ಹೊಸ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್‌ ಇದ್ದರೆ ಅಷ್ಟೇ ಸಾಕು!

New Driving License: ನೀವೂ ಸಹ ಇನ್ನೂ ಡ್ರೈವಿಂಗ್ ಲೈಸೆನ್ಸ್ ಪಡೆದಿಲ್ಲವೇ? ಈಗ ನೀವು ಡಿ‌ಎಲ್ ಪಡೆಯಲು ಎಲ್ಲಿಯೂ ಹೋಗುವ ಅಗತ್ಯವಿಲ್ಲ. ನೀವು ಕುಳಿತಿರುವ ಜಾಗದಲ್ಲಿಯೇ, ಕೇವಲ ಆಧಾರ್ ಕಾರ್ಡ್ ಬಳಸಿ ನೀವು ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. 

Written by - Yashaswini V | Last Updated : Apr 3, 2023, 03:25 PM IST
  • ಎರಡು ಹಂತಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಲಾಗುತ್ತದೆ.
  • ಮೊದಲ ಹಂತದಲ್ಲಿ ಲರ್ನಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು
  • ಎರಡನೇ ಹಂತದಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು.
ಹೊಸ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್‌ ಇದ್ದರೆ ಅಷ್ಟೇ ಸಾಕು! title=
New Driving License

How To Get New Driving License: ಯಾವುದೇ ರೀತಿಯ ವಾಣಿಜ್ಯ ಅಥವಾ ಖಾಸಗಿ ವಾಹನಗಳನ್ನು ಚಾಲನೆ ಮಾಡಲು ಚಾಲನಾ ಪರವಾನಗಿ ಎಂದರೆ ಡ್ರೈವಿಂಗ್ ಲೈಸೆನ್ಸ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಡ್ರೈವಿಂಗ್ ಲೈಸೆನ್ಸ್ ವಾಹನ ಸವಾರರಿಗೆ ವಾಹನ ಚಲಾಯಿಸುವ ಹಕ್ಕನ್ನು ನೀಡುವ ಅಧಿಕೃತ ದಾಖಲೆಯಾಗಿದೆ. ನೀವು ಇನ್ನೂ ಕೂಡ  ಡ್ರೈವಿಂಗ್ ಲೈಸೆನ್ಸ್  ಪಡೆದಿಲ್ಲವಾದರೆ, ಕೇವಲ ನಿಮ್ಮ ಆಧಾರ್ ಕಾರ್ಡ್ ಬಳಸಿ  ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸುಲಭ ವಿಧಾನವನ್ನು ನಾವಿಲ್ಲಿ ತಿಳಿಸಲಿದ್ದೇವೆ. 

ವಾಸ್ತವವಾಗಿ, ಎರಡು ಹಂತಗಳಲ್ಲಿ  ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಲರ್ನಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು ಮತ್ತು ಎರಡನೇ ಹಂತದಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು. ಈ ಲೇಖನದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸುಲಭ ಪ್ರಕ್ರಿಯೆಯನ್ನು ತಿಳಿಸಲಿದ್ದೇವೆ. ಅದುವೇ, ಆಧಾರ್ ಕಾರ್ಡ್ ಒಂದಿದ್ದರೆ ಸಾಕು ಡ್ರೈವಿಂಗ್ ಲೈಸೆನ್ಸ್‌ಗಾಗಿ ನೀವು ಯಾವ ರೀತಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಯೋಣ... 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸರ್ಕಾರ ! ವೇತನದೊಂದಿಗೆ ಸಿಗುವುದು ಅರಿಯರ್ಸ್

ಲರ್ನಿಂಗ್ ಲೈಸೆನ್ಸ್‌/ಕಲಿಕೆಯ ಪರವಾನಗಿ ಮತ್ತು ಚಾಲನಾ ಪರವಾನಗಿಯನ್ನು ಆಧಾರ್ ಇ ಕೆವೈಸಿ ಮೂಲಕ ಮಾಡಲಾಗುವುದು. ಡ್ರೈವಿಂಗ್ ಲೈಸೆನ್ಸ್ ಮಾಡುವ ಮೊದಲು ಕಲಿಕಾ ಲೈಸೆನ್ಸ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ.  ನೀವು ಲರ್ನಿಂಗ್ ಲೈಸೆನ್ಸ್‌ಗಾಗಿ ಆಧಾರ್ ಕಾರ್ಡ್‌ನೊಂದಿಗೆ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ- ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್ ! ಇನ್ನು ಇವರು ತೆರಿಗೆ ಪಾವತಿಸುವಂತಿಲ್ಲ

ಆಧಾರ್ ಕಾರ್ಡ್‌ನೊಂದಿಗೆ ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹಂತ-ಹಂತದ ಪ್ರಕ್ರಿಯೆ:-
ನೀವು ಆರ್‌ಟಿಒ ಕಚೇರಿಗೆ ಹೋಗದೆ ಕುಳಿತಲ್ಲಿಯೇ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗೆ ನೀಡಲಾದ ಹಂತ-ಹಂತದ ಪ್ರಕ್ರಿಯೆಗಳನ್ನು ಅಂಶುಯರಿಸಿ... 
>> ಇದಕ್ಕಾಗಿ ಮೊದಲು  ಅಧಿಕೃತ ವೆಬ್‌ಸೈಟ್‌ನ ಮುಖಪುಟಕ್ಕೆ ಭೇಟಿ ನೀಡಿ.
>> ಮುಖಪುಟಕ್ಕೆ ಬಂದ ನಂತರ, ನೀವು ಡ್ರೈವಿಂಗ್/ಲರ್ನಿಂಗ್ ಪರವಾನಗಿಯ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.
>> ಬಳಿಕ ಹೊಸ ಪುಟದಲ್ಲಿ ರಾಜ್ಯವನ್ನು ಆಯ್ಕೆ ಮಾಡಿ. 
>> ರಾಜ್ಯವನ್ನು ಆಯ್ಕೆ ಮಾಡಿದ ನಂತರ, ನೀವು RTO ಇಲ್ಲದೆ ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿಯನ್ನು ಅನ್ವಯಿಸುವ ಆಯ್ಕೆಯನ್ನು ಪಡೆಯುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಬೇಕು.
>> ಬಳಿಕ ನಿಮ್ಮ ಮುಂದೆ ಅರ್ಜಿ ನಮೂನೆಯೊಂದು ತೆರೆದುಕೊಳ್ಳುತ್ತಾಡ್. ಇದನ್ನು ಎಚ್ಚರಿಕೆಯಿಂದ ಓದಿ ಭರ್ತಿ ಮಾಡಿ.
>> ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
>> ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿದ ನಂತರ, ನೀವು ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
>> ಬಳಿಕ ನೀವು ರಶೀದಿ ಪಡೆಯಲು ನಿಗದಿತ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಭವಿಷ್ಯದ ಉಪಯೋಗಕ್ಕಾಗಿ ಅದರ ಪ್ರಿಂಟ್-ಔಟ್ ತೆಗೆದು ಜೋಪಾನವಾಗಿಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News