ಡೆಡ್ ಲೈನ್ ಘೋಷಿಸಿದ ಸರ್ಕಾರ! ಈ ತಾರೀಕಿನ ನಂತರ ಐಟಿಆರ್ ಸಲ್ಲಿಸುವುದು ಸಾಧ್ಯವಿಲ್ಲ
ITR Filling: ಆದಾಯ ತೆರಿಗೆ ರಿಟರ್ನ್ ಅನ್ನು ಸಮಯೋಚಿತವಾಗಿ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರರ ಜವಾಬ್ದಾರಿಯಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ತಪ್ಪಿಸಿಕೊಂಡರೆ, ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
Income Tax Return : ಆದಾಯ ತೆರಿಗೆ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಈ ಬಾರಿ ಆದಾಯ ತೆರಿಗೆ ಸಲ್ಲಿಸುವಾಗ ಹಲವು ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆಗಳಾಗಿದ್ದು, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿಯೂ ಬದಲಾವಣೆಗಳಾಗಿವೆ. ಇದರೊಂದಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನೂ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವಿನ ಬಗ್ಗೆಯೂ ಸರ್ಕಾರ ಘೋಷಣೆ ಮಾಡಿದೆ.
ಆದಾಯ ತೆರಿಗೆ ರಿಟರ್ನ್ :
ಮತ್ತೊಂದೆಡೆ, 2022-23ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ತಪ್ಪಿಸಿಕೊಂಡರೆ, ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ, 2022-23 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31. ಆದಾಯ ತೆರಿಗೆ ರಿಟರ್ನ್ ಅನ್ನು ಸಮಯೋಚಿತವಾಗಿ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರರ ಜವಾಬ್ದಾರಿಯಾಗಿದೆ.
ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ! ಹೊರ ಬಿತ್ತು ಹಣಕಾಸು ಸಚಿವಾಲಯದ ಆದೇಶ
ತೆರಿಗೆಗೆ ಒಳಪಡುವ ಆದಾಯ :
ಜುಲೈ 31 ರವರೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿಫಲವಾದರೆ, ದಂಡವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆಗೆ ಒಳಪಟ್ಟಿದ್ದರೆ ಮತ್ತು ಜುಲೈ 31 ರ ನಂತರ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಸಲ್ಲಿಸಿದರೆ, ದಂಡವನ್ನು ಪಾವತಿಸಬೇಕಾಗುತ್ತದೆ.
ಕೆಲವರು ಆದಾಯ ತೆರಿಗೆ ಸಲ್ಲಿಸುವುದಿಲ್ಲ. ಇದು ಕಾನೂನು ಪ್ರಕಾರ ತಪ್ಪು. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ನೆರವಾಗಿ ಸಲ್ಲಿಸುವ ಕಾರಣ ಇದನ್ನೂ ಕಾನೂನು ಸಾಕ್ಷಿಯಾಗಿ ಬಳಸಿಕೊಳ್ಳಬಹುದು. ಆದಾಯ ತೆರಿಗೆ ಪಾವತಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ . ಹಾಗಾಗಿ ನಿಗದಿತ ದಿನಾಂಕದ ಒಳಗೆ ಆದಾಯ ತೆರಿಗೆ ಪಾವತಿಸುವುದು ಉತ್ತಮ.
ಇದನ್ನೂ ಓದಿ : ಹೊಸ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ ಇದ್ದರೆ ಅಷ್ಟೇ ಸಾಕು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.