Tax Saving FD: ಬಡ್ಡಿದರ ಹೆಚ್ಚಿಸಿ ಗ್ರಾಹಕರಿಗೆ ಉಡುಗೊರೆ ನೀಡಿದ SBI, ಹೀಗೆ ಖಾತೆ ತೆರೆಯಿರಿ
Tax Saving Fixed Deposits: ಭಾರತೀಯ ಸ್ಟೇಟ್ ಬ್ಯಾಂಕ್ 5 ವರ್ಷಗಳ ಲಾಕಿಂಗ್ ಅವಧಿ ಹೊಂದಿರುವ ತೆರಿಗೆ ಉಳಿತಾಯ FD (Tax Saver Fd) ಪ್ರಸ್ತುತ ಪಡಿಸಿದೆ. ನೀವು ಸಹ ಈ ಎಫ್ಡಿ ಖಾತೆಯನ್ನು ತೆರೆಯಲು ಬಯಸುತ್ತಿದ್ದರೆ, ನೀವು SBI Net Banking ಸೌಲಭ್ಯದ ಮೂಲಕ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು ಮಾಡುವ ಹೂಡಿಕೆಯ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಯನ್ನು ಸಹ ಪಡೆದುಕೊಳ್ಳಬಹುದು.
ನವದೆಹಲಿ: Tax Saving Fixed Deposits - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ (SBI News), ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ತೆರಿಗೆ ಉಳಿಸುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ (Sbi Latest News) ಹೆಚ್ಚಿಸಿದೆ. ಈ FD ಹಲವು ಪ್ರಯೋಜನಗಳನ್ನು ಹೊಂದಿದೆ. ತೆರಿಗೆ ಉಳಿತಾಯದ ಸ್ಥಿರ ಠೇವಣಿ ಯೋಜನೆ, ಹೂಡಿಕೆಯ ಅತ್ಯಂತ ವಿಶ್ವಾಸಾರ್ಹ ಯೋಜನೆಯಾಗಿದೆ. ಶೂನ್ಯ ಅಪಾಯದಲ್ಲಿ ಲಾಭ ಗಳಿಸಲು ಬಯಸುವ ಹೂಡಿಕೆದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇತರ ಬ್ಯಾಂಕ್‌ಗಳಂತೆ, ಎಸ್‌ಬಿಐ ಕೂಡ ತನ್ನ ಗ್ರಾಹಕರಿಗೆ ತೆರಿಗೆ ಉಳಿಸುವ ಎಫ್‌ಡಿಗಳನ್ನು ನೀಡುತ್ತಿದೆ.
ಇದನ್ನೂ ಓದಿ-ಎಂಥಹ ರಸ್ತೆಯೇ ಆದರೂ ಸುಲಭವಾಗಿ ಚಲಿಸುತ್ತದೆ 3-ಚಕ್ರದ ಎಲೆಕ್ಟ್ರಿಕ್ ಕಾರು...! ಬೆಲೆ ಕೇವಲ 4.5 ಲಕ್ಷ ರೂಪಾಯಿ
ತೆರಿಗೆ ವಿನಾಯಿತಿಯೂ ಪಡೆಯಬಹುದು (Sbi Tax Saver Scheme)
SBI ನೀಡುತ್ತಿರುವ ತೆರಿಗೆ ಉಳಿತಾಯ FD ಕೇವಲ ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ನೀವು ಈ ವಿಶೇಷ ಯೋಜನೆಯಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ತೆರಿಗೆ ಉಳಿತಾಯ FD ತೆರೆಯಲು ಬಯಸಿದರೆ, ನೀವು SBI ನ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಅದನ್ನು ತೆರೆಯಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ನೀವು ಪಡೆದುಕೊಳ್ಳಬಹುದು.
ಇದನ್ನೂ ಓದಿ-PM Jan Dhan ಖಾತೆದಾರರು ಈ ತಿಂಗಳಲ್ಲಿಯೇ ಮಾಡಿ ಮುಗಿಸಬೇಕು ಈ ಕೆಲಸ ಇಲ್ಲವಾದರೆ ಆಗಲಿದೆ ನಷ್ಟ
ತೆರಿಗೆ ಉಳಿತಾಯ FD ತೆರೆಯುವುದು ಹೇಗೆ
>> ಇದಕ್ಕಾಗಿ ಮೊದಲು ಎಸ್‌ಬಿಐ ವೆಬ್‌ಸೈಟ್‌ಗೆ ಹೋಗಿ ನೆಟ್ ಬ್ಯಾಂಕಿಂಗ್ ವಿಭಾಗಕ್ಕೆ ಹೋಗಿ.
>> ಈಗ FD ಟ್ಯಾಬ್ ಅಡಿಯಲ್ಲಿ e-TDR/ESTDR ಮೇಲೆ ಕ್ಲಿಕ್ ಮಾಡಿ.
>> ಈಗ ಆದಾಯ ತೆರಿಗೆ ಉಳಿತಾಯ ಯೋಜನೆಗೆ ಹೋಗಿ ಮತ್ತು E-TDR / ESTDR ಕ್ಲಿಕ್ ಮಾಡಿ.
ಇದನ್ನೂ ನೋಡಿ -
ಮಾರುಕಟ್ಟೆಗೆ ಬಂದಿದೆ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್, ಬುಕ್ಕಿಂಗ್ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.