ಮಾರುಕಟ್ಟೆಗೆ ಬಂದಿದೆ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್, ಬುಕ್ಕಿಂಗ್ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ

ನಹಕ್ ಮೋಟಾರ್ಸ್  ಇತ್ತೀಚೆಗೆ ಭಾರತದಲ್ಲಿ ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ನಹಕ್ ಪಿ-14 ನ ಪ್ರೀ -ಬುಕಿಂಗ್ ಅನ್ನು ಪ್ರಾರಂಭಿಸಿದೆ. 

Written by - Ranjitha R K | Last Updated : Mar 21, 2022, 09:18 AM IST
  • ನಹಕ್ P-14 ಹೈ ಸ್ಪೀಡ್ ಇ-ಬೈಕ್
  • ಗರಿಷ್ಠ ವೇಗ ಗಂಟೆಗೆ 135 ಕಿಮೀ ಎಂದು ಹೇಳಲಾಗಿದೆ
  • ಪ್ರಿ -ಬುಕಿಂಗ್ ಮಾರ್ಚ್ 15-30 ರವರೆಗೆ ಮುಂದುವರಿಯುತ್ತದೆ
ಮಾರುಕಟ್ಟೆಗೆ ಬಂದಿದೆ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್, ಬುಕ್ಕಿಂಗ್ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ  title=
ನಹಕ್ P-14 ಹೈ ಸ್ಪೀಡ್ ಇ-ಬೈಕ್ (file photo)

ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ (Petrol Diesel price)ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ  ಜೇಬಿಗೆ ಕತ್ತರಿ ಬಿದ್ದಿದೆ. ಗ್ರಾಹಕರು ಈಗ ಸಿಎನ್‌ಜಿ (CNG) ಅಥವಾ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸ್ಟಾರ್ಟ್ಅಪ್ ಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle), ಮಾರುಕಟ್ಟೆಗೆ ತರುತ್ತಿದೆ. 

ನಹಕ್ ಮೋಟಾರ್ಸ್ (Nahak Motors) ಇತ್ತೀಚೆಗೆ ಭಾರತದಲ್ಲಿ ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ನಹಕ್ ಪಿ-14 ನ ( Nahak P-14 ) ಪ್ರೀ -ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಬುಕಿಂಗ್ ಮಾರ್ಚ್ 15 ರಿಂದ ಮಾರ್ಚ್ 30, 2022 ರವರೆಗೆ ಮಾತ್ರ ತೆರೆದಿರಲಿದೆ. 11,000 ರೂ  ಟೋಕನ್‌ನೊಂದಿಗೆ ಬುಕ್ ಮಾಡಬಹುದು. ಮೇ 2022 ರಿಂದ, ಗ್ರಾಹಕರು ಈ ಬೈಕ್ ಅನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಲಾಭ! ಇಂದೇ ಈ ಕೆಲಸ ಮಾಡಿ

ಸಿಗಲಿದೆ 10 ರಷ್ಟು ರಿಯಾಯಿತಿ :
ನಹಕ್ ಮೋಟಾರ್ಸ್ P-14 ನ ಎಕ್ಸ್ ಶೋ ರೂಂ ಬೆಲೆಯನ್ನು 2.49 ಲಕ್ಷ ರೂ. ಎಂದು ನಿಗದಿಪಡಿಸಿದೆ. ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಕಂಪನಿಯು ಪ್ರಿ-ಬುಕಿಂಗ್ (Pre booking) ಮಾಡುವವರಿಗೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಿದೆ. 

ಗರಿಷ್ಠ ವೇಗ ಗಂಟೆಗೆ 135 ಕಿಮೀ! :
 ಆಟೋ ಎಕ್ಸ್‌ಪೋ 2020 ರಲ್ಲಿ  P-14 ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರದರ್ಶಿಸಲಾಗಿತ್ತು. COVID-19 ಸಾಂಕ್ರಾಮಿಕದ ಸವಾಲುಗಳ ಹೊರತಾಗಿಯೂ ಈ ಬೈಕ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಈ ಬೈಕ್ ನ ಗರಿಷ್ಠ ವೇಗ ಗಂಟೆಗೆ 135 ಕಿಮೀ ಎಂದು ಹೇಳಲಾಗಿದೆ. ವಿಶಿಷ್ಟವಾದ P-14 72V 60Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದಲ್ಲದೇ ಫಾಸ್ಟ್  ಚಾರ್ಜರ್ (Fast Charger)ಸಹಾಯದಿಂದ ಬೈಕ್ ಅನ್ನು ಕೇವಲ 30 ನಿಮಿಷಗಳಲ್ಲಿಯೂ  ಚಾರ್ಜ್ ಮಾಡಬಹುದಾಗಿದೆ.

ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ 'PM ಆವಾಸ್ ಯೋಜನೆ'ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News