ನವದೆಹಲಿ: ಕೊರೊನಾವೈರಸ್ (Coronavirus) ಕಾರಣದಿಂದಾಗಿ, ವಿಶ್ವಾದ್ಯಂತ ಬಹುತೇಕ ಕಂಪನಿಗಳು ಆರ್ಥಿಕ ನಷ್ಟವನ್ನು ಅನುಭವಿಸಿವೆ ಮತ್ತು ನೌಕರರ ವೇತನವನ್ನು ಕಡಿತಗೊಳಿಸಲಾಗುತ್ತಿದೆ, ಆದರೆ, ಇವೆಲ್ಲವುಗಳ ನಡುವೆಯೂ ಕೂಡ ಉದ್ಯಮಿಯೊಬ್ಬರು ತನ್ನ ಕಂಪನಿಯ  ಉದ್ಯೋಗಿಗಳನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದ್ದಾರೆ. ಕಂಪನಿಯ ಲಾಭದ ನಂತರ ದಿ ಹಟ್ ಗ್ರೂಪ್ನ ಮಾಲೀಕ ಮ್ಯಾಥ್ಯೂ ಮೋಲ್ಡಿಂಗ್ ತನ್ನ ಉದ್ಯೋಗಿಗಳಿಗೆ ಕಂಪನಿಯ ಷೇರುಗಳನ್ನು ವಿತರಿಸಿದ್ದಾರೆ. (ಫೋಟೋ ಕೃಪೆ - Instagram)


COMMERCIAL BREAK
SCROLL TO CONTINUE READING

ಇದನ್ನು ಓದಿ-ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನಗಳು ಡಿಸೆಂಬರ್ 31 ರವರೆಗೆ ಸ್ಥಗಿತ


ಕಂಪನಿಯ ನೌಕರರಿಗೆ 8183 ಕೋಟಿ ರೂ.ಗಳ ಷೇರು ವಿತರಣೆ
ಮ್ಯಾಥ್ಯೂ ಮೋಲ್ಡಿಂಗ್ ತನ್ನ ಕಂಪನಿಯ ಲಾಭದಿಂದ 830 ಮಿಲಿಯನ್ ಪೌಂಡ್ ಅಥವಾ ಸುಮಾರು 8183 ಕೋಟಿ ರೂಪಾಯಿಗಳ ಷೇರುಗಳನ್ನು ತನ್ನ ಕಂಪನಿಯ ಉದ್ಯೋಗಿಗಳಿಗೆ ವಿತರಣೆ ಮಾಡಿದ್ದಾರೆ. ಇದಾದ ನಂತರ , ಕಂಪನಿಯ ಹೆಚ್ಚಿನ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.
ಬಿಕ್ಕಟ್ಟಿನ ಮಧ್ಯೆ ಪರಿಹಾರದ ಸುದ್ದಿ: ಕರೋನಾ ಲಸಿಕೆಯ ಸಂಪೂರ್ಣ ವೆಚ್ಚ ಭರಿಸಲಿದೆಯಂತೆ ಮೋದಿ ಸರ್ಕಾರ!
ನೀವು ಗಮನಿಸಬೇಕಾದ ಕೇಂದ್ರದ ಹೊಸ ಕೊವಿಡ್ ಮಾರ್ಗಸೂಚಿಗಳು...!
ಮೊದಲು ಯಾರಿಗೆ Covid-19 Vaccine ನೀಡಲಾಗುವುದು, ರಾಜ್ಯಗಳ ಜೊತೆಗೆ ಪ್ಲಾನ್ ಹಂಚಿಕೊಂಡ ಕೇಂದ್ರ


ಕಂಪನಿಯ ಷೇರುಗಳನ್ನು ಏಕೆ ವಿತರಿಸಲಾಗಿದೆ?
ಮ್ಯಾಥ್ಯೂ ತಮ್ಮ ಹಾಗೂ ತಮ್ಮ ಕಂಪನಿಗೆ ಸಿಕ್ಕ ಲಾಭವನ್ನು ಎಲ್ಲರಿಗೂ ವಿತರಿಸಲು ಬಯಸಿದ್ದರು. ಹೀಗಾಗಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಕುರಿತು ಮಾತನಾಡುವ ಮ್ಯಾಥ್ಯೂ, 'ಪ್ರಸ್ತುತ ವ್ಯಾಪಾರದ ವಿರುದ್ಧವಾಗಿ ಸಾಕಷ್ಟು ಹೇಳಿಕೆಗಳನ್ನು ನೀಡಲಾಗುತ್ತಿತ್ತು. ಆದರೆ, ಒಂದು ದಿನ ಷೇರುಗಳ ಬೆಲೆ ಚೇತರಿಸಿಕೊಳ್ಳಲಿದೆ ಎಂಬ ಭರವಸೆ ನನಗಿತ್ತು. ಯಾರೂ ಕೂಡ ಪರ್ಫೆಕ್ಟ್ ಆಗಿರುವುದಿಲ್ಲ. ಆದರೆ, ನಾವೆಲ್ಲರೂ ಲಾಭ ಮತ್ತು ಹಣದಲ್ಲಿ ನಮ್ಮ ಪಾಲನ್ನು ಮಾತ್ರ ಬಯಸುತ್ತೇವೆ' ಎಂದಿದ್ದಾರೆ.