನಿರ್ಬಂಧಗಳ ಬಗ್ಗೆ ಹರಡುತ್ತಿರುವ ವದಂತಿಗಳು "ಸುಳ್ಳು ಮತ್ತು ಮಿಸ್ ಲೀಡಿಂಗ್" ಆಗಿವೆ ಎಂದು ಹೇಳಿದೆ.
IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್ ಅಥವಾ ಅಪರಿಚಿತರಿಗೆ ಟಿಕಟ್ ಬುಕ್ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ. "ವಿವಿಧ Surnameಗಳಿಂದ ಇ-ಟಿಕೆಟ್‌ಗಳ ಬುಕ್ಕಿಂಗ್‌ನಲ್ಲಿ ನಿರ್ಬಂಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ" ಎಂದು IRCTC ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ಹೀಗಾಗಿ ವಿವಿಧ Surname ಹೊಂದಿರುವ ಜನರಿಗೆ ನೀವು ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು? ಈ ಪ್ರಶ್ನೆಗೆ ಉತ್ತರ ಹೌದು, ನೀವು ಅವರಿಗೂ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ: IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್ ಬುಕ್ ಮಾಡಿದ್ರೆ ಜೈಲು ಫಿಕ್ಸ್!
The news in circulation on social media about restriction in booking of e-tickets due to different surname is false and misleading. pic.twitter.com/xu3Q7uEWbX
— IRCTC (@IRCTCofficial) June 25, 2024
ಮಾನ್ಯವಾದ IRCTC ವೆಬ್‌ಸೈಟ್ ಅಥವಾ ಆಪ್ ಮೂಲಕ ಟಿಕೆಟ್ ಬುಕಿಂಗ್ ಮಾಡುವವರು ತಮ್ಮ ವೈಯಕ್ತಿಕ ಐಡಿ ಮೂಲಕ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಮ್ಮ IRCTC ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್‌ಗಳಿಗೆ ಹೆಚ್ಚಾಗುತ್ತದೆ (ಪ್ರತಿ ಟಿಕೆಟ್‌ನಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರ ಆಧಾರ್ ದೃಢೀಕರಣವನ್ನು ಒದಗಿಸಿದರೆ)ʼ ಎಂದು ತಿಳಿಸಿದೆ.
ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಬಳಕೆದಾರ ಐಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ಹೇಳಿದೆ. ವೈಯಕ್ತಿಕ ಬಳಕೆದಾರ ಐಡಿಗಳನ್ನು ಬಳಸಿ ಬುಕ್ ಮಾಡಿದ ಟಿಕೆಟ್‌ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಮತ್ತು ಲಾಭಕ್ಕಾಗಿ ಮಾರಾಟ ಮಾಡಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಟಿಕೆಟ್‌ಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ರೈಲ್ವೆ ಕಾಯಿದೆ, 1989ರ ಸೆಕ್ಷನ್ 143ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು IRCTC ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಭಗವದ್ಗೀತೆ ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವ ವಿವರಿಸಿದ ಪ್ರಧಾನಿ ಮೋದಿ
ರೈಲ್ವೆ ಇಲಾಖೆಯ ನೀತಿಗಳಲ್ಲಿನ ಬದಲಾವಣೆಗಳ ಬಗ್ಗೆ ಸುಳ್ಳು ಮಾಹಿತಿಯ ಹರಡುವಿಕೆಯಿಂದ ಪ್ರಯಾಣಿಕರಿಗೆ ಗೊಂದಲವನ್ನುಂಟುಮಾಡಿದೆ. ಉದಾಹರಣೆಗೆ, ಜುಲೈ 1, 2017ರಿಂದ ಪ್ರಾರಂಭವಾಗುವ ಹೊಸ ಬದಲಾವಣೆಗಳ ಬಗೆಗಿನ ವದಂತಿಗಳು ಸಂಪೂರ್ಣವಾಗಿ ಸುಳ್ಳು ಎಂದು ರೈಲ್ವೆ ಸಚಿವಾಲಯವು ಸ್ಪಷ್ಟಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.