ನವದೆಹಲಿ: ಕೊವಿಡ್ (Coronavirus) ಕಾಲಾವಧಿಯಲ್ಲಿ ಅಂದಾಜು ಸುಮಾರು 1 ಕೋಟಿ ಜನರು ತಮ್ಮ ನೌಕರಿ ಕಳೆದುಕೊಂಡಿದ್ದು, ಮುಂದೆಯೂ ಕೂಡ ಹಲವು ಕ್ಷೇತ್ರಗಳಲ್ಲಿ ಅನಿಶ್ಚಿತತೆಯ ವಾತಾವರಣ ಮುಂದುವರೆಯಲಿದೆ. ಈ ಅನಿಶ್ಚಿತತೆಯ ಹಿನ್ನೆಲೆ ಹಲವು ವಿಮಾ ಕಂಪನಿಗಳು ವಿಶೇಷ ಜಾಬ್ ಲಾಸ್ ಇನ್ಸುರನ್ಸ್ (Job Loss Insurance) ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಕಂಪನಿ ಬಂದ್ ಆದ ಸಂದರ್ಭದಲ್ಲಿ, ನೌಕರಿ ಕಡಿತದಂತಹ ಸಂದರ್ಭದಲ್ಲಿ ಅಥವಾ ನೌಕರಿಯಿಂದ ತೆಗೆದುಹಾಕಿದ ಸಂದರ್ಭಗಳಲ್ಲಿ ಈ ವಿಮಾ ಕಂಪನಿಗಳು ನೀವು ಪಾವತಿಸಬೇಕಾಗಿರುವ EMI ಪಾವತಿಸಲಿವೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover


ಇಲ್ಲಿವೆ ವೈಶಿಷ್ಟ್ಯಗಳು
ವಿಮಾ ಕಂಪನಿಗಳು ಪ್ರಾರಂಭಿಸಿರುವ ಉತ್ಪನ್ನಗಳು ಉದ್ಯೋಗ ನಷ್ಟ ವಿಮಾ ಉತ್ಪನ್ನಗಳಾಗಿವೆ. ಈ ಉತ್ಪನ್ನಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ನಿಮ್ಮ ಕೆಲಸವನ್ನು ಕಳೆದುಕೊಂಡ ಅಥವಾ ಕಂಪನಿಯಲ್ಲಿ ಕೆಲಸದಿಂದ ವಜಾಗೊಳಿಸಿದ ಸಂದರ್ಭಗಳಲ್ಲಿಯೂ ಕೂಡ ವಿಮಾ ರಕ್ಷಣೆ ಪಡೆಯಬಹುದು.


ಇದನ್ನು ಓದಿ- Covid-19 ಚಿಕಿತ್ಸೆಯಲ್ಲಿಯೂ ಸಹಕಾರಿಯಾಗಲಿದೆ ಸರ್ಕಾರದ ಈ ವಿಮೆ


ಈ ಉತ್ಪನ್ನಗಳ ಮೂಲಕ ವಿಮಾ ಕಂಪನಿಗಳು ಗ್ರಾಹಕರ ಮೂರು ತಿಂಗಳ EMI ಹಣವನ್ನು ಪಾವತಿಸಲಿವೆ. ಕೊರೊನಾ ಬಳಿಕ ನೌಕರಿಗೆ ಸಂಬಂಧಿಸಿದ ಜನರಲ್ಲಿ ತುಂಬಾ ಅನಿಶ್ಚಿತತೆಯ ವಾತಾವರಣ ನಿರ್ಮಾಣಗೊಂಡಿದೆ. ಪಾಲಸಿ ಪಡೆದ ಮೂರು ತಿಂಗಳುಗಳ ಬಳಿಕ ನೌಕರಿ ಕಳೆದುಕೊಂಡ ವಿಮಾ ರಕ್ಷಣೆ ಸಿಗುತ್ತದೆ. ಆದರೆ. VRS ಪಡೆದರೆ ಅಥವಾ ಕಂಪನಿಯಲ್ಲಿ ಅವ್ಯವಹಾರ ಮಾಡಿದ್ದಕ್ಕಾಗಿ ಕೆಲಸದಿಂದ ವಜಾಗೊಂಡಿದ್ದರೆ, ಕ್ಲೇಮ್ ನೀಡಲಾಗುವುದಿಲ್ಲ. ಬಹುತೇಕ ಕಂಪನಿಗಳು3 ತಿಂಗಳ ಇಎಂಐ ಪಾವತಿಸುವ ರಕ್ಷಣೆ ನೀಡುತ್ತಿವೆ.


ಇದನ್ನು ಓದಿ- Health Insurance: ಎಲ್ಲಾ ವೈದ್ಯಕೀಯ ಸೌಲಭ್ಯ ಒದಗಿಸಲಿದೆ ಈ ವಿಮೆ


ಪ್ರೀಮಿಯಂ ಹಾಗೂ EMI ಪಾವತಿ 
ವಿಮಾ ಕಂಪನಿಗಳು 50 ಲಕ್ಷ ಸಾಲಕ್ಕೆ 25 ಸಾವಿರ ಇಎಂಐಗೆ 75,000 ಪಾವತಿಸುತ್ತವೆ. ಇಂತಹ ಪಾಲಿಸಿಯ ಪ್ರೀಮಿಯಂ 8 ರಿಂದ 10 ಸಾವಿರ ರೂಪಾಯಿಗಳಾಗಿರುತ್ತದೆ. ಕ್ರಿಟಿಕಲ್ ಇಲ್ನೆಸ್ ರೈಡರ್,  ಜಾಬ್ ಲಾಸ್ ಇನ್ಶುರೆನ್ಸ್‌ನಲ್ಲೂ ಇದೆ.