PM Jan Dhan ಖಾತೆದಾರರು ಈ ತಿಂಗಳಲ್ಲಿಯೇ ಮಾಡಿ ಮುಗಿಸಬೇಕು ಈ ಕೆಲಸ ಇಲ್ಲವಾದರೆ ಆಗಲಿದೆ ನಷ್ಟ

ಸರ್ಕಾರದ ವಿಶೇಷ ಯೋಜನೆಯಾದ ಜನ್ ಧನ್ ಯೋಜನೆಯ ಖಾತೆದಾರರು ಹಲವು ಸೌಲಭ್ಯಗಳ ಜೊತೆಗೆ 1 ಲಕ್ಷ ರೂ.ಗಳ ಅಪಘಾತ ವಿಮೆಯನ್ನೂ ಪಡೆಯುತ್ತಾರೆ. ಆದರೆ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಈ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. 

Written by - Ranjitha R K | Last Updated : Mar 21, 2022, 03:11 PM IST
  • ಜನ್ ಧನ್ ಖಾತೆದಾರರಿಗೆ ಪ್ರಮುಖ ಸುದ್ದಿ
  • ತಕ್ಷಣ ಈ ಕೆಲಸ ಮಾಡದಿದ್ದಲ್ಲಿ ಸಂಭವಿಸಲಿದೆ ನಷ್ಟ
  • ಸರ್ಕಾರ ಜಾರಿಗೊಳಿಸಿದೆ ಆದೇಶ
PM Jan Dhan ಖಾತೆದಾರರು ಈ ತಿಂಗಳಲ್ಲಿಯೇ ಮಾಡಿ ಮುಗಿಸಬೇಕು ಈ ಕೆಲಸ ಇಲ್ಲವಾದರೆ ಆಗಲಿದೆ ನಷ್ಟ  title=
ಜನ್ ಧನ್ ಖಾತೆದಾರರಿಗೆ ಪ್ರಮುಖ ಸುದ್ದಿ (file photo)

ಬೆಂಗಳೂರು : PM Jan Dhan account : ನೀವು ಸಹ ಜನ್ ಧನ್ ಖಾತೆದಾರರಾಗಿದ್ದರೆ, ನಿಮಗಾಗಿ ಬಹಳ ಮುಖ್ಯವಾದ ಸುದ್ದಿ ಇದೆ. ಜನ್ ಧನ್ ಖಾತೆದಾರರಿಗೆ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶವನ್ನು ಪಾಲಿಸದಿದ್ದಲ್ಲಿ, 1 ಲಕ್ಷ 30 ಸಾವಿರ ರೂ. ಗಳ ನಷ್ಟ  ಸಂಭವಿಸಲಿದೆ. 

 ಯಾವಾಗ ಸಿಗುತ್ತದೆ 1.30 ಲಕ್ಷ ರೂಪಾಯಿ ? :
ಸರ್ಕಾರದ ವಿಶೇಷ ಯೋಜನೆಯಾದ ಜನ್ ಧನ್ ಯೋಜನೆಯ (Jan dhan account) ಖಾತೆದಾರರು ಹಲವು ಸೌಲಭ್ಯಗಳ ಜೊತೆಗೆ 1 ಲಕ್ಷ ರೂ.ಗಳ ಅಪಘಾತ ವಿಮೆಯನ್ನೂ ಪಡೆಯುತ್ತಾರೆ. ಆದರೆ ಖಾತೆಯನ್ನು ಆಧಾರ್‌ನೊಂದಿಗೆ (Aadhaar)ಲಿಂಕ್ ಮಾಡದಿದ್ದರೆ, ಈ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಇದಲ್ಲದೆ, ಈ ಖಾತೆಯಲ್ಲಿ 30000 ರೂಪಾಯಿಗಳ ಅಪಘಾತ ಮರಣ ವಿಮೆ ಕೂಡಾ ಸಿಗುತ್ತದೆ. ಆದರೆ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿದಾಗ ಮಾತ್ರ  ಈ ಸೌಲಭ್ಯ ಸಿಗುವುದು ಸಾಧ್ಯವಾಗುತ್ತದೆ. 

ಇದನ್ನೂ  ಓದಿ :  Arecanut Today Price: ರಾಜ್ಯದಲ್ಲಿ ರಾಶಿ ಅಡಿಕೆಗೆ ಬಂಪರ್ ಧಾರಣೆ

ನಿಮ್ಮ ಖಾತೆಯನ್ನು ಆಧಾರ್‌ನೊಂದಿಗೆ ಹೀಗೆ ಲಿಂಕ್ ಮಾಡಿ:
1.  ಬ್ಯಾಂಕ್‌ಗೆ (Bank) ಭೇಟಿ ನೀಡುವ ಮೂಲಕ  ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.
2.  ಇದಕ್ಕಾಗಿ, ನೀವು ಆಧಾರ್ ಕಾರ್ಡ್‌ನ ಫೋಟೋ ಪ್ರತಿ,  ಪಾಸ್‌ಬುಕ್ ಅನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. 
3.  ಹಲವು ಬ್ಯಾಂಕ್‌ಗಳು ಈಗ ಸಂದೇಶದ ಮೂಲಕವೂ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುತ್ತಿವೆ.
4.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ  ಮೆಸೇಜ್ ಬಾಕ್ಸ್‌ಗೆ ಹೋಗಿ ಮತ್ತು UID<SPACE>ಆಧಾರ್ ಸಂಖ್ಯೆ<SPACE>ಖಾತೆ ಸಂಖ್ಯೆಯನ್ನು 567676 ಗೆ ಕಳುಹಿಸಿ. ಇಷ್ಟು ಮಾಡಿದರೆ  ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.
5.  ನಿಮ್ಮ ಆಧಾರ್ ಗೆ ಮತ್ತು ಬ್ಯಾಂಕ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಬೇರೆಯಾಗಿದ್ದರೆ ಲಿಂಕ್ ಮಾಡುವುದು ಸಾಧ್ಯವಾಗುವುದಿಲ್ಲ. 
6.  ಇದರ ಹೊರತಾಗಿ ಹತ್ತಿರದ ಎಟಿಎಂನಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.

ಈ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ  :
ಇದಕ್ಕಾಗಿ ನೀವು ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ (Passport) ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್ (PAN Card), ವೋಟರ್ ಕಾರ್ಡ್, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ಖಾತೆ ತೆರೆಯುವ ದೃಢೀಕೃತ ಭಾವಚಿತ್ರದೊಂದಿಗೆ ಗೆಜೆಟೆಡ್ ಅಧಿಕಾರಿ ನೀಡಿದ ಪತ್ರ.

ಇದನ್ನೂ  ಓದಿ :  ಮಾರುಕಟ್ಟೆಗೆ ಬಂದಿದೆ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್, ಬುಕ್ಕಿಂಗ್ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ

ಜನ್ ಧನ್ ಖಾತೆ ಯೋಜನೆ ಎಂದರೇನು?
ಗ್ರಾಹಕರು ಪ್ರಧಾನ ಮಂತ್ರಿ ಜನ್ ಧನ್ ಖಾತೆಯಲ್ಲಿ  5000 ರೂ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ. ಓವರ್‌ಡ್ರಾಫ್ಟ್ ಸೌಲಭ್ಯದ ಲಾಭ ಪಡೆಯಲು, ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದಷ್ಟೇ ಅಲ್ಲ, ಇದಕ್ಕಾಗಿ ಪಿಎಂಜೆಡಿವೈ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಈ ಯೋಜನೆಯಡಿ, ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆ ತೆರೆಯುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿತ್ತು. ಜನ್ ಧನ್ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ಸಹ ತೆರೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News