SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ

Bank Fixed Deposit: ನೀವು ಬ್ಯಾಂಕ್ ಖಾತೆದಾರರಾಗಿದ್ದರೆ,  ಎಸ್ಬಿಐ, ಪಿಎನ್ಬಿ, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ಇಲ್ಲಿದೆ ಪ್ರಮುಖ ಸುದ್ದಿ. ಪ್ರಸ್ತುತ, ದೇಶದ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಗ್ರಾಹಕರಿಗೆ ಸ್ಥಿರ ಠೇವಣಿ ಸೌಲಭ್ಯವನ್ನು ಒದಗಿಸುತ್ತಿದ್ದು  ನಿಮ್ಮ ಹಣದಿಂದ ನೀವು ಕೇವಲ 6 ತಿಂಗಳಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು. 

Written by - Yashaswini V | Last Updated : Jan 11, 2023, 03:24 PM IST
  • ಹಣ ಉಳಿತಾಯ, ಹೂಡಿಕೆ ಮತ್ತು ಗ್ಯಾರೆಂಟಿ ಲಾಭ ಪಡೆಯಲು ಸ್ಥಿರ ಠೇವಣಿ ಎಂದರೆ ಎಫ್‌ಡಿ ಉತ್ತಮ ಮಾರ್ಗವಾಗಿದೆ.
  • ಇದರಲ್ಲಿ ಗ್ರಾಹಕರ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ ಗ್ಯಾರಂಟಿ ರಿಟರ್ನ್ಸ್ ಕೂಡ ಲಭ್ಯವಿರುತ್ತವೆ.
  • ಆದರೆ, ಕೇವಲ ಆರು ತಿಂಗಳಿನಲ್ಲಿ ಉತ್ತಮ ರಿಟರ್ನ್ಸ್ ಪಡೆಯಲು ಏನು ಮಾಡಬೇಕು ಎಂದು ತಿಳಿಯಿರಿ.
SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ   title=
Bank fd interest rates

Bank Fixed Deposit: ನೀವು ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗಾಗಿ ಇಲ್ಲಿದೆ ಪ್ರಮುಖ ಮಾಹಿತಿ. ಪ್ರಸ್ತುತ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಸ್ಥಿರ ಠೇವಣಿ ಎಂದರೆ ಎಫ್‌ಡಿ ಸೌಲಭ್ಯ ಲಭ್ಯವಿದೆ. ಎಸ್ಬಿಐ, ಪಿಎನ್ಬಿ, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಯಾವುದೇ ಬ್ಯಾಂಕ್‌ಗಳಲ್ಲಿ ನೀವು ಖಾತೆಯನ್ನು ಹೊಂದಿದ್ದು ಅಲ್ಲಿ ಎಫ್‌ಡಿ ಮಾಡಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಎಫ್‌ಡಿ ಮಾಡಲು ಯೋಜಿಸುತ್ತಿದ್ದ್ದರೆ ಕೇವಲ ಆರೇ ಆರು ತಿಂಗಳಿನಲ್ಲಿ ಉತ್ತಮ ಆದಾಯ ಗಳಿಸಬಹುದು. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ.

ವಾಸ್ತವವಾಗಿ, ಹಣ ಉಳಿತಾಯ, ಹೂಡಿಕೆ ಮತ್ತು ಗ್ಯಾರೆಂಟಿ ಲಾಭ ಪಡೆಯಲು ಸ್ಥಿರ ಠೇವಣಿ ಎಂದರೆ ಎಫ್‌ಡಿ ಉತ್ತಮ ಮಾರ್ಗವಾಗಿದೆ. ಇದರಲ್ಲಿ ಗ್ರಾಹಕರ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ ಗ್ಯಾರಂಟಿ ರಿಟರ್ನ್ಸ್ ಕೂಡ ಲಭ್ಯವಿರುತ್ತವೆ. ಆದರೆ, ಕೇವಲ ಆರು ತಿಂಗಳಿನಲ್ಲಿ ಉತ್ತಮ ರಿಟರ್ನ್ಸ್ ಪಡೆಯಲು ಏನು ಮಾಡಬೇಕು ಎಂದು ತಿಳಿಯಿರಿ.

ಈ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಲಭ್ಯವಿದೆ?
ನಿಮ್ಮ ಹಣದ ಸುರಕ್ಷತೆಗಾಗಿ ಎಸ್‌ಬಿಐ, PNB, HDFC ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ICICI ನಂತಹ ದೊಡ್ಡ ಸರ್ಕಾರಿ ಮತ್ತು ಖಾಸಗಿ  ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಯಾವ ಬ್ಯಾಂಕ್ ಎಂದು ಬಡ್ಡಿ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ- Bank Rules: ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ ಸರ್ಕಾರಿ ಬ್ಯಾಂಕ್

ಎಸ್‌ಬಿಐ ಎಫ್‌ಡಿ ದರಗಳು:
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಸ್ಥಿರ ಠೇವಣಿ ಹೊಂದಿದ್ದರೆ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಆರು ತಿಂಗಳ ಎಫ್‌ಡಿ ಮೇಲೆ 4.5%  ಬಡ್ಡಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಹಿರಿಯ ನಾಗರಿಕರಿಗೆ 5% ಬಡ್ಡಿಯನ್ನು ಒದಗಿಸುತ್ತದೆ.

ಪಿಎನ್ಬಿ ಎಫ್‌ಡಿ ದರಗಳು:
ಪಿಎನ್ಬಿ ಬ್ಯಾಂಕ್‌ನಲ್ಲಿ ಆರು ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ 4.5%  ಬಡ್ಡಿ ಲಭ್ಯವಿದ್ದರೆ,  ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.

ಬ್ಯಾಂಕ್ ಆಫ್ ಬರೋಡ ಸ್ಥಿರ ಠೇವಣಿ ದರಗಳು:
ಎಸ್‌ಬಿಐ, ಪಿಎನ್ಬಿ ಮಾತ್ರವಲ್ಲದೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಲ್ಲಿಯೂ ಸಹ ಆರು ತಿಂಗಳ ಸ್ಥಿರ ಠೇವಣಿಯಲ್ಲಿ ಸಾಮಾನ್ಯ ನಾಗರಿಕರಿಗೆ 4.5%  ಬಡ್ಡಿ ಲಭ್ಯವಿದ್ದರೆ,  ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.

ಇದನ್ನೂ ಓದಿ- SBI Account Types : ಎಸ್​ಬಿಐನಲ್ಲಿದೆ 6 ವಿಧದ ಉಳಿತಾಯ ಖಾತೆಗಳು : ಅವುಗಳು ಬಗ್ಗೆ ಇಲ್ಲಿದೆ ಮಾಹಿತಿ!

HDFC ಮತ್ತು ICICI ಬ್ಯಾಂಕ್ ಎಫ್‌ಡಿ ದರಗಳು:
ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲದೆ ಖಾಸಗಿ ವಲಯದ ಬ್ಯಾಂಕ್‌ಗಳು ಕೂಡ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಮೇಲೆ ಉತ್ತಮ ಬಡ್ಡಿಯನ್ನು ನೀಡುತ್ತವೆ. HDFC ಬ್ಯಾಂಕ್  ಸಾಮಾನ್ಯ ನಾಗರಿಕರಿಗೆ 6 ತಿಂಗಳವರೆಗೆ 4.5%  ಬಡ್ಡಿ ಸೌಲಭ್ಯವನ್ನು ನೀಡುತ್ತದೆ. ಇದೇ ಸಮಯದಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಆರು ತಿಂಗಳ ಸ್ಥಿರ ಠೇವಣಿ ಮೇಲೆ 4.75% ಬಡ್ಡಿಯನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News