Akshaya Tritiya 2023: ಭಾರತವು ಚಿನ್ನವನ್ನು ಆಮದು ಮಾಡಿಕೊಳ್ಳುವ ಅತಿದೊಡ್ಡ ದೇಶವಾಗಿದೆ. ಇದು ಆಭರಣ ಉದ್ಯಮವನ್ನು ಅಭಿವೃದ್ಧಿ ಮಾಡಲು ಪ್ರೋತ್ಸಾಹ ನೀಡುವಂತಾಗುತ್ತದೆ. ಏಪ್ರಿಲ್ 2022 ರಿಂದ ಫೆಬ್ರವರಿ 2023 ರ ಅವಧಿಯಲ್ಲಿ, ಭಾರತದಲ್ಲಿ ಚಿನ್ನ ಆಮದು $ 31.8 ಬಿಲಿಯನ್ ಆಗಿತ್ತು. ಇನ್ನು ಹಬ್ಬಗಳು ಬಂತೆಂದರೆ ಸಾಕು ಜನರು ಚಿನ್ನವನ್ನು ಖರೀದಿಸಲು ಮುಂದಾಗುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು 


ಭಾರತದಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಇದಕ್ಕೂ ಮುನ್ನವೇ ಅನೇಕರು ಚಿನ್ನ ಖರೀದಿಸಲು ಮುಂದಾಗಿದ್ದಾರೆ.


ಅಕ್ಷಯ ತೃತೀಯ ಬಂತೆಂದರೆ ಸಾಕು ಭಾರತದಲ್ಲಿ ಆಭರಣ ಉದ್ಯಮಕ್ಕೆ ಸಖತ್ ಸೀಸನ್ ಶುರುವಾಗುತ್ತದೆ. ಅಕ್ಷಯ ತೃತೀಯವನ್ನು ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು, ಚಿನ್ನವನ್ನು ಖರೀದಿಸಲು ಮತ್ತು ಆಸ್ತಿಯಲ್ಲಿ ಹೂಡಿಕೆ ಮಾಡಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆದರೆ ಅಂತಹ ಸಂದರ್ಭಗಳಲ್ಲಿ, ಜನರು ಚಿನ್ನವನ್ನು ಖರೀದಿಸುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ವಂಚನೆ ಮಾಡುವ ಸಂಭವವಿರುತ್ತದೆ. ಚಿನ್ನದಂತೆ ಕಾಣುವ ಲೋಹದ ವಸ್ತುಗಳನ್ನು ನಕಲಿ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ನಕಲಿ ಬದಲಾವಣೆ ಹಬ್ಬದ ದಿನವೇ ಜನರ ಜೇಬಿಗೆ ಕತ್ತರಿ ಹಾಕಬಹುದು. ಹೀಗಾಗಿ ಚಿನ್ನವನ್ನು ಖರೀದಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.


BIS ಮಾರ್ಕ್:


BIS ಹಾಲ್‌ಮಾರ್ಕ್ ಹೊಂದಿರುವ ಚಿನ್ನದ ಆಭರಣಗಳು BIS ಲೋಗೋವನ್ನು ಹೊಂದಿರುತ್ತದೆ. ಇದು ಉತ್ಪನ್ನದ ಶುದ್ಧತೆಯನ್ನು BIS ಅಧಿಕೃತ ಪ್ರಯೋಗಾಲಯಗಳು ಪರಿಶೀಲಿಸಿವೆ ಎಂಬುದನ್ನು ಸೂಚಿಸುತ್ತದೆ. ಗ್ರಾಹಕರು ಈ ಲೋಗೋವನ್ನು ಯಾವುದೇ ಚಿನ್ನ ಅಥವಾ ಬೆಳ್ಳಿಯ ಆಭರಣಗಳು ಮತ್ತು ನಾಣ್ಯದಲ್ಲಿ ಗುರುತಿಸಬಹುದು. BIS ಭಾರತದ ಏಕೈಕ ಸಂಸ್ಥೆಯಾಗಿದ್ದು, ಚಿನ್ನದ ವಸ್ತುಗಳನ್ನು, ಅವುಗಳ ಶುದ್ಧತೆಯನ್ನು ಪ್ರಮಾಣೀಕರಿಸಲು ಹಾಲ್‌ ಮಾರ್ಕ್ ಮಾಡಲು ಅಧಿಕೃತ ಅನುಮೋದನೆಯನ್ನು ಪಡೆದಿದೆ.


ಕ್ಯಾರೆಟ್:


ಆಭರಣಗಳಲ್ಲಿ ಶುದ್ಧ ಚಿನ್ನವನ್ನು ದೃಢೀಕರಿಸುವ ಎರಡನೇ ಗುರುತು ಸೂಕ್ಷ್ಮತೆ ಸಂಖ್ಯೆ ಮತ್ತು ಕ್ಯಾರೆಟ್ ಆಗಿದೆ. 24K ಚಿನ್ನವು ತುಂಬಾ ಮೃದುವಾಗಿರುತ್ತದೆ ಮತ್ತು ಅವುಗಳನ್ನು ಆಭರಣಗಳಿಗೆ ಬಳಸಬಹುದಾಗಿದೆ. ಆಭರಣಗಳಲ್ಲಿ ಚಿನ್ನದ ಶುದ್ಧತೆಯನ್ನು ನಿರ್ಧರಿಸುವ ಮತ್ತೊಂದು ತಂತ್ರವೆಂದರೆ ಶುದ್ಧತೆಯ ಸಂಖ್ಯೆಯನ್ನು ಬಳಸುವುದು. ಇದು ಶುದ್ಧತೆಯನ್ನು ಪ್ರತಿ ಸಾವಿರಕ್ಕೆ ಅಳೆಯುತ್ತದೆ. ಇದು ಕೇವಲ 22 ಕ್ಯಾರೆಟ್ ಚಿನ್ನಕ್ಕೆ ಮತ್ತೊಂದು ಪದವಾಗಿದೆ. ಉದಾಹರಣೆಗೆ, 22 ಕ್ಯಾರೆಟ್ ಚಿನ್ನವು 100 ಗ್ರಾಂ ತೂಕವಿದ್ದರೆ, ಅದು 100 ಗ್ರಾಂ ಮಿಶ್ರಲೋಹಕ್ಕೆ 91.6 ಗ್ರಾಂ ಶುದ್ಧ ಚಿನ್ನವನ್ನು ಹೊಂದಿರುತ್ತದೆ.


ಇದನ್ನೂ ಓದಿ: IPL 2023 ಮಧ್ಯೆ ಮತ್ತೆ ಕೇಳಿಬಂತು ಬೆಟ್ಟಿಂಗ್ ದಂಧೆ! ಈ ದಿಗ್ಗಜ ಕ್ರಿಕೆಟಿಗ ಶಾಮೀಲು!


HUID:


ಆಭರಣವನ್ನು ಹಾಲ್‌ ಮಾರ್ಕಿಂಗ್ ಕೇಂದ್ರದಲ್ಲಿ ಹಸ್ತಚಾಲಿತವಾಗಿ ವಿಶಿಷ್ಟ ಸಂಖ್ಯೆಯೊಂದಿಗೆ ಸ್ಟ್ಯಾಂಪ್ ಮಾಡಲಾಗುತ್ತದೆ. HUID ಪ್ರತಿ ಆಭರಣಕ್ಕೂ ವಿಶಿಷ್ಟವಾದ ಗುರುತನ್ನು ನೀಡುತ್ತದೆ. ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಹಾಲ್‌ಮಾರ್ಕಿಂಗ್‌’ನ ವಿಶ್ವಾಸಾರ್ಹತೆ ಮತ್ತು ಹಾಲ್‌’ಮಾರ್ಕ್ ಮಾಡಿದ ಆಭರಣಗಳ ಶುದ್ಧತೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವುದು ಮುಖ್ಯವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.