Expectations From Union Budget 2023: ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕೇಂದ್ರ ಸರ್ಕಾರದಿಂದ ಈ ಬಾರಿಯ ಬಜೆಟ್‌ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಬಾರಿ ಸರ್ಕಾರವು ತೆರಿಗೆಯಿಂದ ಹಿಡಿದು ಕೃಷಿ ರಾಸಾಯನಿಕಗಳವರೆಗೆ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಬಹುದು. ಇದರೊಂದಿಗೆ ಇನ್ನೂ ಮನೆ ಸಿಗದವರಿಗೆ ಮನೆ ನೀಡಲು ಸರ್ಕಾರ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಗ್ರೋಥ್ ಮೇಲೆ ಇರಲಿದೆ ಫೋಕಸ್ : 
ವಿಶ್ಲೇಷಕ ಗೌರವ್ ಶರ್ಮಾ ಪ್ರಕಾರ, ಅಭಿವೃದ್ದಿಯ ಮೇಲೆ ಗಮನವನ್ನು ಕೇಂದ್ರಿಕರಿಸಿ ಹಣದುಬ್ಬರವನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಇದರೊಂದಿಗೆ ಗ್ರಾಹಕರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಸರ್ಕಾರದ ಈ ಕ್ರಮದ ಮೂಲಕ ಗ್ರಾಹಕರ ಜೇಬಿಗೆ ಹೆಚ್ಚಿನ ಹಣ ಸೇರುವಂತೆ ಮಾಡಬಹುದು. ಹೀಗಾದಾಗ ಹೂಡಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ : Auto Expo 2023: ಹೊಸ ಕಿಯಾ ಕಾರ್ನಿವಲ್ ಅನಾವರಣ; ವೈಶಿಷ್ಟ್ಯ, ವಿನ್ಯಾಸ & ದರ ಪರಿಶೀಲಿಸಿ


ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆಯ ನಿರೀಕ್ಷೆ :
ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುವವರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಲಿಂಕ್ಡ್ ಇನ್ಸೆಂಟಿವ್ ಯೋಜನೆಗಳ ಪ್ರೊಡಕ್ಷನ್ ಬಗ್ಗೆ ಸರ್ಕಾರ ಈಗಾಗಲೇ ಘೋಷಿಸಿದೆ. 


ಪರಿಹಾರದ ನಿರೀಕ್ಷೆಯಲ್ಲಿ ಹಲವು ಕ್ಷೇತ್ರಗಳು :  
ಎಲ್ಲಾ ನಿವಾಸಿಗಳಿಗೂ ಮನೆ ನೀಡುವತ್ತ ಸರ್ಕಾರ ಗಮನ ಹರಿಸುತ್ತಿದೆ. ಸರ್ಕಾರದ ಪ್ರಸ್ತುತ ಯೋಜನೆಗಳ ಹೊರತಾಗಿ, ಈ ಬಜೆಟ್‌ನಲ್ಲಿ ಅನೇಕ ಹೊಸ ಘೋಷಣೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇದರೊಂದಿಗೆ ಪೈಪ್, ಕೇಬಲ್ ಮುಂತಾದ ಹಲವು ವಲಯಗಳ ಕೈಗಾರಿಕೆಗಳು ವೇಗ ಪಡೆಯಲಿದೆ. 


ಇದನ್ನೂ ಓದಿ : SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ


ಕೃಷಿ ರಾಸಾಯನಿಕ ವಲಯದಲ್ಲಿ ಉತ್ತಮ ಚೇತರಿಕೆ : 
ಇದರೊಂದಿಗೆ ಕೃಷಿ ರಾಸಾಯನಿಕ ವಲಯದಲ್ಲೂ ಚೇತರಿಕೆ ಕಾಣುತ್ತಿದೆ. ಈ ವಲಯಕ್ಕೆ ಸಂಬಂಧಿಸಿದಂತೆ ಅನೇಕ ಸಕಾರಾತ್ಮಕ ಘೋಷಣೆಗಳನ್ನು  ಮಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.